ಬೆಂಗಳೂರು: ಇಲ್ಲಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತಮಿಳು ನಟ ವಿಜಯ್ ಸೇತುಪತಿ ಪಿಎ ಮೇಲೆ ಹಲ್ಲೆಗೆ ಯತ್ನ ನಡೆದಿದೆ.
ಈ ಘಟನೆ ನಿನ್ನೆ ರಾತ್ರಿ 12:30 ಸುಮಾರಿಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಜಯ್ ಸೇತುಪತಿ ಜೊತೆ ಬರುತ್ತಿದ್ದ ಸಹ ಪ್ರಯಾಣಿಕ ಕುಡಿದ ಅಮಲಿನಲ್ಲಿ ಇದ್ದರು ಎನ್ನಲಾಗ್ತಿದೆ. ಸಹ ಪ್ರಯಾಣಿಕ ಹಾಗೂ ಸೇತುಪತಿಯ ಪಿಎಗೂ ಜಗಳ ಆಗಿದೆ. ಇದೇ ಸಿಟ್ಟಿನಲ್ಲಿ ಏರ್ ಪೋರ್ಟ್ ನಲ್ಲಿ ಇಳಿದು ಬರೋವಾಗ ಪಿಎ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ.

ನಟ ನಿನ್ನೆ ರಾತ್ರಿ ರಾತ್ರಿ 11 ಗಂಟೆ ಸುಮಾರಿಗೆ ಬೆಂಗಳೂರಿಗೆ ಬಂದಿದ್ದರು. ಬಿಡದಿ ಬಳಿಯ ಇನೋವೆಟಿವ್ ಫಿಲಂ ಸಿಟಿಯಲ್ಲಿ ತಮಿಳಿನ ರಿಯಾಲಿಟಿ ಶೋ ಶೂಟಿಂಗ್‍ಗೆಂದು ವಿಮಾನದಲ್ಲಿ ಬರುವ ವೇಳೆ ಪ್ರಯಾಣಿಕನ ಜೊತೆ ಕಿರಿಕ್ ಆಗಿದೆ. ಕಿರಿಕ್ ನಂತರ ವಿಮಾನ ನಿಲ್ದಾಣದಿಂದ ವಿಜಯ್ ಸೇತುಪತಿ ಮತ್ತು ಪಿಎ ಹೊರ ಬರುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದು ಹಲ್ಲೆಗೆ ಯತ್ನಿಸಲಾಗಿದೆ. ಇದನ್ನೂ ಓದಿ: ಪುನೀತ್ ಸಾವಿನ ರಹಸ್ಯ ಒಂದೊಂದೇ ಬಯಲು!

ಘಟನೆಯಿಂದ ವಿಚಲಿತರಾಗಿ ವಿಜಯ್ ಸೇತುಪತಿ ಅವರು ದೇವನಹಳ್ಳಿ ಏರ್ಪೋರ್ಟ್ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಬಳಿಕ ಪ್ರಕರಣವನ್ನು ವಿಥ್ ಡ್ರಾ ಮಾಡಿಕೊಂಡಿದ್ದಾರೆ. ಕುಡಿದು ಹಲ್ಲೆಗೆ ಯತ್ನಿಸಿರೋದರ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಪ್ರಕರಣ ವಿತ್ ಡ್ರಾ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಎತ್ತುಗಳ ಜೊತೆಗೆ ಬಂದ ಅಭಿಮಾನಿಗಳನ್ನು ಭೇಟಿ ಮಾಡಿದ ಶಿವಣ್ಣ, ರಾಘಣ್ಣ
https://twitter.com/AnandAathiraa/status/1455869074085277708
