ಚೆನ್ನೈ: ಮಧುರೈನ (Madurai) ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ʻತಾಯ್ ಮಾಮನ್ ತಂಗ ಮೋದಿರಂʼ (Thai Maaman Thanga Mothiram Thittam) (ತಾಯಿಯ ಸಹೋದರನ ಚಿನ್ನದುಂಗುರ ಯೋಜನೆ) ಯೋಜನೆಗೆ ತಮಿಳುನಾಡು (Tamil Nadu) ಸಿಎಂ ಜೋಸೆಫ್ ವಿಜಯ್ (CM Vijay) ಚಾಲನೆ ನೀಡಿದರು. ಉದ್ಘಾಟನಾ ಸಮಾರಂಭದಲ್ಲಿ ಅವರು ನವಜಾತ ಶಿಶುವಿಗೆ 1 ಗ್ರಾಂ ಚಿನ್ನದ ಉಂಗುರ ತೊಡಿಸಿದರು.
ಆಸ್ಪತ್ರೆಯ ಹೆರಿಗೆ ವಾರ್ಡ್ಗೆ ಭೇಟಿ ನೀಡಿದ ಅವರು, ನವಜಾತ ಶಿಶುಗಳಿಗೆ ಆಶೀರ್ವದಿಸಿದರು. ಬಳಿಕ ಶಿಶುಗಳ ಪೋಷಕರಿಗೆ ಉಂಗುರಗಳನ್ನು ವಿತರಿಸಿದರು.

ಟಿವಿಕೆ ಪಕ್ಷ ಚುನಾವಣೆಗೂ ಮುನ್ನ ಅಧಿಕಾರಕ್ಕೆ ಬಂದರೆ ಈ ಯೋಜನೆ ಜಾರಿಗೊಳಿಸುವ ಬಗ್ಗೆ ಘೋಷಿಸಿತ್ತು. ಈ ಯೋಜನೆ ಅಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಶಿಶುಗಳಿಗೆ ಸರ್ಕಾರವು ಒಂದು ಗ್ರಾಂ, 22 ಕ್ಯಾರೆಟ್ ಚಿನ್ನದ ಉಂಗುರವನ್ನು ನೀಡುತ್ತದೆ. ಈ ಯೋಜನೆಗೆ ಅರ್ಹತೆ ಪಡೆಯಲು, ನವಜಾತ ಶಿಶುಗಳ ತಾಯಂದಿರು ತಮಿಳುನಾಡಿನ ಖಾಯಂ ನಿವಾಸಿಗಳಾಗಿರಬೇಕು. ಇದನ್ನೂ ಓದಿ: 12,300 ಕೋಟಿ ಹೂಡಿಕೆ, 10,000 ಉದ್ಯೋಗ ಸೃಷ್ಟಿ – ವಿಪಕ್ಷಗಳ ಟೀಕೆ ನಡುವೆ ವಿಜಯ್ ಯುಕೆ ಪ್ರವಾಸ ಸಕ್ಸಸ್
ಈ ಯೋಜನೆಗಾಗಿ ರಾಜ್ಯ ಸರ್ಕಾರ ವಾರ್ಷಿಕ 755.83 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಈಗಾಗಲೇ 1.28 ಲಕ್ಷ ಉಂಗುರಗಳನ್ನು ಈಗಾಗಲೇ ಸಿದ್ಧಪಡಿಸಿ ಇಡಲಾಗಿದೆ. ಈ ಉಂಗುರಗಳು ವಿಶಿಷ್ಟ ಸರಣಿ ಸಂಖ್ಯೆಗಳನ್ನು ಹೊಂದಿರುತ್ತವೆ. ಟ್ಯಾಂಪರ್-ಪ್ರೂಫ್ ಪ್ಯಾಕೇಜಿಂಗ್ನಲ್ಲಿ ಈ ಉಂಗುರಗಳನ್ನು ವಿತರಿಸಲಾಗುತ್ತದೆ.
BIG BREAKING:
CM Vijay places the first 1-gram gold ring on a newborn baby at the launch of the Thai Maaman Thanga Mothiram Thittam in Madurai. #CMVijayAtMadurai pic.twitter.com/5uMUAxOvnT
— Actor Vijay Team (@ActorVijayTeam) September 28, 2026
ಅಕ್ಟೋಬರ್ 6 ರಂದು ಉಪಚುನಾವಣೆ ನಡೆಯಲಿರುವ ಮಧುರಾಂತಕಂ ಮತ್ತು ಧಾರಾಪುರಂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಪ್ರದೇಶಗಳನ್ನು ಹೊರತುಪಡಿಸಿ, ರಾಜ್ಯಾದ್ಯಂತ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
ಅರ್ಹ ಫಲಾನುಭವಿಗಳು ನೋಂದಾಯಿಸಿಕೊಂಡಿರಬೇಕು. ಅಲ್ಲದೇ ಮಕ್ಕಳ ಆರೋಗ್ಯ ಕಾರ್ಡ್ (RCH) ID ಹೊಂದಿರಬೇಕು. ಫಲಾನುಭವಿಗಳು ಆಸ್ಪತ್ರೆಗಳಿಂದ ಬಿಡುಗಡೆಯಾದಾಗ ಉಂಗುರಗಳನ್ನು ನೀಡಲಾಗುತ್ತದೆ.
ಉಂಗುರಗಳ ಪೂರೈಕೆ ಕೆಲಸವನ್ನು ಜೋಯಾಲುಕ್ಕಾಸ್ ಮತ್ತು ಕಲ್ಯಾಣ್ ಜ್ಯುವೆಲ್ಲರ್ಸ್ಗೆ ನೀಡಲಾಗಿದೆ. ಯೋಜನೆಯ ಅನುಷ್ಠಾನದ ಕುರಿತು ಜೂನ್ 23, 2026 ರಂದು ಸರ್ಕಾರಿ ಆದೇಶವನ್ನು ಪ್ರಕಟಿಸಲಾಗಿತ್ತು. ಸ್ಥಳೀಯ ಅನುಷ್ಠಾನ, ದಾಸ್ತಾನು, ವಿತರಣೆಯಲ್ಲಿ ಪಾರದರ್ಶಕತೆಯನ್ನು ಮೇಲ್ವಿಚಾರಣೆ ಮಾಡಲು ಆಯಾ ಜಿಲ್ಲಾಧಿಕಾರಿಗಳ ಅಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ವಿಶೇಷ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ. ಇದನ್ನೂ ಓದಿ: ಹೂಡಿಕೆ ಪ್ರವಾಸವೋ, ಪರ್ಸನಲ್ ಟ್ರಿಪ್ಪೋ? – ಸಿಎಂ ವಿಜಯ್ ಲಂಡನ್ ಭೇಟಿಗೆ ಬಿಜೆಪಿ, ಡಿಎಂಕೆ ಲೇವಡಿ

