ಬೆಂಗಳೂರು: ಭಾನುವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪದಲ್ಲಿ ಭಾಗಿಯಾಗಿ ಪ್ರಧಾನಿ ಮೋದಿ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈಗ ಸಿಎಂ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿ ಅವರನ್ನು ‘ವಾಕ್ ದ ಟಾಕ್’ (ಬಹಿರಂಗ ಚರ್ಚೆ)ಗೆ ಆಹ್ವಾನಿಸಿದ್ದಾರೆ.
ಪರಿವರ್ತನಾ ಯಾತ್ರೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ್ದು ಸಂತೋಷದ ವಿಚಾರವಾಗಿದೆ. ನಾನು ಇವಾಗ ನಿಮ್ಮನ್ನು ‘ವಾಕ್ ದ ಟಾಕ್’ಗೆ ಆಹ್ವಾನಿಸುತ್ತಿದ್ದೇನೆ. ಈ ಪ್ರಶ್ನೆಗಳಿಂದಲೇ ಆರಂಭವಾಗಲಿ ಎಂದು ಸವಾಲ್ ಹಾಕಿದ್ದಾರೆ.
1. ಲೋಕ್ ಪಾಲ್ ನೇಮಕ.
2. ಜಡ್ಜ್ ಲೋಯಾ ಸಾವಿರ ಪ್ರಕರಣಸ ತನಿಖೆ
3. ಅಮಿತ್ ಶಾ ಪುತ್ರ ಜೈಶಾ ಆಸ್ತಿ ಹೆಚ್ಚಳ ವಿಚಾರ
4. ಕಳಂಕರಹಿತ ಸಿಎಂ ಅಭ್ಯರ್ಥಿಗಳ ನೇಮಕ?
Advertisement
Advertisement
ಮೋದಿ ಅವರು ಪ್ರಧಾನಿ ಸ್ಥಾನದಂತ ಉನ್ನತ ಹುದ್ದೆಯಲ್ಲಿರಲು ನೈತಿಕವಾಗಿ ಅರ್ಹರಲ್ಲ. ದೇಶದ ಪ್ರಧಾನಿಯಾಗಿ ಮಾತನಾಡದೆ ಬಿಎಸ್‍ವೈ ಯಾತ್ರೆಯ ಮುಂದುವರಿದ ಭಾಗದಂತೆ ಸುಳ್ಳು ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಅಲ್ಲ ಮೋದಿಗೆ ಕೌಂಟ್‍ಡೌನ್ ಶುರುವಾಗಿದೆ ಅಂತ ಮೋದಿ ಭಾಷಣಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದರು.
Advertisement
ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದು ಹೋದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತು ಸಿಎಂ ಸಿದ್ದರಾಮಯ್ಯ ನಡುವಿನ ಟ್ವಿಟ್ಟರ್ ವಾರ್ ಬಿರುಸುಗೊಂಡಿದೆ. ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು ಎಂದು ಲೇವಡಿ ಮಾಡಿದ್ದ ಸಿಎಂ ಸಿದ್ದರಾಮಯ್ಯಗೆ ಬಿಎಸ್‍ವೈ ತೀಕ್ಷ್ಣವಾಗಿ ಉತ್ತರ ಕೊಟ್ಟಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಎಸ್‍ವೈ, 2012ರಲ್ಲಿ ನಾನು ನಿದೋರ್ಷಿ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಕಾನೂನು ಪದವಿ ಓದಿ ನ್ಯಾಯತಂತ್ರ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲವೆಂದರೆ ಅದು ನೀವು ಸಂವಿಧಾನಕ್ಕೆ ತೋರುವ ಅಗೌರವ ಅಂತ ಪ್ರತಿಕ್ರಿಯಿಸಿದ್ದಾರೆ. ಪ್ರಚಾರಕ್ಕಾಗಿ ನಿಮ್ಮ ಬೌದ್ಧಿಕ ದಾರಿದ್ರ್ಯವನ್ನು ನಾಡಿನ ಜನತೆ ಮುಂದೆ ನೀವೇ ತೋರುತ್ತಿದ್ದೀರಿ ಅಂತ ಬಿಎಸ್‍ವೈ ವ್ಯಂಗ್ಯ ಮಾಡಿದ್ದಾರೆ.
Advertisement
I am glad PM @narendramodi is talking about corruption. I now invite him to #WalktheTalk . For a start can you
1. Appoint Lok Pal
2. Investigate #JudgeLoya ‘s death
3. Investigate the astronomical rise of #Jayshah
4. Appoint an untainted person as your CM candidate ?
— Siddaramaiah (@siddaramaiah) February 6, 2018
ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ #NarendraModi ಅವರು ಒಂಬತ್ತು ವರ್ಷಗಳ ಕಾಲ ಲೋಕಾಯುಕ್ತರನ್ನೇ ನೇಮಿಸಿರಲಿಲ್ಲ, ಈಗ ನಾಲ್ಕು ವರ್ಷಗಳಿಂದ ಲೋಕಪಾಲರನ್ನೇ ನೇಮಿಸಿಲ್ಲ ಯಾಕೆ? ಭ್ರಷ್ಟರನ್ನು ರಕ್ಷಿಸುವುದಕ್ಕೋ?
— Siddaramaiah (@siddaramaiah) February 5, 2018
೨೦೦೨ರಲ್ಲಿ ಗುಜರಾತ್ ಕೋಮುಗಲಭೆಗೆ ೨೦೦೦ಕ್ಕೂ ಹೆಚ್ಚು ಅಮಾಯಕರು ಪ್ರಾಣ ಕಳೆದುಕೊಂಡರಲ್ಲಾ, ಆಗ ಆ ರಾಜ್ಯದ ಮುಖ್ಯಮಂತ್ರಿಯಾಗಿದ್ದದ್ದು ನೀವೇ ಅಲ್ಲವೇ #NarendraModi ಅವರೇ? ಅಪರಾಧದ ಬಗ್ಗೆ ಕನ್ನಡಿಗರಿಗೆ ಪಾಠ ಬೇಡ.ನಾವು ಹಾಗಿಲ್ಲ.
— Siddaramaiah (@siddaramaiah) February 5, 2018
ಚೆಕ್‍ನಲ್ಲಿಯೇ ಲಂಚ ಪಡೆದು ಜೈಲಿಗೆ ಹೋಗಿ ಬಂದವರು ಯಡಿಯೂರಪ್ಪನವರು. ಅವರಜೊತೆಗಿರುವ ಕಟ್ಟಾ ಸುಬ್ರಮಣ್ಯನಾಯ್ಡು, ಜನಾರ್ಧನಾ ರೆಡ್ಡಿ,ಕೃಷ್ಣಯ್ಯ ಶೆಟ್ಟಿ ಎಲ್ಲರೂ ಪರ್ಸೆಂಟೇಜ್ ವ್ಯವಹಾರದಲ್ಲಿ ತಜ್ಞರು. ಅವರನ್ನೇ #NarendraModi ಕೇಳಬಹುದಿತ್ತು.
— Siddaramaiah (@siddaramaiah) February 5, 2018