ಬೆಂಗಳೂರು: ಈ ಬಾರಿ ಚುನಾವಣೆಯಲ್ಲಿ (Election) ಭರ್ಜರಿ ಉಚಿತ ಭಾಗ್ಯಕ್ಕೆ ಮೊರೆ ಹೋಗಲು ಕಾಂಗ್ರೆಸ್ (Congress) ಮುಂದಾದಂತೆ ಕಾಣುತ್ತಿದೆ. ಇದಕ್ಕೆ ಖಜಾನೆಗೆ ಬೇಕಾಗುವ ಅಪಾರ ಮೊತ್ತದ ಹಣವನ್ನು ಕಾಂಗ್ರೆಸ್‌ನಿಂದ ಹೊಂದಿಸಲು ಸಾಧ್ಯವಾಗುತ್ತದೆಯೇ ಎಂಬುದು ಪ್ರಶ್ನೆಯಾಗಿದೆ.
ರಾಜ್ಯ ಕಾಂಗ್ರೆಸ್ ನಾಯಕರು ಉಚಿತ ಭಾಗ್ಯಗಳ ಘೋಷಣೆ ಮೂಲಕ ಮತದಾರರ ಮನ ಗೆಲ್ಲಲು ಮುಂದಾಗಿದ್ದಾರೆ. ಚುನಾವಣಾ ಪ್ರಣಾಳಿಕೆ ಬಿಡುಗಡೆಗೆ ಮುನ್ನವೇ ಎರಡು ಉಚಿತ ಭಾಗ್ಯ ಘೋಷಣೆ ಮಾಡಿರುವ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇನ್ನಷ್ಟು ಉಚಿತ ಭಾಗ್ಯ ಘೋಷಣೆ ಮಾಡುವ ಸಾಧ್ಯತೆಯು ಇದೆ.
Advertisement
Advertisement
ಈಗಾಗಲೇ ಗೃಹಲಕ್ಷ್ಮಿ ಯೋಜನೆ ಜಾರಿ ಭರವಸೆ ನೀಡಿ ಹೆಣ್ಣು ಮಕ್ಕಳಿಗೆ 2,000 ಮಾಸಾಶನದ ಘೋಷಣೆ ಮಾಡಲಾಗಿದೆ. ಇನ್ನೊಂದು ಕಡೆ 200 ಯೂನಿಟ್ ಉಚಿತ ವಿದ್ಯುತ್ತಿನ ಘೋಷಣೆ ಸಹ ಮಾಡಲಾಗಿದೆ. ಕುಟುಂಬದ ಯಜಮಾನಿಗೆ 2,000 ರೂ. ಪ್ರತಿತಿಂಗಳು ಕೊಟ್ಟರೆ ವಾರ್ಷಿಕ 24,000 ರೂ. ಆಗುತ್ತದೆ. ಒಂದೂವರೆ ಕೋಟಿಯಷ್ಟಿರುವ ಮಹಿಳೆಯರಿಗೆ ಕಾಂಗ್ರೆಸ್ ಯೋಜನೆ ಜಾರಿಯಾದರೆ, ತಿಂಗಳಿಗೆ 3,000 ಕೋಟಿ ರೂ. ಬೇಕು. ಅಂದರೆ ವಾರ್ಷಿಕ 36,000 ಕೋಟಿ ರೂ. ಒಂದೊಂದೇ ಯೋಜನೆಗೆ ಬೇಕಾಗಲಿದೆ. ಇದನ್ನೂ ಓದಿ: ಎಸಿ ರೂಂನಲ್ಲಿ ನಾಯಿ ಸಾಕೋರಿಗೆ ಕಾಂಗ್ರೆಸ್ ಕರೆಂಟ್ ಉಚಿತ ನೀಡುತ್ತಿದೆ: ಸಿ.ಎಂ ಇಬ್ರಾಹಿಂ ಕಿಡಿ
Advertisement
ಈಗಾಗಲೇ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಲಾಗಿದೆ. ಅದು ಜಾರಿಯಾದರೆ ವಾರ್ಷಿಕ 9,000 ಕೋಟಿ ರೂ. ಬೇಕು ಎನ್ನಲಾಗುತ್ತಿದೆ. ಎರಡು ಯೋಜನೆಯೂ ಜಾರಿಯಾದರೆ ಸರ್ಕಾರ ವಾರ್ಷಿಕ 45,000 ಕೋಟಿ ರೂ. ಹಣವನ್ನು ಎರಡು ಉಚಿತ ಭಾಗ್ಯಗಳಿಗೆ ಮೀಸಲಿಡಬೇಕು.
Advertisement
ಇದರ ಮಧ್ಯೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 10 ಕೆ.ಜಿ ಉಚಿತ ಅಕ್ಕಿ ಪ್ರತಿ ಕುಟುಂಬಕ್ಕೆ ಕೊಡುವುದಾಗಿ ಸಿದ್ದರಾಮಯ್ಯ ಪದೇ ಪದೇ ಘೋಷಿಸುತ್ತಿದ್ದಾರೆ. ಕೇಂದ್ರದ 5 ಕೆ.ಜಿ ಬಿಟ್ಟು ರಾಜ್ಯ ಸರ್ಕಾರವೇ ಹೆಚ್ಚುವರಿ 5 ಕೆ.ಜಿ ಅಕ್ಕಿ ಪ್ರತಿ ಬಿಪಿಎಲ್ ಕುಟುಂಬಕ್ಕೆ ಕೊಡಬೇಕಾಗುತ್ತದೆ. ಅದರ ಜಾರಿಗೂ ಸಾವಿರಾರು ಕೋಟಿ ರೂ. ಪ್ರತಿವರ್ಷ ಮೀಸಲಿಡಲೇಬೇಕು. ಹೀಗೆ 3 ಯೋಜನೆಗೆ ವಾರ್ಷಿಕ 50 ಸಾವಿರ ಕೋಟಿ ರೂ. ದಾಟಿದರೆ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ಭಾರ ಹೆಚ್ಚುವುದು ಗ್ಯಾರಂಟಿ. ಇದನ್ನೂ ಓದಿ: ಜ.20ರಂದು ಬೆಂಗಳೂರಿನಲ್ಲಿ ಹಂಪಿ ಉತ್ಸವದ ಲೋಗೋ ಬಿಡುಗಡೆ: ಸಚಿವೆ ಶಶಿಕಲಾ ಜೊಲ್ಲೆ
ಇಷ್ಟೇ ಅಲ್ಲದೇ ಬೇರೆ ಬೇರೆ ಕ್ಷೇತ್ರಕ್ಕೆ ನೆರವು, ಜಾತಿವಾರು ಲೆಕ್ಕಾಚಾರದಲ್ಲಿ ಘೋಷಣೆ ಮಾಡಿದರೂ ಅಕಸ್ಮಾತ್ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೂ ಆರ್ಥಿಕ ಹೊರೆಯಂತು ವಿಪರೀತ ಅಗುವುದು ಗ್ಯಾರಂಟಿ. ಇದೆಲ್ಲ ಭರವಸೆಯನ್ನು ಹೇಳಿದಂತೆ ಯಥಾವತ್ತಾಗಿ ಜಾರಿ ಮಾಡಿದರೆ ಆರ್ಥಿಕ ಸಂಕಷ್ಟವನ್ನು ನಿವಾರಿಸಿಕೊಳ್ಳಲು ಬೇರೆ ಮಾರ್ಗವನ್ನು ಸರ್ಕಾರ ಕಂಡುಕೊಳ್ಳಲೇಬೇಕಾಗುತ್ತದೆ. ಅಲ್ಲದೇ ಬಿಪಿಎಲ್ ಕಾರ್ಡ್ ಬಳಕೆದಾರರು ಅಥವಾ ಬೇರೆ ಬೇರೆ ಮಾನದಂಡಗಳ ಮಿತಿ ಹಾಕಿ ಯೋಜನೆ ಜಾರಿಗೆ ಮುಂದಾದರೆ ಆರ್ಥಿಕ ಹೊರೆ ಕಡಿಮೆ ಆಗಬಹುದು. ಇಲ್ಲದಿದ್ದರೆ ಉಚಿತ ಭಾಗ್ಯದ ಭರವಸೆ ಈಡೇರಿಸಲು ಪಣ ತೊಟ್ಟರೆ ಅಭಿವೃದ್ಧಿ ಕಾರ್ಯವನ್ನು ಸರಿದೂಗಿಸುವ ಸವಾಲು ಎದುರಾಗಬಹುದು.
ಹೆಚ್ಚುವರಿ ಆದಾಯದ ಮೂಲ ಹುಡುಕಲು ಹೊರಟರೆ ಜನರಿಗೆ ತೆರಿಗೆಯ ಬರೆ ಬೀಳಬಹುದು. ಕಾಂಗ್ರೆಸ್ ನಾಯಕರ ಉಚಿತಗಳ ಭಾಗ್ಯಕ್ಕೆ ಹಣಕಾಸಿನ ಮೂಲ ಯಾವುದು ಎಂಬುದರ ಬಗ್ಗೆ ಯಾವುದೆ ಸ್ಪಷ್ಟತೆ ಇದ್ದಂತಿಲ್ಲ. ಏನಾದರಾಗಲಿ ನಾವು ಗೆಲ್ಲಲೇಬೇಕು. ಗೆದ್ದು ಸರ್ಕಾರ ಬಂದರೆ ಯೋಜನೆ ಜಾರಿ, ಹಣಕಾಸಿನ ಮೂಲದ ಬಗ್ಗೆ ಆನಂತರ ಯೋಚಿಸಿದರಾಯ್ತು ಎಂಬಂತಿದೆ ಕೈ ಪಾಳಯದ ಉಚಿತ ಭಾಗ್ಯ ಘೋಷಣೆ ಯೋಜನೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k