ಬೆಂಗಳೂರು: ಪಕ್ಷದ ಮೈತ್ರಿ ನಿರ್ಧಾರ, ಪಕ್ಷದ ನಾಯಕರ ವಿರುದ್ಧ ಬಂಡೆದಿದ್ದ ಸಿಎಂ ಇಬ್ರಾಹಿಂ (CM Ibrahim) ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಪದಚ್ಯುತಿ ಮಾಡಲಾಗಿದೆ. ಈ ಮೂಲಕ ಪಕ್ಷದ ವಿರುದ್ಧ ಸಮರ ಸಾರಿದ್ದ ಸಿಎಂ ಇಬ್ರಾಹಿಂ ಅವರಿಗೆ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು (HD Deve Gowda) ಕೌಂಟರ್ ಕೊಟ್ಟಿದ್ದಾರೆ.
ಕಳೆದ ಸೋಮವಾರಷ್ಟೇ ಬೆಂಬಲಿಗರ ಸಭೆ ಮಾಡಿದ್ದ ಸಿಎಂ ಇಬ್ರಾಹಿಂ, ನಮ್ಮದೇ ಒರಿಜಿನಲ್ ಜೆಡಿಎಸ್ (JDS) ಅಂದಿದ್ದರು. ಕುಮಾರಸ್ವಾಮಿಯವರನ್ನೇ (HD Kumaraswamy) ಉಚ್ಛಾಟನೆ ಮಾಡುವ ಸೂಚನೆ ಕೊಟ್ಟಿದ್ದರು. ಇದರಿಂದ ಕೆರಳಿದ್ದ ವರಿಷ್ಠ ದೇವೇಗೌಡರು ಇಂದು ಕೋರ್ ಕಮಿಟಿ ಸಭೆ, ಶಾಸಕಾಂಗ ಸಭೆ, ರಾಜ್ಯ ಕಾರ್ಯಕಾರಣಿ ಸಭೆ ಮಾಡಿ ಸಿಎಂ ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಪದಚ್ಯುತಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಎಲ್ಲಾ ಘಟಕಗಳನ್ನು ವಿಸರ್ಜನೆ ಮಾಡಿ ಮಾಜಿ ಸಿಎಂ, ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಅವರನ್ನು ಹಂಗಾಮಿ ರಾಜ್ಯಾಧ್ಯಕ್ಷರಾಗಿ (ಅಡಾಕ್ ಅಧ್ಯಕ್ಷ) ನೇಮಕ ಮಾಡಿದರು. ಈ ಮೂಲಕ ಸಿಎಂ ಇಬ್ರಾಹಿಂ ಕೌಂಟರ್‌ಗೆ ದೇವೇಗೌಡರು ಪ್ರತಿ ಕೌಂಟರ್ ಕೊಟ್ಟರು. ಇದನ್ನೂ ಓದಿ: ಕಳ್ಳನ ಹೆಂಡ್ತಿ ಯಾವತ್ತಿದ್ರೂ ಡ್ಯಾಶ್ ಡ್ಯಾಶ್ – ಸಿ.ಟಿ ರವಿ ಹೀಗ್ಯಾಕಂದ್ರು?
Advertisement
Advertisement
ಈ ವೇಳೆ ಮಾತನಾಡಿದ ಜೆಡಿಎಸ್ ವರಿಷ್ಠ ದೇವೇಗೌಡರು, 19 ಜನ ಶಾಸಕರು, ಎಂಎಲ್‌ಸಿಗಳ ನೇತೃತ್ವದಲ್ಲಿ ಎರಡು ಸಭೆ ಇಬ್ರಾಹಿಂ ನೇತೃತ್ವದಲ್ಲಿ ನಡೆದು ಮೈತ್ರಿಗೆ ಒಪ್ಪಿಗೆ ಕೊಡಲಾಗಿತ್ತು. ಬಳಿಕ ಇಬ್ರಾಹಿಂ ಅವರ ಭಾವನೆ ಹೇಳಿದ್ದಾರೆ. ಅನೇಕ ಮುಸ್ಲಿಂ ಸಮುದಾಯದ ನಾಯಕರು ನಮ್ಮ ಜೊತೆ ಇದ್ದಾರೆ. ಹೀಗಾಗಿ ಪಕ್ಷದ ನಿಯಮ 10ರ ಅನ್ವಯ ಇಬ್ರಾಹಿಂ ಅವರನ್ನು ಪದಚ್ಯುತಿ ಮಾಡಿ ಇಡೀ ಘಟಕಗಳನ್ನು ವಿಸರ್ಜನೆ ಮಾಡಿದರು. ಕೋರ್ ಕಮಿಟಿ, ಶಾಸಕಾಂಗ ಸಭೆ, ರಾಜ್ಯ ಕಾರ್ಯಕಾರಿಣಿ ಸರ್ವಾನುಮತದಿಂದ ಕುಮಾರಸ್ವಾಮಿಯವರನ್ನು ಅಧ್ಯಕ್ಷರಾಗಿ ನೇಮಕ ಮಾಡಿದ್ದು, ಲೋಕಸಭೆ ಚುನಾವಣೆಗೆ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್
Advertisement
Advertisement
ನೂತನ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಪಕ್ಷ ಸಂಘಟನೆ, ಚುನಾವಣೆ ಹಿನ್ನೆಲೆಯಲ್ಲಿ ವರಿಷ್ಠರು ಜವಾಬ್ದಾರಿ ಕೊಟ್ಟಿದ್ದು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ವಿಜಯದಶಮಿ ಬಳಿಕ ಘಟಕಗಳ ಪುನರ್ ರಚನೆ ಮಾಡುವುದಾಗಿ ತಿಳಿಸಿದರು. ಇದನ್ನೂ ಓದಿ: ಈಶ್ವರಪ್ಪ ನ್ಯಾಯಾಧೀಶರಾಗಿ ನನ್ನ ಜೈಲಿಗೆ ಕಳುಹಿಸಲಿ: ಡಿಸಿಎಂ
Web Stories