ಚಂಡೀಗಢ: ಸಾಮಾನ್ಯವಾಗಿ ಹಾವು ಕಚ್ಚಿದರೆ ಮನುಷ್ಯ ಬದುಕುಳಿಯುವುದೇ ಕಷ್ಟ. ಆದರೆ, ಬಾಲಕನೋರ್ವ ತನಗೆ ಕಚ್ಚಿದ ಹಾವನ್ನೇ ಪ್ರತಿಯಾಗಿ ಕಚ್ಚಿ ಕೊಂದಿರುವ ವಿಚಿತ್ರ ಘಟನೆ ಛತ್ತೀಸ್‍ಗಢದಲ್ಲಿ (Chhattisgarh) ನಡೆದಿದೆ.
ಹೌದು, ಛತ್ತೀಸ್‍ಗಢದ ಜಶ್‍ಪುರ (Jashpur) ಜಿಲ್ಲೆಯ ಎಂಟು ವರ್ಷದ ದೀಪಕ್ ಎಂಬ ಬಾಲಕ ಮನೆಯ ಹಿತ್ತಲಿನಲ್ಲಿ ಆಟವಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ನಾಗರ ಹಾವೊಂದು (Cobra) ಆತನ ಕೈಗೆ ಸುತ್ತಿಕೊಂಡು ಎರಡು ಬಾರಿ ಕಚ್ಚಿದೆ. ಈ ವೇಳೆ ಹಾವಿನಿಂದ ಬಿಡಿಸಿಕೊಳ್ಳಲಾಗದೇ, ಕೊನೆಗೆ ವಿಷಪೂರಿತ ಹಾವಿಗೆ ಬಾಲಕ ಕೂಡ ಎರಡು ಬಾರಿ ಕಚ್ಚಿ, ಅದನ್ನು ಕೊಂದಿದ್ದಾನೆ. ಇದನ್ನೂ ಓದಿ: ಅನೈತಿಕ ಸಂಬಂಧ ಹೊಂದಿದ್ದ ಮಗಳ ಹತ್ಯೆ- ವೀಡಿಯೋ ಮಾಡಿ ತಪ್ಪೊಪ್ಪಿಕೊಂಡ ತಂದೆ
Advertisement
Advertisement
ಈ ಘಟನೆ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ದೀಪಕ್, ಹಾವು ನನ್ನ ಕೈಗೆ ಸುತ್ತಿಕೊಂಡು ಕಚ್ಚಿತು. ಇದರಿಂದ ನನಗೆ ಬಹಳ ನೋವಾಯಿತು. ಹಾವಿನಿಂದ ನನ್ನನ್ನು ಬಿಡಿಸಿಕೊಳ್ಳು ಸಾಕಷ್ಟು ಪ್ರಯತ್ನಿಸಿದೆ. ಆದರೆ ಅದು ಅಲುಗಾಡಲೇ ಇಲ್ಲ. ಕೊನೆಗೆ ಹಾವಿಗೆ ಎರಡು ಬಾರಿ ಕಚ್ಚಿದೆ. ಇದೆಲ್ಲವೂ ಕ್ಷಣಾರ್ಧದಲ್ಲಿ ಸಂಭವಿಸಿತು ಎಂದು ಬಾಲಕ ತಿಳಿಸಿದ್ದಾನೆ.
Advertisement
ನಂತರ ಹಾವು ಕಚ್ಚಿದ ಬಗ್ಗೆ ತನ್ನ ಪೋಷಕರಿಗೆ ತಿಳಿಸಿದಾಗ, ಬಾಲಕನ ಕುಟುಂಬಸ್ಥರು ಆತನನ್ನು ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿ ಬಾಲಕನಿಗೆ ಹಾವಿನ ವಿಷಕ್ಕೆ ಔಷಧಿ ನೀಡಲಾಯಿತು ಮತ್ತು ಒಂದು ದಿನದವರೆಗೆ ಆತನನ್ನು ಆಸ್ಪತ್ರೆಯಲ್ಲಿಯೇ ಇರಿಸಿಕೊಳ್ಳಲಾಯಿತು. ಇದನ್ನೂ ಓದಿ: ಮನೆ ಬಿಟ್ಟು ಹೋಗದ ಅತ್ತೆ ಮೇಲೆ ಸೊಸೆಯಿಂದ ಮಾರಣಾಂತಿಕ ಹಲ್ಲೆ – ವೃದ್ಧೆ ಸ್ಥಿತಿ ಚಿಂತಾಜನಕ
Advertisement
ಹಾವು ಕಚ್ಚಿದ ಜಾಗದಲ್ಲಿ ದೀಪಕ್ ಹೆಚ್ಚು ನೋವು ಅನುಭವಿಸಿದ್ದಾರೆ. ಆದರೆ ಹಾವಿನ ವಿಷ ಸಂಪೂರ್ಣವಾಗಿ ಬಿಡುಗಡೆಯಾಗಿಲ್ಲ. ಸದ್ಯಕ್ಕೆ ಬಾಲಕನನ್ನು ಆಸ್ಪತ್ರೆಯಿಂದ ಡಿಶ್ಚಾರ್ಜ್ ಮಾಡಲಾಗಿದ್ದು, ಇದೀಗ ದೀಪಕ್ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಬ್ಲಾಕ್ ವೈದ್ಯಕೀಯ ಅಧಿಕಾರಿ ಡಾ ಜೆಮ್ಸ್ ಮಿಂಜ್ ಹೇಳಿದ್ದಾರೆ.