– ಕಾಲೇಜು ವಿದ್ಯಾರ್ಥಿಗಳೇ ಇವರ ಟಾರ್ಗೆಟ್
ಬಾಗಲಕೋಟೆ: ಜಿಲ್ಲೆಗೂ ಡ್ರಗ್ಸ್ ನಂಟು ಇದೆಯಾ ಎನ್ನುವ ಅನುಮಾನ ಇದೀಗ ಕಾಡತೊಡಗಿದೆ. ಸಚಿವ ಮುರುಗೇಶ್ ನಿರಾಣಿ ಕ್ಷೇತ್ರದ ಬೀಳಗಿ ಪಟ್ಟಣಕ್ಕೆ ಪಂಜಾಬಿನಿಂದ ಪೂರೈಕೆಯಾಗುವುದನ್ನು ಅಬಕಾರಿ ಇಲಾಖೆ ಪೊಲೀಸರು ಭೇದಿಸಿದ್ದಾರೆ.
Advertisement
ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಅಬಕಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಯಿಸಿ ಅಫೀಮು ಪೌಡರ್ ಜಾಲ ಭೇದಿಸಿದ್ದಾರೆ. ಅಫೀಮು ಮಾರಲು ಬಂದಿದ್ದ ಪಂಜಾಬ್ ಮೂಲದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಅಂದಾಜು ನಾಲ್ಕರಿಂದ ಐದು ಲಕ್ಷ ರೂ. ಮೌಲ್ಯದ ಅಫೀಮ್ ಪೌಡರ್ ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಪಟಾಕಿ ಅಂಗಡಿಯಲ್ಲಿ ಸ್ಫೋಟದಿಂದ ಇಬ್ಬರು ಸಾವು- ತಲಾ 2 ಲಕ್ಷ ಪರಿಹಾರ ಘೋಷಿಸಿದ ಜಮೀರ್
Advertisement
ಬೀಳಗಿ ಅಬಕಾರಿ ಸಿಪಿಐ ಸದಾಶಿವ ಕೊರ್ತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಅಫೀಮು ಪೌಡರ್ ಮಾರಾಟ ಮಾಡುತ್ತಿದ್ದವರು ಪಂಜಾಬ್ ಮೂಲದ ಪಟಿಯಾಲಾದವರಾಗಿದ್ದಾರೆ. ಸುಮಾರು ಐದಾರು ದಿನಗಳಿಂದ 10 ಕೆ.ಜಿ ಅಫೀಮು ಪೌಡರ್ ಇಟ್ಟುಕೊಂಡು ಬೀಳಗಿ ಪಟ್ಟಣದಲ್ಲಿ ತಿರುಗಾಡುತ್ತಿದ್ದರು. ಸದ್ಯ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಯಿಸಿ, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
Advertisement
Advertisement
ಬೀಳಗಿ ಕ್ರಾಸ್ ನಲ್ಲಿ ಇಬ್ಬರನ್ನು ಬಂಧಿಸಿದ್ದು, ಗೂಡ್ಸ್ ಲಾರಿ ಮಾಲೀಕರು ಹಾಗೂ ಚಾಲಕರು ಗೂಡ್ಸ್ ಜೊತೆಗೆ ಅಪೀಮು ಪೌಡರ್ ತಂದು ಮಾರಾಟ ಮಾಡುತ್ತಿದ್ದರು. ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಡಾಬಾಗಳಿಗೆ ಈ ಅಫೀಮು ಪೌಡರ್ ಮಾರಾಟ ಮಾಡುತ್ತಿದ್ದರೆಂಬ ಶಂಕೆ ಕೂಡ ವ್ಯಕ್ತವಾಗಿದೆ. ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿರುವ ಅನುಮಾನವಿದ್ದು, ಅಂದಾಜು ನಾಲ್ಕರಿಂದ ಐದು ಲಕ್ಷ ರೂ. ಮೌಲ್ಯದ ಅಫೀಮು ಪೌಡರ್ ಜಪ್ತಿ ಮಾಡಲಾಗಿದೆ.