ಬೆಂಗಳೂರು: ಮೂಲಭೂತ ಸಮಸ್ಯೆಗಳಿಂದ ಬೆಂಗಳೂರಿನ ಹಲವು ಸಂಸ್ಥೆಗಳು ಬೇರೆ ಕಡೆ ಹೋಗುತ್ತಿವೆ ಎಂಬ ಆರೋಪ ಕೇಳಿ ಬಂದಿದ್ದವು. ಇದಕ್ಕೆ ಪ್ರತಿಯಾಗಿ ತೆಲಂಗಾಣ ಸಚಿವ ಕೆಟಿಆರ್ ಕೂಡ ಟ್ವೀಟ್ ಮಾಡಿ ಹೈದರಾಬಾದ್‍ಗೆ ಐಟಿ ಕಂಪನಿಯನ್ನು ಆಹ್ವಾನಿಸಿದ್ದರು. ಇದಕ್ಕೆ ಕೆಪಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದರು. ಇದೀಗ ಬಿಜೆಪಿ ನಾಯಕರು ತೆಲಂಗಾಣಕ್ಕೆ ತಿರುಗೇಟು ನೀಡಿದ್ದಾರೆ.
ಆರಂಭವಾಗಿದ್ದು ಹೇಗೆ?:
ಧರ್ಮ ಸಂಘರ್ಷದ ನಡುವೆ ಅಭಿವೃದ್ಧಿ ಮರೀಚಿಕೆ ಆಗಿರುವ ಬೆಂಗಳೂರಿಂದ ಹಲವು ಸಂಸ್ಥೆಗಳು ಬೇರೆ ಕಡೆ ಹೋಗುತ್ತಿವೆ ಎಂಬ ಆಪಾದನೆ ಇತ್ತೀಚಿಗಷ್ಟೇ ಕೇಳಿಬಂದಿತ್ತು. ಇದಕ್ಕೆ ಪೂರಕವಾದ ಬೆಳವಣಿಗೆಗಳು ನಡೆಯುತ್ತಿವೆ. ಬೆಂಗಳೂರಿನ ಕೋರಮಂಗಲದ ಸ್ಟಾರ್ಟ್ ಅಪ್ ಕಂಪನಿ ಖಾತಾಬುಕ್ ಸಂಸ್ಥಾಪಕ ರವೀಶ್ ನರೇಶ್, ಐದು ದಿನಗಳ ಹಿಂದೆ ಟ್ವೀಟ್ ಮಾಡಿ, ರಸ್ತೆ, ನೀರು, ಟ್ರಾಫಿಕ್ ಸೇರಿ ಬೆಂಗಳೂರಿನ ಮೂಲಭೂತ ಸಮಸ್ಯೆಗಳ ಬಗ್ಗೆ ಗೋಳು ಹೇಳಿಕೊಂಡು ಪ್ರಧಾನಿ ಮೋದಿ, ರಾಜ್ಯ ಸರ್ಕಾರ, ಸಂಸದ ತೇಜಸ್ವಿ ಸೂರ್ಯಗೆ ಟ್ಯಾಗ್ ಮಾಡಿದ್ದರು.
Advertisement
Startups in HSR/Koramangala (India’s Sillicon Valley) are already generating billions of $ of taxes. Yet we have v bad roads, almost daily power cuts, poor quality water supply, unusable foot paths. Many rural areas now have better basic infra than India’s Sillicon Valley
— ravishnaresh.eth (@ravishnaresh) March 30, 2022
ಆದರೆ, ಇದಕ್ಕೆ ಇವರ್ಯಾರು ಸ್ಪಂದಿಸಿರಲಿಲ್ಲ. ಬದಲಾಗಿ ರವೀಶ್ ನರೇಶ್ ಟ್ವೀಟ್‍ಗೆ ಸ್ಪಂದಿಸಿದ ತೆಲಂಗಾಣ ಸಚಿವ ಕೆಟಿಆರ್, ನಮ್ಮ ಹೈದರಾಬಾದ್‍ಗೆ ಬನ್ನಿ ಎಂದು ಕೆಂಪು ಹಾಸು ಹಾಸಿದ್ದರು. ಆಗಲೂ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ.
Advertisement
Pack your bags & move to Hyderabad! We have better physical infrastructure & equally good social infrastructure. Our airport is 1 of the best & getting in & out of city is a breeze
More importantly our Govt’s focus is on 3 i Mantra; innovation, infrastructure & inclusive growth https://t.co/RPVALrl0QB
— KTR (@KTRTRS) March 31, 2022
ಈ ಟ್ವೀಟ್‍ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ನಿಮ್ಮ ಚಾಲೆಂಜ್ ಸ್ವೀಕರಿಸುತ್ತೇನೆ. 2023ಕ್ಕೆ ನಮ್ಮದೇ ಸರ್ಕಾರ ಬರುತ್ತದೆ. ಆಗ ಬೆಂಗಳೂರನ್ನು ಮತ್ತೊಮ್ಮೆ ಉತ್ತಮ ನಗರಿಯನ್ನಾಗಿ ರೂಪಿಸ್ತೇನೆ ಎಂದು ಕೆಟಿಆರ್‌ಗೆ ರೀಟ್ವೀಟ್ ಮಾಡಿದರು.
Advertisement
ಇದಕ್ಕೆ ರಿಯಾಕ್ಷನ್ ನೀಡಿದ ಕೆಟಿಆರ್, ನಿಮ್ ರಾಜ್ಯದ ರಾಜಕೀಯ ನಂಗೊತ್ತಿಲ್ಲ. ನಿಮ್ ಪಕ್ಷ ಗೆಲ್ಲುತ್ತೋ ಇಲ್ವೋ ಅನ್ನೋದು ಗೊತ್ತಿಲ್ಲ. ಆದರೆ, ನಿಮ್ಮ ಚಾಲೆಂಜ್ ಅನ್ನು ನಾನು ತೆಗೆದುಕೊಳ್ತೇನೆ. ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಸೃಷ್ಟಿಯಲ್ಲಿ ಕರ್ನಾಟಕ – ತೆಲಂಗಾಣ ನಡುವೆ ಆರೋಗ್ಯಕರ ಪೈಪೋಟಿ ನಡೆಯಲಿ ಎಂದು ಟ್ವೀಟಿಸಿದ್ದಾರೆ. ಜೊತೆಗೆ ಹಲಾಲ್, ಹಿಜಬ್ ರಾಜಕೀಯ ಬೇಡ ಅಂತಾನೂ ಹೇಳಿದ್ದಾರೆ.
Advertisement
.@ktrtrs, my friend, I accept your challenge. By the end of 2023, with Congress back in power in Karnataka, we will restore the glory of Bengaluru as India’s best city. https://t.co/HFn8cQIlGS
— DK Shivakumar (@DKShivakumar) April 4, 2022
ಈಗ ಎಚ್ಚೆತ್ತ ಸಚಿವರಾದ ಅಶ್ವಥ್‍ನಾರಾಯಣ್ ಮತ್ತು ಸುಧಾಕರ್ ಟ್ವೀಟ್ ಮೂಲಕ ಕೆಟಿಆರ್, ಡಿಕೆಶಿ ವಿರುದ್ಧ ಹರಿಹಾಯ್ದಿದ್ದಾರೆ. ನಮ್ಮ ಬೆಂಗಳೂರು ಜೊತೆ ಸ್ಪರ್ಧಿಸಲು ಯಾವ ನಗರಕ್ಕೂ ಸಾಧ್ಯವಿಲ್ಲ ಎಂದಿದ್ದಾರೆ.
Karnataka is not in the rat race with other states. Our focus is to collaborate and compete at a global level. Unfortunately, some States are piggybacking on our journey in the name of ‘healthy competition’. We are on a marathon mission of building an #AatmaNirbharBharat. pic.twitter.com/4btD6QL9XA
— Dr. Ashwathnarayan C. N. (@drashwathcn) April 4, 2022
ಅಶ್ವಥ್ ನಾರಾಯಣ ಟ್ವೀಟ್ ಮಾಡಿ, ಕರ್ನಾಟಕ ಇತರ ರಾಜ್ಯಗಳೊಂದಿಗೆ ರೇಸ್‍ನಲ್ಲಿಲ್ಲ. ಜಾಗತಿಕ ಮಟ್ಟದಲ್ಲಿ ಸಹಕರಿಸುವುದು ಮತ್ತು ಸ್ಪರ್ಧಿಸುವುದು ನಮ್ಮ ಗಮನ. ದುರದೃಷ್ಟವಶಾತ್, ಕೆಲವು ರಾಜ್ಯಗಳು ಆರೋಗ್ಯಕರ ಸ್ಪರ್ಧೆಯ ಹೆಸರಿನಲ್ಲಿ ನಮ್ಮ ಪ್ರಯಾಣದಲ್ಲಿ ಪಿಗ್ಗಿಬ್ಯಾಕ್ ಮಾಡುತ್ತಿವೆ. ನಾವು ಆತ್ಮನಿರ್ಭರ ಭಾರತವನ್ನು ನಿರ್ಮಿಸುವ ಮ್ಯಾರಥಾನ್ ಕಾರ್ಯಾಚರಣೆಯಲ್ಲಿದ್ದೇವೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರಲ್ಲಿ ನಾನು ಮೊದಲಿಗ: ತಿಪ್ಪಾರೆಡ್ಡಿ
ಸುಧಾಕರ್ ಟ್ವೀಟ್ ಮಾಡಿ, ಬೆಂಗಳೂರಿನ ಸ್ಪರ್ಧೆಯು ಇತರ ಭಾರತೀಯ ನಗರಗಳು ಅಥವಾ ರಾಜ್ಯಗಳೊಂದಿಗೆ ಎಂದಿಗೂ ಇರಲಿಲ್ಲ ಎಂದು ನೀವು ತಿಳಿದಿರಬೇಕು. ನಮ್ಮ ಸ್ಪರ್ಧೆಯು ಸಿಲಿಕಾನ್ ವ್ಯಾಲಿ, ಸಿಂಗಾಪುರ್ ಮತ್ತು ಟೆಲ್ ಅವಿವ್‍ನೊಂದಿಗೆ ಇದೆ. ಬೆಂಗಳೂರಿನಲ್ಲಿರುವ ನಾವು ಬಹು ರಾಜ್ಯಗಳು ಮತ್ತು ದೇಶಗಳ ಜನರಿಗೆ ಹೆಮ್ಮೆಯ ಅತಿಥೇಯರು ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಬಿರ್ಭೂಮ್ ಹಿಂಸಾಚಾರ – ಮೃತರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ಕೊಟ್ಟ ಮಮತಾ ಬ್ಯಾನರ್ಜಿ
@ktrtrs garu – you should know that Bengaluru’s competition has never been with other Indian cities or states. Our competition is with the likes of Silicon Valley, Singapore, and Tel Aviv. We in Bangalore are proud hosts to people from multiple states and countries. @BSBommai https://t.co/m7cKqUUipg
— Dr Sudhakar K (@mla_sudhakar) April 4, 2022
ಮುಂದಿನ ಬಾರಿ ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ರಚಿಸಿದ ನಂತರ, ಹೈದರಾಬಾದ್ ಕೂಡ ಸ್ಟಾರ್ಟ್-ಅಪ್ ವಲಯದಲ್ಲಿ ಕ್ಷಿಪ್ರ ಬೆಳವಣಿಗೆಯನ್ನು ಕಾಣಲಿದೆ ಮತ್ತು ಆಲ್-ರೌಂಡ್ ಡಬಲ್ ಇಂಜಿನ್ ಬೆಳವಣಿಗೆಯ ನಿಜವಾದ ಫಲವನ್ನು ಅನುಭವಿಸುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಪ್ರತಿಕ್ರಿಯಿಸಿದ್ದಾರೆ.