ಹಾಸನ: ಕೇಂದ್ರದ ಅನುದಾನ ಬಳಕೆಯಾಗಿಲ್ಲ ಅಂತ ಹೇಳುವ ಮೂಲಕ ಬಜೆಪಿ ರಾಷ್ಟ್ರಾದ್ಯಕ್ಷ ಅಮಿತ್ ಶಾ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಶ್ರವಣಬೆಳಗೊಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರದ್ದು ಒಂದು ರೀತಿಯ ಹಿಟ್ ಆಂಡ್ ರನ್ ಕೇಸ್. ಅವರದು ಒಂದು ರೀತಿಯ ಹಿಟ್ ಅಂಡ್ ಕೇಸ್. ಭಿಕ್ಷೆ ಕೊಟ್ಟವರ ಹಾಗೆ ಮಾತನಾಡಬಾರದು. ಅದು ಕೇಂದ್ರದ ಹಣ ಅಲ್ಲ, ನಮ್ಮ ತೆರಿಗೆ ಹಣ ಅಂತ ಹೇಳಿದ್ರು.
Advertisement
Advertisement
5 ವರ್ಷದಲ್ಲಿ 1.86 ಸಾವಿರ ಕೋಟಿ ಕೊಡಬೇಕು. 3 ವರ್ಷದಲ್ಲಿ 95 ಸಾವಿರ ಕೋಟಿ ಬರಬೇಕು. ತೆರಿಗೆ ಸಂಗ್ರಹ ಕಡಿಮೆಯಾದ್ರೆ ನಮಗೂ ಕಡಿಮೆ ಮಾಡುತ್ತಾರೆ. ಕೇಂದ್ರದವರು ಎಲ್ಲಾ ತೆರಿಗೆ ಸಂಗ್ರಹ ಮಾಡೋರು. ಅದರಲ್ಲಿ ನಮಗೆ ಪಾಲು ಕೊಡಬೇಕು. ಮೂರು ವರ್ಷಗಳಲ್ಲಿ 11 ಸಾವಿರ ಕೋಟಿ ಕಡಿಮೆಯಾಗಿದೆ. 14 ನೇ ಹಣಕಾಸು ಆಯೋಗ ನಿಗದಿ ಮಾಡೋದು ನಮ್ಮಪಾಲಿನ ಹಣ. ಯಾವ ಅನುದಾನ ಖರ್ಚುಮಾಡಿಲ್ಲ ಎಂಬುದನ್ನು ಹೇಳಲಿ. ಷಾ ಸರಿಯಾಗಿ ತಿಳಿದು ಮಾತಾಡಲಿ ಎಂದು ತಿರುಗೇಟು ನೀಡಿದ್ರು.
Advertisement
ಇದನ್ನೂ ಓದಿ: ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ ಎರಡೂವರೆ ಲಕ್ಷ ಕೋಟಿ ರೂ. ಅನುದಾನ ಏನಾಯ್ತು: ಸಿದ್ದರಾಮಯ್ಯಗೆ ಅಮಿತ್ ಶಾ ಪ್ರಶ್ನೆ
Advertisement
ಇದೇ ಸಂದರ್ಭದಲ್ಲಿ ಖಾಸಗಿ ವೈದ್ಯರ ಮುಷ್ಕರ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಕಾಯ್ದೆ ತಿದ್ದುಪಡಿ ಬಗ್ಗೆ ಈಗಾಗಲೇ ಅಧಿವೇಶನದಲ್ಲಿ ಚರ್ಚೆಯಾಗಿದೆ. ಇನ್ನೂ ಕಾನೂನು ಮಾಡಿಲ್ಲ. ಬಡವರಿಗೆ ತೊಂದರೆಯಾಗದಂತೆ ನಿಯಂತ್ರಣ ಮಾಡಲು ನಾವು ಚಿಂತಿಸಿದ್ದೇವೆ. ಮತ್ತೆ ಸದನದಲ್ಲಿ ಚರ್ಚೆ ಮಾಡುತ್ತೇವೆ. ಸಹಕಾರ ಬ್ಯಾಂಕ್ ಗಳ ಸಾಲ ಮನ್ನಾ ಒಂದೂವರೆ ಸಾವಿರ ಕೋಟಿ ಅಪೆಕ್ಸ್ ಬ್ಯಾಂಕ್‍ಗೆ ನೀಡಿದ್ದೇವೆ ಅಂದ್ರು.
ಇದನ್ನೂ ಓದಿ: ಅಮಿತ್ ಶಾ ಬಿಜೆಪಿ ನಾಯಕರಿಗೆ ಸುಳ್ಳು ಹೇಳುವುದನ್ನು ಹೇಳಿಕೊಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ
ಶ್ರೀನಿವಾಸ್ ಪ್ರಸಾದ್ ಟೀಕೆಗೆ ಉತ್ತರಿಸಿದ ಅವರು, ಅವರ ಆರೋಪದಲ್ಲಿ ಹುರುಳಿಲ್ಲ. ರಾಜ್ಯಾದ್ಯಂತ ಕಾಂಗ್ರೆಸ್ ಜೆಡಿಎಸ್ ವಿರುದ್ಧವೂ ಹೋರಾಡುತ್ತಿದೆ. ಮಾಜಿ ಸಿಎಂ ಯಡಿಯೂರಪ್ಪಗೆ ಸಂಸ್ಕೃತಿ ಇಲ್ಲ. ಜೈಲಿಗೆ ಹೋಗಿ ಬಂದಿದ್ದಾರೆ. ಅಧಿಕಾರ ಇಲ್ಲದ ಕಾರಣಕ್ಕೇ ಏನೆನೋ ಮಾತನಾಡುತ್ತಾರೆ ಎಂದು ಸಿಎಂ ಟೀಕೆ ಮಾಡಿದ್ರು.
ಇದನ್ನೂ ಓದಿ: ಬಿಜೆಪಿ ಪರಿವರ್ತನಾ ರ‍್ಯಾಲಿಗೆ ಗೈರಾಗಿದ್ದ ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ಹೇಳಿದ್ದೇನು?
https://www.youtube.com/watch?v=CTEKv_DPy30