ಬೆಂಗಳೂರು: ಅವಿರೋಧವಾಗಿ ಯು.ಟಿ ಖಾದರ್ (UT Khader) ಅವರು ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಆದರೆ ಈ ವಿಚಾರವಾಗಿ ಸಿಎಂ ಇಬ್ರಾಹಿಂ (CM Ibrahim) ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಖಾದರ್ ಗೆ ಸ್ಪೀಕರ್ (Speaker) ಸ್ಥಾನ ನೀಡಿದ ವಿಚಾರದ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಖಾದರ್ ಅವರನ್ನ ಡಿಸಿಎಂ (DCM) ಮಾಡಬಹುದಿತ್ತು. ಈಗ ಸ್ಪೀಕರ್ ಮಾಡಿ ಅವರು ಮಾತಾಡೋ ಹಾಗೂ ಇಲ್ಲ. ಎದ್ದೇಳಿ, ಕುಳಿತುಕೊಳ್ಳಿ ಎನ್ನಬೇಕು ಅಷ್ಟೆ. ಆದರೂ ಖಾದರ್ ಅವರಿಗೆ ಶುಭವಾಗಲಿ ಎಂದರು. ಇದನ್ನೂ ಓದಿ: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಎಂ ಇಬ್ರಾಹಿಂ ರಾಜೀನಾಮೆ
ಮಂಗಳೂರು ವಿಧಾನಸಭಾ ಕ್ಷೇತ್ರದದಿಂದ ನಿರಂತರವಾಗಿ ಆಯ್ಕೆ ಆಗುತ್ತಿರುವ ಖಾದರ್ 2007 ರಿಂದ 2012ರವರೆಗೆ ಖಾದರ್ ವಿಪಕ್ಷ ಶಾಸಕರಾಗಿದ್ದರು. 2013ರಲ್ಲಿ ಸಿದ್ಧರಾಮಯ್ಯ ಸರ್ಕಾರ ಬಂದಾಗ ಮಂತ್ರಿ ಸ್ಥಾನವನ್ನು ಅಲಂಕರಿಸಿದ್ದರು. 2016ರವರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ, 2016-18ರವರೆಗೆ ಅವರು ಆಹಾರ, ನಾಗರಿಕ ಪೂರೈಕೆ ಖಾತೆ ನಿಭಾಯಿಸಿದ್ದರು. ಇದೀಗ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಖಾದರ್ ಅವರಿಗೆ ಮಧ್ಯರಾತ್ರಿ ಕರೆ ಮಾಡಿ ಸ್ಪೀಕರ್ ಹುದ್ದೆಯನ್ನು ಅಲಂಕರಿಸಬೇಕೆಂದು ಸೂಚನೆ ನೀಡಿದ್ದರು.