ನವದೆಹಲಿ: ಪಶ್ಚಿಮ ಬಂಗಾಳದ ಕಲ್ಲಿದ್ದಲು ಹಗರಣ ಪ್ರಕರಣದಲ್ಲಿ ಎಂಟು ಐಪಿಎಸ್ ಅಧಿಕಾರಿಗಳಿಗೆ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.
ಐಪಿಎಸ್ ಅಧಿಕಾರಿಗಳಾದ ಜ್ಞಾನವಂತ್ ಸಿಂಗ್, ಕೋಟೇಶ್ವರ ರಾವ್, ಎಸ್.ಸೆಲ್ವಮುರುಗನ್, ಶ್ಯಾಮ್ ಸಿಂಗ್, ರಾಜೀವ್ ಮಿಶ್ರಾ, ಸುಕೇಶ್ ಕುಮಾರ್ ಜೈನ್, ತಥಾಗತ ಬಸು ಸೇರಿ 8 ಐಪಿಎಸ್ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇದನ್ನೂ ಓದಿ: ನಕಲಿ ನೋಟು ಚಲಾವಣೆ – ಬಿಜೆಪಿ ಮಾಜಿ ಶಾಸಕನ 2ನೇ ಪತ್ನಿಗೆ 4 ವರ್ಷ ಜೈಲು ಶಿಕ್ಷೆ
Advertisement
Advertisement
ಐಪಿಎಸ್ ಅಧಿಕಾರಿಗಳು ಪಶ್ಚಿಮ ಬಂಗಾಳದವರಾಗಿದ್ದು, ಅವರ ವಿಚಾರಣೆ ಆಗಸ್ಟ್ 21 ರಿಂದ ಆಗಸ್ಟ್ 31ರ ನಡುವೆ ಪ್ರಾರಂಭವಾಗುವ ಸಾಧ್ಯತೆ ಇದೆ. ಸಮನ್ಸ್ ಜಾರಿ ಮಾಡಿರುವ ಐಪಿಎಸ್ ಅಧಿಕಾರಿಗಳನ್ನು ಕಲ್ಲಿದ್ದಲು ಅಕ್ರಮ ಗಣಿಗಾರಿಕೆ ಮತ್ತು ಕಳ್ಳಸಾಗಣೆ ನಡೆಯುತ್ತಿರುವ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು. ಅಧಿಕೃತ ವಾಹನಗಳಲ್ಲಿ ನಗದು ಸಾಗಣೆಯಲ್ಲಿ ಕೆಲವು ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಮೂಲಗಳು ಹೇಳಿವೆ.
Advertisement
ಟಿಎಂಸಿ ಯುವ ನಾಯಕ ಮತ್ತು ಪ್ರಕರಣದ ಪ್ರಮುಖ ಆರೋಪಿ ವಿನಯ್ ಮಿಶ್ರಾ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ನಿಕಟ ಸಹವರ್ತಿ ಎಂದು ಹೇಳಲಾಗಿದ್ದು, ಈ ವರ್ಷ ಮಾರ್ಚ್‌ನಲ್ಲಿ ಇಡಿ ಅವರನ್ನು ವಿಚಾರಣೆಗೆ ಒಳಪಡಿಸಿದೆ. ಇದನ್ನೂ ಓದಿ: ಜಾನುವಾರು ಅಕ್ರಮ ಸಾಗಣೆ – ಮಮತಾ ಬ್ಯಾನರ್ಜಿ ಆಪ್ತ ಬಂಧನ
Advertisement
ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಆರಂಭಿಸಿದ್ದು, ಇ.ಡಿ ಕೂಡ ಸಮಾನಾಂತರ ತನಿಖೆ ನಡೆಸುತ್ತಿದೆ. 2020ರ ನವೆಂಬರ್‌ನಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ನ ಪಶ್ಚಿಮ ಬಂಗಾಳದ ಪಶ್ಚಿಮ ಭಾಗಗಳಲ್ಲಿ ದಂಧೆ ನಡೆಯುತ್ತಿದೆ. ಹಲವು ವರ್ಷಗಳಿಂದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಕಲ್ಲಿದ್ದಲನ್ನು ಅಕ್ರಮವಾಗಿ ಗಣಿಗಾರಿಕೆ ಮಾಡಿ ಬ್ಲಾಕ್ ಮಾರ್ಕೆಟ್‌ನಲ್ಲಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಕಳೆದ ವರ್ಷ ಫೆಬ್ರವರಿ 21 ರಂದು ಸಿಬಿಐ ತಂಡವು ಅಭಿಷೇಕ್ ಅವರ ನಿವಾಸಕ್ಕೆ ಭೇಟಿ ನೀಡಿತ್ತು. ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಆರೋಪದ ಮೇಲೆ ಅವರ ಪತ್ನಿ ರುಜಿರಾ ಮತ್ತು ಅವರ ಸೊಸೆ ಮೇನಕಾ ಗಂಭೀರ್ ಅವರಿಗೆ ಸಮನ್ಸ್ ನೀಡಿತ್ತು.
ಕಲ್ಲಿದ್ದಲು ನಿರ್ವಾಹಕ ಅನೂಪ್ ಮಾಝಿ ಅಲಿಯಾಸ್ ಲಾಲಾ ಈ ಪ್ರಕರಣದ ಪ್ರಮುಖ ಶಂಕಿತ ಆರೋಪಿ. ಕೆಲ ಸಂಸದರು ಈ ಅಕ್ರಮ ವಹಿವಾಟಿನ ಫಲಾನುಭವಿಗಳಾಗಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ ಇಬ್ಬರನ್ನು ಬಂಧಿಸಿದೆ ಎಂದು ಇ.ಡಿ ತಿಳಿಸಿದೆ. ಇದನ್ನೂ ಓದಿ: ಕುಡುಗೋಲು ಹಿಡಿದು ಫಿಲ್ಮಂ ಸ್ಟೈಲ್‍ನಲ್ಲಿ ವ್ಯಕ್ತಿಯನ್ನು ಅಟ್ಟಾಡಿಸಿದ ಕೌನ್ಸಿಲರ್ ಪತಿ