ಬೆಂಗಳೂರು/ಆನೇಕಲ್: ಚಿನ್ನಸ್ವಾಮಿ ಕ್ರೀಡಾಂಗಣದ ದುರಂತದ ಬಳಿಕ ಎಚ್ಚೆತ್ತ ಗೃಹಮಂಡಳಿ ಇದೀಗ 80 ಸಾವಿರ ಆಸನಗಳ್ಳುಳ್ಳ, ದೇಶದ ಎರಡನೇ ಅತಿ ದೊಡ್ಡ ಹಾಗೂ 900 ಕೋಟಿ ರೂ. ವೆಚ್ಚದ ಕ್ರೀಡಾಂಗಣ ನಿರ್ಮಿಸುತ್ತಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಂದು (ಮೇ 23) ಈ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಈ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಶಂಕುಸ್ಥಾಪನೆ, ಮುಖ್ಯಮಂತ್ರಿಗಳ “ನಮ್ಮ ಮನೆ” ಯೋಜನೆ ಚಾಲನೆ, ಸೂರ್ಯಶೈನ್, ಸೂರ್ಯ ಡಿವೈನ್ ವಸತಿ ಸಮುಚ್ಚಯ ಕಾಮಗಾರಿಗಳ ಶಂಕುಸ್ಥಾಪನೆ, ವಸತಿ ಯೋಜನೆಗೆ ಭೂಮಿ ನೀಡಿದ ಭೂ ಮಾಲೀಕರಿಗೆ ಸಾಂಕೇತಿಕ ನಿವೇಶನ ಹಂಚಿಕೆ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ಇದನ್ನೂ ಓದಿ: ಕೆಮಿಕಲ್ ಸೋರಿಕೆ – ಕ್ಯಾಲಿಫೋರ್ನಿಯಾದಲ್ಲಿ 40 ಸಾವಿರ ಜನರ ಸ್ಥಳಾಂತರಕ್ಕೆ ಸೂಚನೆ
ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ ಕ್ರೀಡೆ, ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ ಸೇರಿ ಎಲ್ಲಾ ದೃಷ್ಟಿಯಿಂದ ಈ ಭಾಗದ ಸಮಗ್ರ ಅಭಿವೃದ್ಧಿಗೆ ನಾವು ಮುಂದಡಿ ಇಟ್ಟಿದ್ದೇವೆ.
ಇಲ್ಲಿಯವರೆಗೂ ಕೇವಲ ವಸತಿ ನಿರ್ಮಾಣ ಮಾಡುತ್ತಿದ್ದ ವಸತಿ ಇಲಾಖೆ ಮತ್ತು ಕೆಹೆಚ್‌ಬಿ ಈಗ 80 ಸಾವಿರ… pic.twitter.com/4oe4B725xX
— Siddaramaiah (@siddaramaiah) May 23, 2026
ವಸತಿ ಇಲಾಖೆ, ಕರ್ನಾಟಕ ಗೃಹ ಮಂಡಳಿ ಜಂಟಿಯಾಗಿ ಆನೇಕಲ್‌ನ ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ ಕ್ರೀಡೆ, ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ ಸೇರಿ ಎಲ್ಲಾ ದೃಷ್ಟಿಯಿಂದ ಈ ಭಾಗದ ಸಮಗ್ರ ಅಭಿವೃದ್ಧಿ ಕೈಗೊಂಡಿದೆ. ಈ ಕ್ರೀಡಾಂಗಣವು 100 ಎಕರೆಯಲ್ಲಿ 900 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಒಟ್ಟು 27 ಕ್ರೀಡೆಗಳನ್ನ ಒಳಗೊಂಡಿದೆ.
ಬೆಂಗಳೂರಿನ ಆನೇಕಲ್ ತಾಲೂಕಿನ ಸೂರ್ಯನಗರದಲ್ಲಿ ನಿರ್ಮಾಣಗೊಳ್ಳಲಿರುವ ದೇಶದ ಎರಡನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಐತಿಹಾಸಿಕ ಕ್ಷಣ pic.twitter.com/YwqrYMaljT
— Siddaramaiah (@siddaramaiah) May 23, 2026
ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ವೈಶಿಷ್ಟ್ಯ ಏನು?
> 80 ಸಾವಿರ ಆಸನವುಳ್ಳ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ
> ಹಗಲು-ರಾತ್ರಿ ಪಂದ್ಯಗಳಿಗೆ ಕ್ರೀಡಾ ಬೆಳಕು ಹೊಂದಿದ ಕ್ರೀಡಾಂಗಣ
> ನಾಲ್ಕು ತಂಡಗಳ ಆಟಗಾರರಿಗೆ ಲಾಕರ್ ರೂಂಗಳು ಮತ್ತು ಸೌಲಭ್ಯಗಳು
> ಒಳಾಂಗಣ ಮತ್ತು ಹೊರಾಂಗಣ ಅಭ್ಯಾಸ ಮೈದಾನ ಹಾಗೂ ನೆಟ್‌ಗಳು
> ಪಂದ್ಯ ಅಧಿಕಾರಿಗಳಿಗೆ ಸೌಲಭ್ಯಗಳು
> ವಿಐಪಿ ಲಾಂಜ್‌ಗಳು, ಕಾರ್ಪೋರೆಟ್ ಬಾಕ್ಸ್‌ಗಳು ಮತ್ತು ಅಧ್ಯಕ್ಷೀಯ ಸೂಟ್
> ಮಾಧ್ಯಮ ವಿಭಾಗ ಮತ್ತು ಪತ್ರಿಕಾ ವಿಭಾಗ
> ಪ್ರೇಕ್ಷಕರಿಗೆ ಅಗತ್ಯ ಸೌಲಭ್ಯಗಳು ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗಳು
> ಜಮೀನಿನ ವಿಸ್ತೀರ್ಣ ಒಟ್ಟು 75 ಎಕರೆ
> ಪ್ರಾಜೆಕ್ಟ್‌ಗೆ ಇಟ್ಟಿರೋ ಮೊತ್ತ 943.46 ಕೋಟಿ ರೂ.
> 500 ವಾಹನಗಳಿಗೆ ಬಹುಮಹಡಿ ವಾಹನಗಳ ನಿಲುಗಡೆ ವ್ಯವಸ್ಥೆ.
> ವಾಣಿಜ್ಯ, ಚಿಲ್ಲರೆ ವ್ಯಾಪಾರ ಸಂಕೀರ್ಣ, ಕ್ರೀಡಾ ಅಂಗಡಿ, ಉಪಹಾರ ಗೃಹ.
> ಆಟಗಾರರು, ಕೋಚ್ ಹಾಗೂ ಸಿಬ್ಬಂದಿಗಳಿಗೆ ವಸತಿ ಸೌಲಭ್ಯ.
> ರಸ್ತೆ, ಹೆಲಿಪ್ಯಾಡ್, ಸಾರ್ವಜನಿಕ ಪ್ಲಾಜಾ, ಹಸಿರು ಪ್ರದೇಶ ಹಾಗೂ ಪಾರ್ಕಿಂಗ್ ಸೇರಿದಂತೆ ಇತರೆ ಸೌಲಭ್ಯ
ವಸತಿ ಇಲಾಖೆ, ಕರ್ನಾಟಕ ಗೃಹ ಮಂಡಳಿ ಜಂಟಿಯಾಗಿ ಸೂರ್ಯನಗರದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಶಂಕುಸ್ಥಾಪನೆ, ಮುಖ್ಯಮಂತ್ರಿಗಳ “ನಮ್ಮ ಮನೆ” ಯೋಜನೆಗೆ ಚಾಲನೆ, ಸೂರ್ಯಶೈನ್, ಸೂರ್ಯ ಡಿವೈನ್ ವಸತಿ ಸಮುಚ್ಚಯ ಕಾಮಗಾರಿಗಳ ಶಂಕುಸ್ಥಾಪನೆ, ವಸತಿ ಯೋಜನೆಗೆ ಭೂಮಿ ನೀಡಿದ ಭೂ ಮಾಲೀಕರಿಗೆ ಸಾಂಕೇತಿಕ ನಿವೇಶನ ಹಂಚಿಕೆ… pic.twitter.com/PciP9MbLxu
— Siddaramaiah (@siddaramaiah) May 23, 2026
ಒಳಾಂಗಣ ಕ್ರೀಡಾಂಗಣದ ವಿವರ
– ಒಳಾಂಗಣ ಕ್ರೀಡಾಂಗಣದಲ್ಲಿ (11 ಕ್ರೀಡೆಗಳು) ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್, ವಾಲಿಬಾಲ್, ಹ್ಯಾಂಡ್ ಬಾಲ್, ಟೇಬಲ್ ಟೆನ್ನಿಸ್ ಬಾಲ್, ಫೆನ್ಸಿಂಗ್, ವೇಟ್ ಲಿಫ್ಟಿಂಗ್, ಕಬಡ್ಡಿ, ಖೋ-ಖೋ, ಸ್ಕ್ಯಾಷ್, ಜುಡೋ/ಟೈಕ್ವಾಂಡೋ/ಕುಸ್ತಿ ಸೌಲಭ್ಯ
ಹೊರಾಂಗಣ ಕ್ರೀಡಾ ಸೌಲಭ್ಯಗಳು (8 ಕ್ರೀಡೆಗಳು)
– ಅಥ್ಲೆಟಿಕ್ ಟ್ರ‍್ಯಾಕ್, ಟೆನ್ನಿಸ್, ಬಾಸ್ಕೆಟ್ ಬಾಲ್, ವಾಲಿಬಾಲ್, ಹ್ಯಾಂಡ್ ಬಾಲ್, ಪಾಡೆಲ್, ಪಿಕಲ್ ಬಾಲ್
ಜಲಕ್ರೀಡಾ ಸಂಕೀರ್ಣ (3 ಕ್ರೀಡೆಗಳು)
– ಒಲಂಪಿಕ್ ಗಾತ್ರದ ಈಜುಕೊಳ, ಡೈವಿಂಗ್ ಪೋಲ್ ಮತ್ತು ಅಭ್ಯಾಸ ಪೋಲ್.ಇದನ್ನೂ ಓದಿ: ಕೊರೋನಾ ಬಳಿಕ ಎಬೋಲಾ ಆತಂಕ – ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ
