ರಾಜಕಾಲುವೆ ಒತ್ತುವರಿ ಬಗ್ಗೆ ಬಿಗ್ ಬುಲೆಟಿನ್‍ನಲ್ಲಿ ಪ್ರಸ್ತಾಪ – ಸಿದ್ದರಾಮಯ್ಯ ಪ್ರಶಂಸೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ವಿಪಕ್ಷನಾಯಕ ಸಿದ್ದರಾಮಯ್ಯ (Siddaramaiah) ಅವರು ಇಂದು ಪಬ್ಲಿಕ್ ಟಿವಿ ವರದಿಗೆ ಪ್ರಶಂಸೆ ವ್ಯಕ್ತಪಡಿಸಿದರು.
ಮಂಗಳವಾರ ಬಿಗ್ ಬುಲೆಟಿನ್ (Big Bulletin) ನಲ್ಲಿ ಪಬ್ಲಿಕ್ ಟಿವಿ (PUBLiC TV) ಮುಖ್ಯಸ್ಥ ಹೆಚ್.ಆರ್ ರಂಗನಾಥ್ (H R Ranganath) ಅವರು ರಾಜಕಾಲುವೆ ಒತ್ತುವರಿ ಬಗ್ಗೆ ಪ್ರಸ್ತಾಪ ಮಾಡಿದ್ದಕ್ಕೆ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಳೆ ಹಾನಿ ಪ್ರದೇಶಗಳ ವೀಕ್ಷೆಯ ಬಳಿಕ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ರಂಗನಾಥ್ ಅವರು ಹೇಳಿದ ಮಾತುಗಳನ್ನು ಪ್ರಸ್ತಾಪ ಮಾಡಿದರು. ಅಲ್ಲದೆ ಪಬ್ಲಿಕ್ ಟಿವಿ ಲೋಗೋ ಹುಡುಕಿ ಶಹಬ್ಬಾಸ್ ಗಿರಿ ನೀಡಿದರು. ಇದನ್ನೂ ಓದಿ: ಅನೇಕ ಬಡಾವಣೆಗಳಿಗೆ ಬೋಟ್‍ನಲ್ಲಿ ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ: ಸಿದ್ದರಾಮಯ್ಯ
ಹೆಚ್. ಆರ್ ರಂಗನಾಥ್ ಹೇಳಿದ್ದೇನು..?: ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗ ಒಂದು ಕೆಲಸ ಆಗಿತ್ತು. ಬೆಂಗಳೂರಿನಲ್ಲಿ ಒಂದು ರಾಜಕಾಲುವೆ ಲೆಕ್ಕಾಚಾರ 800 ಕಿ.ಮೀ. ಇದರಲ್ಲಿ 3 ಅಥವಾ 4 ವರ್ಷದ ದೀರ್ಘಾವಧಿ ಪ್ಲಾನ್ ಒಂದನ್ನು ಆಗ ಮಾಡಲಾಯಿತು. ಅದಕ್ಕೆ ಹಣವನ್ನೂ ಇಟ್ಟುಕೊಂಡರು. ಯಾಕೆಂದರೆ ಟೆಂಡರ್ ಗಳು ಸಾಮಾನ್ಯವಾಗಿ 6 ತಿಂಗಳು ಅಥವಾ 1 ವರ್ಷ ತೆಗೆದುಕೊಳ್ಳುತ್ತವೆ.
ಅದರಲ್ಲಿ 300-350 ಕಿ.ಮೀ ಹೆಚ್ಚು ಕಮ್ಮಿ ಮುಗಿಸಿಕೊಂಡು ಬರ್ತಾ ಇದ್ದರು. ಬಿಜೆಪಿ ಸರ್ಕಾರ ಬಂದಾಗ ಅದನ್ನು ಮುಂದುವರಿಸಿಕೊಂಡು ಹೋಗಬೇಕಿತ್ತು. ಅದನ್ನು ಈ ಸರ್ಕಾರ ಮಾಡಿಲ್ಲ ಅನ್ನೋ ಅನುಮಾನ ಮೂಡಿದೆ. ಆ ಹಣ ಎಲ್ಲೋ ಒಂದು ಕಡೆ ಡೈವರ್ಟ್ ಆಗಿದೆ ಎಂದು ಆರೋಪದ ಅಭಿಪ್ರಾಯ ನನ್ನದು. ಇದನ್ನು ದಾಖಲೆಯೊಂದಿಗೆ ಮತ್ತೆ ಮಾತನಾಡುವುದಾಗಿ ಹೇಳಿದ್ದರು.