ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ ಅಂದ್ರೇನೆ ಶಿಸ್ತು. ಪ್ರಧಾನಿಯೇ ಆಗಿರಲಿ, ಮುಖ್ಯಮಂತ್ರಿಗಳೇ ಆಗಿರಲಿ ಸಂಘದ ಕಾರ್ಯಕ್ರಮ ಅಂದ್ರೆ ಅಲ್ಲಿ ಶಿಸ್ತಿನ ಸಿಪಾಯಿಯಂತೆ ಸಾಮಾನ್ಯ ಕಾರ್ಯಕರ್ತನಂತೆ ಇರಬೇಕು. ಹುದ್ದೆ, ಹೆಸರು ಯಾವುದು ಇಲ್ಲಿ ಮುಖ್ಯ ಅಲ್ಲ. ಕಾರ್ಯಕರ್ತ ಅನ್ನೋದು ಮಾತ್ರ ಇಲ್ಲಿ ಮುಖ್ಯ. ಇವತ್ತು ಸಿಎಂ ಯಡಿಯೂರಪ್ಪ ಇಂತಹದ್ದೇ ಪ್ರಸಂಗಕ್ಕೆ ಸಾಕ್ಷಿಯಾದ್ರು. ಸಂಘದ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಸಂಘದ ಕಾರ್ಯಕರ್ತನಂತೆ ಸಾಮಾನ್ಯರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಾಗಡಿ ರಸ್ತೆಯ ಚನ್ನೇನಹಳ್ಳಿಯ ಜನಸೇವಾ ವಿದ್ಯಾಲಯದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಭಾಗಿಯಾಗಿದ್ದರು. ಕಟ್ಟಡ ಉದ್ಘಾಟನೆ ಬಳಿಕ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾಗವಹಿಸಿದ್ರು. ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಸೇರಿ 5 ಜನರಿಗೆ ಮಾತ್ರ ವೇದಿಕೆ ಮೇಲೆ ಅವಕಾಶ ನೀಡಲಾಗಿತ್ತು. ಸಿಎಂ ಯಡಿಯೂರಪ್ಪಗೆ ವೇದಿಕೆ ಮೇಲೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಸಿಎಂ ಯಡಿಯೂರಪ್ಪ ಸಾಮಾನ್ಯ ಕಾರ್ಯಕರ್ತನಂತೆ ವೇದಿಕೆಯ ಮುಂಭಾಗದಲ್ಲಿ ಕುಳಿತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು.
Advertisement
Advertisement
ಸುಮಾರು ಒಂದು ಗಂಟೆಗಳ ಕಾಲ ಕಾರ್ಯಕ್ರಮ ನಡೆಯಿತು. ಸಿಎಂ ಯಡಿಯೂರಪ್ಪ ಸಂಪೂರ್ಣ ಕಾರ್ಯಕ್ರಮ ಮುಗಿಯುವರೆಗೆ ಇದ್ದರು. ಸಿಎಂ ಜೊತೆ ಸಚಿವರಾದ ಸೋಮಣ್ಣ, ಭೈರತಿ ಬಸವರಾಜ್, ಸೋಮಶೇಖರ್ ಸೇರಿ ಹಲವರು ಭಾಗವಹಿಸಿದ್ರು. ಎಲ್ಲರೂ ವೇದಿಕೆ ಮುಂಭಾಗದಲ್ಲಿ ಕುಳಿತು ಆರ್‌ಎಸ್‌ಎಸ್ ಕಾರ್ಯಕರ್ತರಂತೆ ಶಿಸ್ತಿನ ಸಿಪಾಯಿಗಳಾಗಿದ್ದರು.
Advertisement
Advertisement
ವಿಜಯೇಂದ್ರ ಭಾಗಿ: ಒಂದು ಕಡೆ ಸಿಎಂ ಯಡಿಯೂರಪ್ಪ ಸಂಘದ ಕಾರ್ಯಕರ್ತನಂತೆ ವೇದಿಕೆ ಮುಂಭಾಗದಲ್ಲಿ ಕುಳಿತಿದ್ರೆ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಕೂಡಾ ಕಾರ್ಯಕ್ರಮ ವೀಕ್ಷಣೆಗೆ ಆಗಮಿಸಿ ವಿದ್ಯಾರ್ಥಿಯಾಗಿದ್ದರು. ವಿಜಯೇಂದ್ರ ತಮ್ಮ 8-10 ನೇ ತರಗತಿ ವ್ಯಾಸಂಗವನ್ನ ಇದೇ ಶಾಲೆಯಲ್ಲಿ ಮುಗಿಸಿದ್ರು. ಹೀಗಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಸಿಎಂ ಮಗ ಅನ್ನೊ ಹಮ್ಮು ಬಿಟ್ಟು ಶಾಲೆಯ ಹಳೆ ವಿದ್ಯಾರ್ಥಿತರಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು. ಹಳೆ ವಿದ್ಯಾರ್ಥಿಗಳ ಸಾಲಿನಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಣೆ ಮಾಡಿದ್ರು.