ಬೆಂಗಳೂರು: ಹಾಸನದ ಬಜೆಟ್ ಅಂತ ಹೇಳುತ್ತಿರೋ ಬಿಜೆಪಿಯವರಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ತಿರುಗೇಟು ನೀಡಿದ್ದಾರೆ.
ವಿಧಾನೌಧದಲ್ಲಿ ಮಾತನಾಡಿದ ಅವರು, ಇಂದು ಅವರು ಹಾಸನದ ಬಜೆಟ್ ಅಂತಾರೆ. ಹಾಸನದ ಹೊರ ವರ್ತುಲ ರಸ್ತೆಯ ಕಾಮಗಾರಿಗೆ 30 ಕೋಟಿ ಹಣ ಇಟ್ಟಿದ್ದೇವೆ. ಹಾಸನದ ಶಾಸಕರು ರೇವಣ್ಣ ಅವರಲ್ಲ ಅಂದ್ರು.
Advertisement
ಹಾಸನದಲ್ಲಿರುವುದು ಬಿಜೆಪಿ ಶಾಸಕರು. ಹೀಗಾಗಿ ಬಿಜೆಪಿ ನಾಯಕರುಗಳಿಗೆ ಹೇಳುತ್ತಿದ್ದೇನೆ ಕಾಮಗಾರಿಗೆ ಇಟ್ಟಂತಹ ಹಣ ಬೇಡವೆಂದ್ರೆ ವಾಪಾಸ್ ತಗೋತೀವಿ. ಬಿಜೆಪಿ ಶಾಸಕರ ವಿರೋಧವಿದ್ರೆ, ಆ 30 ಕೋಟಿ ರೂ, ಪ್ರಾಜೆಕ್ಟ್ ನ ವಾಪಾಸ್ ತಗೋಬೇಕಾದ್ರೆ ತೆಗೆಯಲು ಸಿದ್ಧನಿದ್ದೇನೆ. ಹಾಸನ ಮತ್ತು ಮಂಡ್ಯ ಜಿಲ್ಲೆಗೆ ಏನು ಕೊಟ್ಟಿದ್ದೇನೆ ನಾನು, ಎಲ್ಲವನ್ನು ಲೆಕ್ಕ ಹಾಕಿದ್ರೆ ಕೊಟ್ಟಿರುವಂತಹ ಹಣ 150 ರಿಂದ 200 ಕೋಟಿ ಬರಬಹುದು ಅಂತ ಹೇಳಿದ್ರು.
Advertisement
Advertisement
ಎರಡು ತಿಂಗಳಾದ್ರೂ ಅವಕಾಶ ಕೊಡಿ. ಈಗಾಗ್ಲೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಒಂದು ತಿಂಗಳಾಗಿದೆ ಅಷ್ಟೇ. ಹೀಗಾಗಿ ಎರಡು ತಿಂಗಳು ಅವಕಾಶ ಕೊಡಿ. ಆಮೇಲೆ ನಮ್ಮ ಕಾರ್ಯಕ್ರಮಗಳನ್ನು ನೊಡಿವಿರಿ ಎಂದು ವಿರೋಧ ಪಕ್ಷದ ಅಂದ್ರೆ ಬಿಜೆಪಿ ಸದಸ್ಯರಿಗೆ ಹೇಳಿದ್ದೆ. ಆದ್ರೆ ಪಾಪ ಅವರು ರೈತರ ಸಾಲಮನ್ನಾ, ರೈತರ ಸಾಲಮನ್ನಾ ಅಂತ ಹೇಳಿಕೊಂಡು ಬಂದ್ರು. ನಾವು ಸಾಲಮನ್ನಾ ಘೋಷಣೆ ಮಾಡಿರುವುದು ಅಷ್ಟೇ ಅಲ್ಲ. ನಾವೇನು ಯೋಜನೆಗಳನ್ನು ಮಾಡಿದ್ದೇವೆ ಅನ್ನೋದರ ಕಾಪಿನೂ ನಮ್ಮಲ್ಲಿದೆ ಅಂತ ಕಿಡಿಕಾರಿದ್ರು.
Advertisement
ಪ್ರತೀ ರೈತ ಯಾರು ಹಿಂದೆ ಸಾಲ ತೀರಿಸಿ ಮತ್ತೆ ಹೊಸದಾಗಿ ಸಾಲ ತೆಗೆದುಕೊಂಡಿದ್ದಾರೋ ಅವನ ಖಾತೆಗೂ 25 ಸಾವಿರಗಳನ್ನು ಹಾಕಲು ಕಾರ್ಯಕ್ರಮ ಕೊಟ್ಟಿದ್ದೇವೆ. ಇದು ನಾವು ಹೇಳದೇ ಇರುವಂತಹ ವಿಚಾರವಾಗಿದೆ. ಇದು ಪಾಪ ಬಿಜೆಪಿ ನಾಯಕರುಗಳಿಗೆ ಗೊತ್ತಿಲ್ಲ. ಓದಬೇಕಾದ್ರೆ ಅವರಿಗೆ ಅರ್ಥ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಪಾಪ ಓದಬೇಕಾದ್ರೆ ಅವರು ಯಾವ ಲೋಕದಲ್ಲಿ ಇದ್ರೋ ಗೊತ್ತಿಲ್ಲ ಅಂತ ಬಿಜೆಪಿ ವಿರುದ್ಧ ಗರಂ ಆದ್ರು.