ಹುಬ್ಬಳ್ಳಿ: ಮೋದಿ ಸರ್ಕಾರ ಎಲ್ಲಾ ರೈತರ (Farmers) ಪರವಾಗಿದೆ. ರೈತರಿಗೆ ಯಾವುದೇ ಕಾರಣಕ್ಕೂ ಬೆಲೆ ಕಡಿಮೆಯಾಗಬಾರದು. ಅದೇ ರೀತಿ ಗ್ರಾಹಕರಿಗೂ ಹೊರೆಯಾಗಬಾರದು. ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ಶೀಘ್ರದಲ್ಲೇ ಸಮಿತಿ ರಚಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರೈತರ ಹಿತಾಸಕ್ತಿಯನ್ನು ಕಾಪಾಡುವುದು ಸರ್ಕಾರದ ಉದ್ದೇಶವಾಗಿದೆ. ತೊಂದರೆಗಳಿದ್ದರೂ ಹಲವು ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಈ ಹಿಂದೆ ಎಥೆನಾಲ್ ಖರೀದಿ ನಡೆಯುತ್ತಿರಲಿಲ್ಲ. ಆದರೆ, ಈಗ 1,200 ಕೋಟಿ ಲೀಟರ್ ಎಥೆನಾಲ್ ಖರೀದಿಸಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯಾದ್ಯಂತ ಸ್ವೀಟ್ಸ್ ಶಾಪ್ಗಳ ಮೇಲೆ ದಾಳಿ – 15 ಸ್ವೀಟ್ಸ್ ತಯಾರಿಕಾ ಘಟಕಗಳಿಗೆ ನೋಟಿಸ್
ಕಬ್ಬಿನಿಂದ ಉತ್ಪಾದನೆಯಾಗುವ ಎಥೆನಾಲ್ ಅನ್ನು ಸಂಪೂರ್ಣವಾಗಿ ಖರೀದಿಸಲಾಗುತ್ತಿದೆ. ಆದರೆ, ಇತರ ಮೂಲಗಳಿಂದ ಉತ್ಪಾದನೆಯಾಗುವ ಎಥೆನಾಲ್ ಅನ್ನು ಸಂಪೂರ್ಣವಾಗಿ ಖರೀದಿಸಲು ಸಾಧ್ಯವಿಲ್ಲ. ರೈತರ ಹಿತದ ಜೊತೆಗೆ ಗ್ರಾಹಕರ ಹಿತವನ್ನೂ ಗಮನದಲ್ಲಿಟ್ಟುಕೊಳ್ಳಬೇಕಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸ್ಪಾ ಮತ್ತು ಸಲೂನ್ಗಳಲ್ಲಿ ನೈತಿಕ ಪೊಲೀಸ್ಗಿರಿ ಆರೋಪ – 5 ಲಕ್ಷಕ್ಕೆ ಬೇಡಿಕೆ; ನಾಲ್ವರು ಮಹಿಳೆಯರು ಸೇರಿ 6 ಜನ ಅಂದರ್
ದೆಹಲಿಗೆ ಬಂದಿದ್ದ ರೈತರು ಸಮಿತಿ ರಚನೆಗೆ ಒಪ್ಪಿಕೊಂಡಿದ್ದರು. ಅದರಂತೆ ಎರಡು ದಿನಗಳಲ್ಲೇ ಸಮಿತಿ ರಚನೆಗೆ ಕ್ರಮ ಕೈಗೊಳ್ಳಲಾಗಿದೆ. ಶೀಘ್ರ ವರದಿ ನೀಡುವಂತೆ ಸೂಚಿಸಲಾಗಿದೆ. ರೈತರು ಸಹಕರಿಸಿದರೆ ನಾಲ್ಕೈದು ದಿನಗಳಲ್ಲಿ ಸಮಿತಿ ಸಭೆ ನಡೆಸಲು ಸಿದ್ಧವಿದೆ. ಸಮಿತಿಯು ತಕ್ಷಣ ಕಾರ್ಯಾರಂಭ ಮಾಡಲು ಸಿದ್ಧವಿದ್ದು, ರೈತರು ಸಹಕಾರ ನೀಡಬೇಕು ಎಂದರು. ಇದನ್ನೂ ಓದಿ: ಮಕ್ಕಳೂ ಸೇರಿದಂತೆ ಪ್ರತಿಯೊಬ್ಬರಿಗೂ ಇಂಟರ್ನೆಟ್ ಬಳಕೆ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಕಬ್ಬು ಬೆಳೆಗಾರರು ನಮ್ಮವರೇ, ನಮ್ಮ ರೈತರೇ. ರೈತರು ಸಿಟ್ಟಿನಲ್ಲಿ ಏನೇ ಮಾತನಾಡಿದ್ದರೂ ಅದರ ಬಗ್ಗೆ ಕೋಪವಿಲ್ಲ. ಮತ್ತೆ ರೈತರು ಬಂದರೆ ಅವರೊಂದಿಗೆ ಚರ್ಚೆ ನಡೆಸಲಾಗುವುದು. ಹಬ್ಬದ ಸಂದರ್ಭದಲ್ಲಿ ರೈತರು ಮನೆಗೆ ತೆರಳಿ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಕನ್ನಡಕ್ಕೆ ಹಿಟ್ ಸಾಂಗ್ ನೀಡಿದ್ದ ಹಿರಿಯ ಸಂಗೀತ ನಿರ್ದೇಶಕ ದೇವ ಇನ್ನಿಲ್ಲ
ಕಬ್ಬಿಗೆ ಎಸ್ಎಪಿ ನೀಡುವಂತೆ ಕಳೆದ ವರ್ಷವೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆವು. ಕಬ್ಬಿನ ತೂಕ ಮತ್ತು ರಿಕವರಿಯಲ್ಲಿ ನಡೆಯುವ ಮೋಸವನ್ನು ತಡೆಯುವಂತೆಯೂ ತಿಳಿಸಿದ್ದೇವೆ. ಇದಕ್ಕೆ ಅಗತ್ಯವಿರುವ ಎಲ್ಲ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ. ಮುಖ್ಯಮಂತ್ರಿ ಅವರೊಂದಿಗೆ ಸೌಹಾರ್ದಯುತ ಮಾತುಕತೆ ನಡೆಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಮೂರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಸಾವು – ನೂಡಲ್ಸ್ ತಿಂದು ಸಾವನ್ನಪ್ಪಿರುವ ಶಂಕೆ!
ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ರಾಜ್ಯಗಳೊಂದಿಗೆ ಚರ್ಚಿಸಬೇಕಾಗುತ್ತದೆ. ಹೀಗಾಗಿ ಮೊದಲು ಎಸ್ಎಪಿ ನೀಡುವಂತೆ ಮನವಿ ಮಾಡಿದ್ದೆ. ಮುಖ್ಯಮಂತ್ರಿ ಅವರು ಇಂದು ಈ ಕುರಿತು ಘೋಷಣೆ ಮಾಡಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಮೈಸೂರಲ್ಲಿ ಬಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಕೇಸ್ – ಕಾಮುಕನಿಗೆ ಗಲ್ಲು ಶಿಕ್ಷೆ
ಇನ್ನು ಸ್ಟಿಂಗ್ ಆಪರೇಷನ್ ಕುರಿತು ಪ್ರತಿಕ್ರಿಯಿಸಿ, ಸಾರ್ವಜನಿಕ ಜೀವನದಲ್ಲಿರುವವರು ನೈತಿಕತೆಯನ್ನು ಕಾಪಾಡಿಕೊಳ್ಳಬೇಕು. ಸ್ಟಿಂಗ್ ಆಪರೇಷನ್ ಯಾರು ಮಾಡಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಯಾರು ಬೇಕಾದರೂ ಬರಲಿ, ಆದರೆ ತನಿಖೆ ಮುಂದುವರಿಯದಿದ್ದರೆ ವಿಷಯ ಅಲ್ಲಿಗೇ ಮುಗಿಯುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಕಾರಣವಿಲ್ಲದೇ ಮಹಿಳೆಯನ್ನ ರಾತ್ರಿಯಿಡೀ ಕಸ್ಟಡಿಯಲ್ಲಿಡಲು ಯಾವ ಅಧಿಕಾರವಿದೆ? – ಬಿಡುಗಡೆ ಬಳಿಕ ನೇಹಾ ಬೋರಾ ಪ್ರಶ್ನೆ
ಕೆಪಿಎಸ್ಸಿ ಹಗರಣದ ತನಿಖೆಯನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆಸಬೇಕು ಎಂದು ಅವರು ಆಗ್ರಹಿಸಿದರು. ಈ ಪ್ರಕರಣದ ತನಿಖೆ ನಡೆದರೆ ಅನೇಕ ಸಚಿವರು ಸಿಲುಕಿಕೊಳ್ಳಬಹುದು ಮತ್ತು ಸರ್ಕಾರ ಪತನವಾಗುವ ಸಾಧ್ಯತೆಯೂ ಇದೆ. ಸರ್ಕಾರ 2,500 ರೂ. ಪರಿಹಾರ ಘೋಷಣೆ ಮಾಡಿದ್ದರೂ ಈವರೆಗೆ ವಿತರಿಸಿಲ್ಲ. ಈ ವಿಚಾರಗಳನ್ನು ಬದಿಗೊತ್ತಲು ಸ್ಟಿಂಗ್ ಆಪರೇಷನ್ ವಿಷಯವನ್ನು ಮುನ್ನೆಲೆಗೆ ತರಲಾಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ನೇಹಾ ಬೋರಾ ರಿಲೀಸ್, ಪೊಲೀಸರ ಬಂಧನದಲ್ಲಿರೋ ದೀಪ್ಕೆ ಇಂದು ಕೋರ್ಟ್ಗೆ ಹಾಜರ್
