ಬೆಂಗಳೂರು: ರಾಜ್ಯ ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿಯಿಲ್ಲ. ಸಿದ್ದರಾಮಯ್ಯ-ಡಿಕೆಶಿ ನಡುವಿನ ನಾಯಕತ್ವ ಕಿತ್ತಾಟ ಮುಂದುವರಿದಿದೆ. ದೆಹಲಿಯಲ್ಲಿ ರಾಜೀಸಂಧಾನದ ಮೂಲಕ ಎಷ್ಟೇ ತೇಪೆಹಾಕಲು ರಾಹುಲ್ ಗಾಂಧಿ ಪ್ರಯತ್ನಿಸಿದ್ರೂ, ಪ್ರಯೋಜನವಾಗಿಲ್ಲ.
Advertisement
ಸಿದ್ದರಾಮೋತ್ಸವದಲ್ಲಿ ಸಿದ್ದರಾಮಯ್ಯ ನಾಯಕತ್ವ ಘೋಷಣೆ ಆಗಲಿದೆ ಎಂಬ ವದಂತಿಗಳ ಬೆನ್ನಲ್ಲೇ ಅಖಾಡಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಧುಮುಕಿದ್ದು, ಸಿದ್ದರಾಮಯ್ಯ ಬಣಕ್ಕೆ ಶಾಕ್ ನೀಡಿದ್ದಾರೆ. ಸಿದ್ದರಾಮೋತ್ಸವಕ್ಕೆ ಒಂದು ತಿಂಗಳ ಮೊದಲೇ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ಡಿಕೆ ಶಿವಕುಮಾರ್ ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲೇ ಮಾತಿಗೆ ಬೆಲೆಯಿಲ್ಲದಷ್ಟು ಡಿಕೆಶಿ ಡಮ್ಮಿ ಆಗಿದ್ದೇಕೆ? – ಟ್ವೀಟ್ ಮಾಡಿ ಕಾಲೆಳೆದ ಬಿಜೆಪಿ
Advertisement
Advertisement
ವ್ಯಕ್ತಿ ಪೂಜೆ ಮುಖ್ಯ ಅಲ್ಲ, ಪಕ್ಷ ಪೂಜೆ ಮುಖ್ಯ ಎಂದಿದ್ದಾರೆ. ಮಂತ್ರಿಗಿರಿ ಸಿಗದಿದ್ದಾಗಲೇ ಉಸಿರುಬಿಟ್ಟಿರಲಿಲ್ಲ. ಪಕ್ಷ ಸೋತಾಗಲೂ ಸಿದ್ದರಾಮಯ್ಯರನ್ನು ವಿಪಕ್ಷ ನಾಯಕರನ್ನಾಗಿ ಮಾಡಿದ್ದೇವೆ. ಎನ್ನುವ ಮೂಲಕ ತಮ್ಮನ್ನು ಪಕ್ಷ ನಿಷ್ಠ, ತ್ಯಾಗಮಯಿ ಎಂದು ಬಿಂಬಿಸಿಕೊಂಡಿದ್ದಾರೆ. ತಮಗೆ ಸಿದ್ದರಾಮೋತ್ಸವದ ಬಗ್ಗೆ ಹೆಚ್ಚು ಗೊತ್ತಿಲ್ಲ ಎಂದು ಖಾರವಾಗಿ ಹೇಳಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡದಿರೋದು ಗಮನಾರ್ಹ. ಮಾಜಿ ಡಿಸಿಎಂ ಜಿ.ಪರಮೇಶ್ವರ್ ಕೂಡ ಸಾಮೂಹಿಕ ನಾಯಕತ್ವದ ಮಂತ್ರ ಜಪಿಸಿದ್ದಾರೆ. ಸಿದ್ದರಾಮೋತ್ಸವ ತಪ್ಪಲ್ಲ ಎಂದಿದ್ದಾರೆ. ಇದನ್ನೂ ಓದಿ: ನಮ್ಮ ರಕ್ತದಲ್ಲಿ ಕಾಂಗ್ರೆಸ್ ಇದೆ: JDS ತೊರೆದು ಕಾಂಗ್ರೆಸ್ ಸೇರಿದ ಹೆಚ್.ಆರ್.ಶ್ರೀನಾಥ್
Advertisement
ಕಾಂಗ್ರೆಸ್ ನಲ್ಲಿ ವ್ಯಕ್ತಿ ಪೂಜೆಗೆ ಅವಕಾಶ ಇಲ್ಲಾ ಏನಿದ್ದರು ಪಕ್ಷದ ಪೂಜೆ ಆದ್ದರಿಂದ ಸಿದ್ದರಾಮೋತ್ಸವದಲ್ಲಿ ಪಕ್ಷದ ಸಹಭಾಗಿತ್ವ ಇರಬೇಕು ಎಂದು ಹೈಕಮಾಂಡ್ ಖಡಕ್ ಸೂಚನೆ ನೀಡಿದೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯರ 75ನೇ ವರ್ಷಾಚರಣೆ ಮಾಡಲಾಗುತ್ತಿದೆ ಮಾಡಲಿ ಇದೇ ಮೊದಲು ಇದೇ ಕೊನೆ ಇನ್ನು ಮುಂದೆ ವ್ಯಕ್ತಿ ಆಧಾರಿತ ಕಾರ್ಯಕ್ರಮ ಇರಬಾರದು ಎಂದು ಆಗಸ್ಟ್ 3 ರಂದು ದಾವಣಗೆರೆಯಲ್ಲಿ ಭರ್ಜರಿಯಾಗಿ ಸಿದ್ದರಾಮೋತ್ಸವ ನಡೆಸಲು ಮುಂದಾದ ಸಿದ್ದರಾಮಯ್ಯ ಬೆಂಬಲಿಗರಿಗೆ ಕಾಂಗ್ರೆಸ್ ಹೈಕಮಾಂಡ್ ವಾರ್ನಿಂಗ್ ನೀಡಿತ್ತು.
Live Tv