ರಾಂಚಿ: ನಕಲಿ ನೋಟು ಚಲಾವಣೆ ಮಾಡಿದ್ದಕ್ಕೆ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಬಿಜೆಪಿ ಮಾಜಿ ಶಾಸಕ ಪುಟ್ಕರ್ ಹೆಂಬ್ರೋಮ್ ಅವರ ಪತ್ನಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಬಿಜೆಪಿ ಮಾಜಿ ಶಾಸಕನ ಪತ್ನಿ ಮಲಯಾ ಹೆಂಬ್ರೋಮ್ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸೂರ್ಯಭೂಷಣ್ ಓಜಾ ಅವರು ಬುಧವಾರ ಮಲಯಾ ಹೆಂಬ್ರೋಮ್‌ಗೆ ಜೈಲು ಶಿಕ್ಷೆ ವಿಧಿಸಿದ್ದಾರೆ. ಇದನ್ನೂ ಓದಿ: ಉಜ್ಜಯಿನಿ ಮಹಾಕಾಳೇಶ್ವರ ಮಂದಿರದಲ್ಲಿ ಸಂಸದ ತೇಜಸ್ವಿ ಸೂರ್ಯ ಬೆಂಬಲಿಗರ ಗಲಾಟೆ
Advertisement
Advertisement
ನ್ಯಾಯಾಲಯ ಆಕೆಗೆ 5,000 ದಂಡವನ್ನೂ ವಿಧಿಸಿದೆ. ಜೈಲು ಶಿಕ್ಷೆಗೆ ಒಳಗಾಗಿರುವ ಮಲಯಾ ಅವರು ಚೈಬಾಸಾ ಕ್ಷೇತ್ರದ ಮಾಜಿ ಶಾಸಕನ ಎರಡನೇ ಪತ್ನಿ. ಮಟ್ಕಮ್ಹತು ಗ್ರಾಮದ ನಿವಾಸಿ ಜಯಂತಿ ದೇವಗಂ ಎಂಬವರು 2020ರ ಸೆಪ್ಟೆಂಬರ್‌ನಲ್ಲಿ ಮಲಯಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
Advertisement
ಮಲಯಾ ನಮ್ಮ ಅಂಗಡಿಯಿಂದ 1,600 ರೂ. ಮೌಲ್ಯದ ವಸ್ತುಗಳನ್ನು ಖರೀದಿಸಿ 2,000 ರೂ. ಮುಖಬೆಲೆಯ ನೋಟು ನೀಡಿದ್ದರು. ಆ ನೋಟಿನೊಂದಿಗೆ ಠೇವಣಿ ಇಡಲು ಎಸ್‌ಬಿಐಗೆ ಹೋಗಿದ್ದೆ. ಆದರೆ ಬ್ಯಾಂಕ್‌ನಲ್ಲಿ ಆ ನೋಟನ್ನು ಸ್ವೀಕರಿಸಲಿಲ್ಲ ಎಂದು ಜಯಂತಿ ತಮ್ಮ ದೂರಿನಲ್ಲಿ ಆರೋಪಿಸಿದ್ದರು. ಇದನ್ನೂ ಓದಿ: ಮಧ್ಯರಾತ್ರಿ, ಮದ್ಯ ಸೇವಿಸಿದ ಅಮಲಿನಲ್ಲಿ ಕಾಂಗ್ರೆಸ್ ಐಟಿ ಸೆಲ್ ಟ್ವೀಟ್ ಮಾಡಿದೆ: ರೇಣುಕಾಚಾರ್ಯ
Advertisement
ಮರುದಿನ ಅದೇ ನೋಟನ್ನು ಸ್ಥಳೀಯ ಅಂಗಡಿಗೆ ನೀಡಿದಾಗ ಅಲ್ಲಿಯೂ ಸ್ವೀಕರಿಸಲಿಲ್ಲ. ನೋಟು ಸಮೇತ ಮಲಯಾ ಅವರ ಬಳಿ ಹೋದಾಗ ನನ್ನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ನಡೆದಾಗ ಆ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ಪೊಲೀಸ್ ತಂಡವು ನಕಲಿ ನೋಟು ಸಹಿತ ಮಲಯಾ ಅವರನ್ನು ಬಂಧಿಸಿದೆ. ದೆಹಲಿಯಿಂದ 500 ರೂ.ಗೆ ನಕಲಿ ನೋಟು ಖರೀದಿಸಿ ಇಲ್ಲಿ ಚಲಾವಣೆ ಮಾಡಲು ಯತ್ನಿಸಿದ್ದೆ ಎಂದು ಮಲಯಾ, ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಮೋದಿಗೆ ರಾಖಿ ಕಟ್ಟಿದ ಮಕ್ಕಳು