ಇಂದೋರ್: ಇತ್ತೀಚೆಗಷ್ಟೇ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಬಾಲಿವುಡ್ ನಟ ವಿಕ್ಕಿ ಕೌಶಲ್ ವಿರುದ್ಧ ಮಧ್ಯಪ್ರದೇಶದ ಇಂದೋರ್ ಮೂಲದ ವ್ಯಕ್ತಿ ಪ್ರಕರಣ ದಾಖಲಿಸಿದ್ದಾರೆ. ಫೋಟೋ ಹಾಗೂ ದಾಖಲೆ ಸಮೇತ ಕೇಸು ದಾಖಲಿಸಲಾಗಿದೆ.
ಸಿನಿಮಾವೊಂದರ ಶೂಟಿಂಗ್ನಲ್ಲಿ ವಿಕ್ಕಿ ಕೌಶಲ್ ಮತ್ತು ಸಾರಾ ಅಲಿಖಾನ್ ಅವರು ಬೈಕ್ನಲ್ಲಿ ಸಂಚರಿಸುತ್ತಿರುವ ಟೀಸರ್ ಬಿಡುಗಡೆಯಾಗಿತ್ತು. ಆದರೆ ಆ ಬೈಕ್ನಲ್ಲಿ ತನ್ನ ವಾಹನದ ನಂಬರ್ ಪ್ಲೇಟ್ ಅನ್ನು ತನ್ನ ಅನುಮತಿಯಿಲ್ಲದೆ ಅಕ್ರಮವಾಗಿ ಬಳಸಿಕೊಳ್ಳಲಾಗಿದೆ. ಇದು ಕಾನೂನು ಪ್ರಕಾರ ಅಪರಾಧವಾಗಿದೆ. ಆದ್ದರಿಂದ ಈ ವಿಚಾರವಾಗಿ ದೂರು ನೀಡಿದ್ದೇನೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇಂದೋರ್ನ ಬಂಗಾಂಗದ ಸಬ್ ಇನ್ಸ್ ಪೆಕ್ಟರ್ ಮಾತನಾಡಿ, ಈ ದೂರಿನ ಬಗ್ಗೆ ಸೂಕ್ತ ತನಿಖೆ ನಡೆಸುತ್ತೇವೆ. ನಂಬರ್ ಪ್ಲೇಟ್ ಅನ್ನು ಅಕ್ರಮವಾಗಿ ಬಳಸಲಾಗಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅನುಮತಿ ಇಲ್ಲದೇ ಯಾರೋ ಮನೆಯೊಳಗೆ ಬಂದರೆಂದು ತಪ್ಪಾಗಿ ಭಾವಿಸಿ ಮಗಳನ್ನೇ ಕೊಂದ ತಂದೆ!
ಯಾದವ್ ಅವರು ತಮ್ಮ ಲೈಸೆನ್ಸ್ ಪ್ಲೇಟ್ ನಂಬರ್ ಹಾಗೂ ದೂರಿನ ಪ್ರತಿಯನ್ನು ಅವರು ಶೇರ್ ಮಾಡಿದ್ದಾರೆ. ಇತ್ತೀಚೆಗಷ್ಟೇ ವಿಕ್ಕಿ ಕೌಶಲ್ ಹಾಗೂ ಸಾರಾ ಅಲಿ ಖಾನ್ ಅವರ ಡಿ ಗ್ಲಾಮ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಫೋಟೋದಲ್ಲಿ ಇಬ್ಬರೂ ಬಾಲಿವುಡ್ ಸ್ಟಾರ್ಗಳು ಇಂದೋರ್ ಸ್ಟ್ರೀಟ್ನಲ್ಲಿ ಸುತ್ತಾಡುವುದನ್ನು ಕಾಣಬಹುದು. ಇದನ್ನೂ ಓದಿ: ಇಂದಿನಿಂದ 15-18 ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ