ಬೆಂಗಳೂರು: ಕಾಂಗ್ರೆಸ್ (Congress) ಪಕ್ಷಕ್ಕೆ ಮಾಡುವುದಕ್ಕೆ ಕೆಲಸ ಇಲ್ಲ. ಫೇಕ್ ಇಶ್ಯು ಕ್ರಿಯೇಟ್ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಸಂಸದ ತೇಜಸ್ವಿ ಸೂರ್ಯ (Tejasvi Surya) ಕಿಡಿಕಾರಿದ್ದಾರೆ.
ಹೋಟೆಲಿನಲ್ಲಿ ದೋಸೆ ಸವಿಯುತ್ತಿರುವ ವೀಡಿಯೋ ವೈರಲ್ ಆದ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಸದರು, ನನ್ನ ಕ್ಷೇತ್ರದಲ್ಲಿ ಬೊಮ್ಮನಹಳ್ಳಿಯಲ್ಲಿ ಮಾತ್ರ ಸ್ವಲ್ಪ ಮಳೆ (Rain) ಸಮಸ್ಯೆ ಆಗಿದೆ. ಬೇರೆ ಕ್ಷೇತ್ರದಲ್ಲಿ ಜನ ಜೀವನ ಯಥಾಸ್ಥಿತಿ ನಡೆದುಕೊಂಡು ಬರುತ್ತಿದೆ. ನಾನು ನನ್ನ ಕ್ಷೇತ್ರದಲ್ಲಿ ದೋಸೆ ಅಂಗಡಿ ಉದ್ಘಾಟನೆ ಮಾಡಿದೆ. ನನ್ನ ಕ್ಷೇತ್ರದಲ್ಲಿ ಇರುವ ಅಂಗಡಿ ಉದ್ಘಾಟನೆ ನನ್ನ ಕರ್ತವ್ಯ, ಅದನ್ನು ನಿರ್ವಹಣೆ ಮಾಡಿರುವುದಾಗಿ ತಿಳಿಸಿದರು.
Advertisement
Meanwhile Bengaluru MP @Tejasvi_Surya https://t.co/dVPkpRcM0U pic.twitter.com/SH2ORKn0LT
— Ramya/Divya Spandana (@divyaspandana) September 6, 2022
Advertisement
ನಮ್ಮ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ಬಸ್ ಉದ್ಘಾಟನೆ ಇತ್ತು ಅಂದ್ರೆ ಅದಕ್ಕೂ ಹೋಗ್ತೀವಿ. ದೋಸೆ ಅಂಗಡಿ ಉದ್ಘಾಟನೆಗೆ ಕರೆಯುತ್ತಾರೆ. ಅದಕ್ಕೂ ಹೋಗ್ತೀವಿ, ಗಣಪತಿ ಇಟ್ಟಿದ್ರೆ ಅಲ್ಲಿಗೂ ಹೋಗ್ತೀವಿ. ಒಬ್ಬ ಜನ ಪ್ರತಿನಿಧಿಯಾಗಿ ನಾನು ಮಾಡುವ ಕೆಲಸ ಮಾಡುತ್ತಿದ್ದೇನೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ರಾಜಕಾಲುವೆ ಒತ್ತುವರಿ ಬಗ್ಗೆ ಬಿಗ್ ಬುಲೆಟಿನ್‍ನಲ್ಲಿ ಪ್ರಸ್ತಾಪ – ಸಿದ್ದರಾಮಯ್ಯ ಪ್ರಶಂಸೆ
Advertisement
ಸಂಸದ @Tejasvi_Surya ಅವರನ್ನು ಸಂಸದರನ್ನಾಗಿಸಿದ್ದು, ಆಡುವ ಮಕ್ಕಳನ್ನು ಶಾಲೆಗೆ ಸೇರಿಸಿದಂತಾಗಿದೆ!
ಹಿಂದೆ ಕೋವಿಡ್ ಕಾಲದಲ್ಲಿ ಫುಟ್ಬಾಲ್ ಆಡಲು ಹೋಗಿದ್ದರು, ಅತಿವೃಷ್ಟಿಯ ಕಾಲದಲ್ಲಿ ದೋಸೆ ತಿನ್ನಲು ಹೋಗಿದ್ದಾರೆ.
ಕೆಲಸಕ್ಕೆ ಕರೆಯಬೇಡಿ, ದೋಸೆ ತಿನ್ನೋಕೆ ಕರೆಯೋದು ಮರೆಯಬೇಡಿ ಎಂಬುದು ಇವರ ಮನವಿ!#MissingMinisters#BJPBrashtotsava pic.twitter.com/gSoJ4eDK5s
— Karnataka Congress (@INCKarnataka) September 7, 2022
Advertisement
ಏನಿದು ದೋಸೆ ವಿವಾದ..?: ಬೆಂಗಳೂರಿನಲ್ಲಿ ಮಳೆ ಹಾನಿಯಿಂದ ಜನರ ಪರದಾಡುತ್ತಿದ್ದರೆ ಸಂಸದರು ಹೋಟೆಲ್‍ನಲ್ಲಿ ದೋಸೆ ತಿನ್ನುವುದರಲ್ಲಿ ಬ್ಯುಸಿಯಾಗಿದ್ದಾರೆ ಅಂತ ವೀಡಿಯೋ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಅಲ್ಲದೆ ವಿರೋಧ ಪಕ್ಷಗಳು ಸಂಸದರ ವಿರುದ್ಧ ವಾಗ್ದಾಳಿಗಳನ್ನು ನಡೆಸಿದ್ದರು. ಇದನ್ನೂ ಓದಿ: ಮಿಸ್ಸಿಂಗ್ ಮಿನಿಸ್ಟರ್ಸ್ – ಬೆಂಗಳೂರು ಮಂತ್ರಿ, ಸಂಸದರ ವಿರುದ್ಧ ಕಾಂಗ್ರೆಸ್ ಕಿಡಿ