ಬೆಂಗಳೂರು: ಎಸ್‍ಆರ್ ಪಾಟೀಲ್ ನಿವೃತ್ತಿಯಿಂದ ತೆರವಾಗಿದ್ದ ಪರಿಷತ್ ವಿಪಕ್ಷ ನಾಯಕನ ಹುದ್ದೆಗೆ ಬಿ.ಕೆ ಹರಿಪ್ರಸಾದ್ ಅವರನ್ನು ಎಐಸಿಸಿ ನೇಮಿಸಿದೆ.
ಮೊನ್ನೆಯಷ್ಟೇ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಎಂ.ಬಿ ಪಾಟೀಲರನ್ನು ಎಐಸಿಸಿ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಈಗ ಮೂಲ ಕಾಂಗ್ರೆಸ್ ನಾಯಕ ಹರಿಪ್ರಸಾದ್ ಅವರನ್ನು ಹೈಕಮಾಂಡ್ ಆಯ್ಕೆ ಮಾಡಿದೆ. ಇದನ್ನೂ ಓದಿ: ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದ ಕೇರಳ ಸಚಿವ – ರಾಜೀನಾಮೆಗೆ ಬಿಜೆಪಿ ಆಗ್ರಹ
Advertisement
Advertisement
ವಿಪಕ್ಷ ಉಪ ನಾಯಕರಾಗಿ ಕೆ.ಗೋವಿಂದರಾಜ್ ಆಯ್ಕೆ ಆಗಿದ್ದಾರೆ. ಚೀಫ್ ವಿಪ್ ಆಗಿ ಪ್ರಕಾಶ್ ರಾಥೋಡ್ ನೇಮಕವಾಗಿದ್ದಾರೆ. ಬಿ.ಕೆ ಹರಿಪ್ರಸಾದ್ ನೇಮಕ ಮೂಲಕ ಸಿದ್ದರಾಮಯ್ಯಗೆ ಮೂಲ ಕಾಂಗ್ರೆಸ್ಸಿಗರು ಟಕ್ಕರ್ ಕೊಟ್ಟಿದ್ದಾರೆ. ಇದನ್ನೂ ಓದಿ: ಕೂದಲು ರಫ್ತಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ
Advertisement
ಈ ಸ್ಥಾನಕ್ಕೆ ಸಿಎಂ ಇಬ್ರಾಹಿಂ ಪರ ಸಿದ್ದರಾಮಯ್ಯ ಲಾಬಿ ಮಾಡಿದ್ದರು. ಆದರೆ ಡಿಕೆಶಿ ಸೇರಿದಂತೆ ಹಲವು ಹಿರಿಯ ನಾಯಕರು ಬಿ.ಕೆ ಹರಿಪ್ರಸಾದ್ ಪರವಾಗಿ ಲಾಬಿ ಮಾಡಿದ್ದರು. ಎಂ.ಬಿ ಪಾಟೀಲ್‍ರನ್ನು ಪ್ರಚಾರ ಸಮಿತಿ ಅಧ್ಯಕ್ಷರಾಗಿಸಿ ಡಿಕೆಶಿಗೆ ಟಕ್ಕರ್ ನೀಡಿದ್ದ ಸಿದ್ದರಾಮಯ್ಯಗೆ ಈಗ ಮೂಲ ಕಾಂಗ್ರೆಸ್ಸಿಗರು ಟಕ್ಕರ್ ನೀಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ.