ಬೆಂಗಳೂರು: ಮಹಿಳಾ ‘ಪೊಲೀಸ್’ ಎಂದು ಧಮ್ಕಿ ಹಾಕಿ ಮಹಿಳೆಯೊಬ್ಬಳು 100 ರೂಪಾಯಿಗೆ ಬಜ್ಜಿ ಬೊಂಡಾ ತಿಂದ ಪ್ರಸಂಗವೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
Advertisement
ಬ್ಯಾಟರಾಯನಪುರ (Byatarayanapura) ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಶೇಕ್ ಸಲಾಂ ಎಂಬವರು ಬಜ್ಜಿ ಅಂಗಡಿ ಇಟ್ಟುಕೊಂಡಿದ್ದಾರೆ. ಅಲ್ಲಿಗೆ ಬಂದ ಮಹಿಳೆಯೊಬ್ಬಳು, ತಾನು ಮಹಿಳಾ ಪೊಲೀಸ್ (Woman Police) ಎಂದು ಹೇಳಿ ಬಜ್ಜಿ ತಿಂದು ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದಳು. ಇದನ್ನೂ ಓದಿ: ಐಷಾರಾಮಿ ಕಾರುಗಳ ಹೆಸರಲ್ಲಿ ಸ್ಯಾಂಟ್ರೋ ರವಿಯಿಂದ ನಡೀತಿತ್ತು ಸುಂದರಿಯರ ಸೆಲೆಕ್ಷನ್..!
Advertisement
Advertisement
ಇತ್ತ ವ್ಯಾಪಾರಿ ಕೂಡ ಪೊಲೀಸ್ ಎಂಬ ಭಯಕ್ಕೆ ಪ್ರತಿ ನಿತ್ಯ ಬಜ್ಜಿ ನೀಡುತ್ತಿದ್ದರು. ಇತ್ತೀಚೆಗೆ ಕೂಡ ಅಂಗಡಿ ಬಳಿ ಬಂದಿದ್ದ ಮಹಿಳೆ, ಹೊಟ್ಟೆ ತುಂಬಾ ಬಜ್ಜಿ ತಿಂದು ಪಾರ್ಸೆಲ್ ತೆಗೆದುಕೊಂಡಿದ್ದಳು. ಈ ವೇಳೆ ವ್ಯಾಪಾರಿ, 100 ರೂಪಾಯಿ ಆಗುತ್ತೆ ಎಂದಿದಕ್ಕೆ ನಕಲಿ ಪೊಲೀಸ್ ಮತ್ತೆ ಧಮ್ಕಿ ಹಾಕಿದ್ದಾಳೆ. ನಾನು ಕೊಡಿಗೇಹಳ್ಳಿ ಪೊಲೀಸ್ ಬಂದಾಗಲೆಲ್ಲ ಬಜ್ಜಿ ಕೊಡಬೇಕು. ಇಲ್ಲದಿದ್ದಲ್ಲಿ ನಾಳೆಯಿಂದ ಅಂಗಡಿನ ಎತ್ತಂಗಡಿ ಮಾಡಿಸ್ತೀನಿ ಎಂದು ಅವಾಜ್ ಹಾಕಿದ್ದಾಳೆ.
Advertisement
ಈ ವೇಳೆ 112ಗೆ ಕರೆ ಮಾಡಿದ್ದ ವ್ಯಾಪಾರಿ, ತಕ್ಷಣ ತನ್ನ ಬೈಕ್ನಲ್ಲಿ ಮಹಿಳೆ ಪರಾರಿಯಾಗಿದ್ದಾಳೆ. ಪೊಲೀಸ್ ಹೆಸರಿಲ್ಲಿ ಬಜ್ಜಿ ಬಿಟ್ಟಿಯಾಗಿ ತಿನ್ನುತ್ತಿದ್ದ ಮಹಿಳೆಯ ವಿರುದ್ಧ ವ್ಯಾಪಾರಿ ಇದೀಗ ದೂರು ದಾಖಲಿಸಿದ್ದಾರೆ.
ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆ (Kodigehalli Police Station) ಯಲ್ಲಿ ದೂರು ದಾಖಲಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k