ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಎರಡು ಬಣಗಳ ನಡುವೆ ಜಿದ್ದಾಜಿದ್ದಿ ಶುರುವಾಯಿತು. ಸಾ.ರಾ.ಗೋವಿಂದು ಬಣದ ಮೇಲೆ ಭಾ.ಮಾ ಹರೀಶ್ ಬಣದ ಆರೋಪ, ಇವರ ಬಣದ ಮೇಲೆ ಅವರು ಪ್ರತ್ಯಾರೋಪ. ಚುನಾವಣೆ ಮುಗಿದು, ಫಲಿತಾಂಶ ಬಂದು ಭಾ.ಮಾ ಹರೀಶ್ ಅವರು ಅಧ್ಯಕ್ಷ ಖುರ್ಚಿ ಮೇಲೆ ಕೂತರು ಈ ತಿಕ್ಕಾಟ ಇನ್ನೂ ಮುಗಿದಿಲ್ಲ. ಈಗಿನ ಚುನಾಯಿತ ಪ್ರತಿನಿಧಿಗಳು ಯಾವುದೇ ಕಾರಣಕ್ಕೂ ಹಣಕಾಸಿನ ವ್ಯವಹಾರವನ್ನು ಮಾಡುವಂತಿಲ್ಲ ಎಂದು ಕೋರ್ಟಿನಿಂದ ನಿರ್ದೇಶನ ಕೊಡಿಸುವಲ್ಲಿ ಯಶಸ್ವಿಯಾಗಿದೆ ಸಾ.ರಾ.ಗೋವಿಂದು ಬಣ.
Advertisement
ಎರಡು ದಿನಗಳ ಹಿಂದೆಯಷ್ಟೇ ಪತ್ರಿಕಾಗೋಷ್ಠಿ ನಡೆಸಿರುವ ಸಾ.ರಾ. ಗೋವಿಂದು ಮತ್ತು ತಂಡ ಚುನಾವಣಾ ಅಧಿಕಾರಿಗಳ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದಾರೆ. ಕಳ್ಳದಾರಿಯ ಮೂಲಕ ಭಾ.ಮಾ ಹರೀಶ್ ಮತ್ತು ತಂಡ ಅಧಿಕಾರಿದ ಚುಕ್ಕಾನೆ ಹಿಡಿದಿದೆ ಎಂದು ಆರೋಪ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಅವರನ್ನು ಅಧ್ಯಕ್ಷ ಎಂದು ನಾವು ಒಪ್ಪಿಕೊಳ್ಳಲಾರೆವು ಎಂದಿದ್ದಾರೆ. ಆದರೆ, ಈ ಎಲ್ಲ ಆರೋಪಗಳ ಹಿಂದೆ ಬೇರೆಯದ್ದೇ ಕಾರಣವಿದೆ ಎನ್ನಲಾಗುತ್ತಿದೆ. ಶಿವರಾಜ್ ಕುಮಾರ್ ಮತ್ತು ರವಿಚಂದ್ರನ್ ಅವರಿಗೆ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡಿ, ಅವರನ್ನು ಗೌರವಿಸಲು ವಾಣಿಜ್ಯ ಮಂಡಳಿಯಲ್ಲಿ ಚರ್ಚೆ ನಡೆದಿತ್ತು. ಇಂಥದ್ದೊಂದು ದೊಡ್ಡ ಕಾರ್ಯಕ್ರಮ ಆಗಬಾರದು ಎಂದು ಈ ರೀತಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಮತ್ತೆ ಟಾಪ್‌ಲೆಸ್ ಅವತಾರದಲ್ಲಿ ಬಂದ ಉರ್ಫಿ ಜಾವೇದ್: ನೆಟ್ಟಿಗರಿಂದ ನಟಿಗೆ ಕ್ಲಾಸ್
Advertisement
Advertisement
ಈ ಕಾರ್ಯಕ್ರಮದ ಬಗ್ಗೆ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ ಭಾ,ಮಾ. ಹರೀಶ್ “ಇನ್ನೂ ನಾವು ಶಿವರಾಜ್ ಕುಮಾರ್ ಮತ್ತು ರವಿಚಂದ್ರನ್ ಅವರನ್ನು ಕೇಳಿಲ್ಲ. ಅವರ ಗಮನಕ್ಕೆ ತಂದು, ದೊಡ್ಡಮಟ್ಟದಲ್ಲೇ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುವುದು. ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಕಾರ್ಯಕ್ರಮದ ಕುರಿತು ಅಧಿಕೃತವಾಗಿ ಕಮೀಟಿ ಮುಂದೆ ಚರ್ಚೆ ಆಗಿಲ್ಲ. ಅದು ಆಗಬೇಕು. ಈ ಕಾರ್ಯಕ್ರಮವನ್ನು ತಡೆಯುವಂತಹ ಹುನ್ನಾರ ನಡೆದಿರುವುದು ನಿಜ. ಈ ಹಿಂದೆ ಅಂಬರೀಶ್ ಅವರಿಗೆ 60 ಆದಾಗ ಎಲ್ಲರೂ ಸೇರಿ ಸಂಭ್ರಮಿಸಿದ್ದೇವೆ. ಇದನ್ನೂ ಹಾಗೆಯೇ ಮಾಡಬೇಕು ಎಂದುಕೊಂಡಿದ್ದೇವೆ’ ಎನ್ನುತ್ತಾರೆ.