ಮುಂಬೈ: ಭಾರತ ಟಿ20 ವಿಶ್ವಕಪ್ ತಂಡದ ಮೆಂಟರ್ ಆಗಿ ಆಯ್ಕೆಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಸ್ವಹಿತಾಸಕ್ತಿ ದೂರು ದಾಖಲಾಗಿದೆ.
Advertisement
ಬಿಸಿಸಿಐ ಟಿ20 ವಿಶ್ವಕಪ್‍ಗಾಗಿ ಭಾರತ ತಂಡವನ್ನು ಆಯ್ಕೆ ಮಾಡುವ ಜೊತೆ ಮೆಂಟರ್ ಆಗಿ ಧೋನಿಯನ್ನು ಆಯ್ಕೆ ಮಾಡಲಾಗಿತ್ತು. ಈ ಬಗ್ಗೆ ಆಕ್ಷೇಪ ಎತ್ತಿರುವ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಸದಸ್ಯ ಸಂಜೀವ್ ಗುಪ್ತಾ, ಬಿಸಿಸಿಐ ಅಪೆಕ್ಸ್ ಕೌನ್ಸಿಲ್‍ಗೆ ಧೋನಿ ನೇಮಕಾತಿ ಸ್ವಹಿತಾಸಕ್ತಿ ಸಂಘರ್ಷ ನಿಯಮಾವಳಿಯ ಉಲ್ಲಂಘನೆಯಾಗಿದೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ. ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಿದ ಸಿಎಂ
Advertisement
Advertisement
ಲೋಧಾ ಸಮಿತಿಯ ಸ್ವಹಿತಾಸಕ್ತಿ ಸಂಘರ್ಷ ನಿಯಮದ ಪ್ರಕಾರ ಒಬ್ಬರು ಒಂದೇ ಹುದ್ದೆ ಹೊಂದಿರಬೇಕು. ಆದರೆ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿದ್ದಾರೆ. ಹೀಗಿದ್ದಾಗ ಟಿ20 ವಿಶ್ವಕಪ್ ತಂಡಕ್ಕೆ ಮೆಂಟರ್ ಸ್ಥಾನ ನೀಡಿದ್ದಲ್ಲಿ ಅವರು 2 ಹುದ್ದೆಯನ್ನು ಹೊಂದಿದಂತಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಐದನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಬಿಗ್ ರಿಲೀಫ್
Advertisement
.@SGanguly99, President, BCCI is delighted with the move to have @msdhoni on board as #TeamIndia mentor for the #T20WorldCup ???? ???? pic.twitter.com/9Ec4xdhj5d
— BCCI (@BCCI) September 9, 2021
ಬಿಸಿಸಿಐ ಮೂಲಗಳ ಪ್ರಕಾರ ಈ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಿದೆ. ಧೋನಿ ಮೆಂಟರ್ ಆಗಿದ್ದರು ಆಡುವ ಬಳಗದ ಆಯ್ಕೆಯಲ್ಲಿ ಅವರ ಪಾತ್ರ ಇರುವುದಿಲ್ಲ ಮತ್ತು ಈ ಬಾರಿಯ ಐಪಿಎಲ್ ಬಳಿಕ ಅವರ ನಿರ್ಧಾರ ಸ್ಪಷ್ಟವಾಗಲಿದೆ. ಹಾಗಾಗಿ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿಲ್ಲ ಎಂದು ಬಿಸಿಸಿಐ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿಯಾಗಿದೆ.