ನವದೆಹಲಿ: ಇದೀಗ ಆಯುಧ ಪೂಜೆಯಂದೇ ತೈಲ ಮಾರುಕಟ್ಟೆ ಕಂಪನಿಗಳು ಗ್ರಾಹಕರಿಗೆ ದರ ಏರಿಕೆಯ ಶಾಕ್ ಕೊಟ್ಟಿದೆ. 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ (Liquefied Petroleum Gas) ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 15.50 ರೂ. ಏರಿಕೆ ಮಾಡಿದೆ.
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ (Commercial LPG cylinder) ಬೆಲೆಯಲ್ಲಿ ಮಾರುಕಟ್ಟೆ ಕಂಪನಿಗಳು ಹೊಸ ಪರಿಷ್ಕರಣೆಯನ್ನು ಘೋಷಿಸಿದ್ದು, ಇಂದಿನಿಂದಲೇ ಈ ದರ ಜಾರಿಯಲ್ಲಿರಲಿದೆ. ದೇಶೀಯ ಬಳಕೆಗೆ ಬಳಸುವ 14.2 ಕೆಜಿ ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಇದನ್ನೂ ಓದಿ: ನಾಡಹಬ್ಬ ದಸರಾ ಸಂಭ್ರಮ – ಅಂಬಾವಿಲಾಸ ಅರಮನೆಯಲ್ಲಿ ಕಳೆಗಟ್ಟಿದ ಆಯುಧಪೂಜೆ
ಎಲ್ಲೆಲ್ಲಿ ಎಷ್ಟೆಷ್ಟು ಬೆಲೆ?
ನವದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 15.50 ರೂ. ಬೆಲೆ ಏರಿಕೆ ಆಗಿದ್ದು, ಪ್ರಸ್ತುತ ಸಿಲಿಂಡರ್ ಬೆಲೆ 1595.50 ರೂ. ಆಗಿದೆ. ಕೋಲ್ಕತ್ತಾದಲ್ಲಿ 16.5 ರೂ. ದರ ಹೆಚ್ಚಳವಾಗಿದ್ದು, 1,700.50 ರೂ. ಬೆಲೆಗೆ ಲಭ್ಯವಿದೆ. ಮುಂಬೈನಲ್ಲಿ 15.50 ರೂ. ಬೆಲೆ ಏರಿಕೆ ಆಗಿದ್ದು, ಸಿಲಿಂಡರ್ ಬೆಲೆ 1,547 ರೂ. ಆಗಿದ್ದು, ಚೆನ್ನೈನಲ್ಲಿ 16.5 ರೂ. ದರ ಹೆಚ್ಚಳವಾಗಿದ್ದು, 1754.50 ರೂ. ಬೆಲೆಗೆ 19 ಕೆಜಿ ವಾಣಿಜ್ಯ ಸಿಲಿಂಡರ್ ಲಭ್ಯವಿದೆ.
ಗೃಹಬಳಕೆ ಸಿಲಿಂಡರ್‌ಗಳು ದರ ಏರಿಕೆ ಇಲ್ಲ
14.2 ಕೆಜಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವಾಣಿಜ್ಯ ದರಗಳಲ್ಲಿ ಏರಿಕೆಯ ಹೊರತಾಗಿಯೂ ದೇಶೀಯ ಅಡುಗೆ ಅನಿಲ ಬೆಲೆಗಳು ಸದ್ಯಕ್ಕೆ ಸ್ಥಿರವಾಗಿವೆ. ವಾಣಿಜ್ಯ ಬಳಕೆಯ ಗ್ಯಾಸ್ ದರ ಏರಿಕೆ ಮಾಡಿರುವುದು ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರಿಗೆ ಬರೆ ಎಳೆದಂತಾಗಿದೆ.