– ಈ ದೇಶದ ಪ್ರತಿಯೊಬ್ಬರು ಸಹ ಆರ್‌ಎಸ್‌ಎಸ್
– ಮೋದಿ ಬಂದ ಮೇಲೆ ಅಚ್ಚೇ ದಿನ ಬಂದಿದೆ
– ಮೋದಿ ಬಂದ ಮೇಲೆ ಅಚ್ಚೇ ದಿನ ಬಂದಿದೆ
ಬೆಳಗಾವಿ: ಮೈತ್ರಿ ಸರ್ಕಾರವನ್ನು ಅಪವಿತ್ರ ಮಾಡಿದ್ದು ಕಾಂಗ್ರೆಸ್ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಸಿಂದಗಿ ಉಪಚುನಾವಣೆ ಆಲಮೇಲ ಗ್ರಾಮದ ಸಮಾವೇಶದಲ್ಲಿ ಭಾಷಣ ಮಾಡಿದ ಸಿಎಂ, ಕಾಂಗ್ರೆಸ್ ಸರ್ಕಾರದ ಭಾಗ್ಯ ಯಾರ ಮನೆಗೂ ಸಹ ಬರಲಿಲ್ಲ. ಕಾಂಗ್ರೆಸ್ ಅವರು ಬಂದಿದ್ದೇ ನಮಗೆ ದೌರ್ಭಾಗ್ಯ. ಕಾಂಗ್ರೆಸ್ ಅಧಿಕಾರ ಬಿಟ್ಟು ಇರಲ್ಲ. ಅಧಿಕಾರ ಇದ್ದಾಗ ಕಾಂಗ್ರೆಸ್ ಕಬ್ಬಿನಂತೆ ಇರ್ತಾರೆ, ಅಧಿಕಾರ ಇಲ್ಲದಿದ್ದಾಗ ಹತ್ತಿಯಂತೆ ಇರ್ತಾರೆ. ಮೈತ್ರಿ ಸರ್ಕಾರವನ್ನು ಅಪವಿತ್ರ ಮಾಡಿದವರು ಕಾಂಗ್ರೆಸ್ ನವರು ಎಂದು ಕಿಡಿಕಾರಿದರು.
Advertisement
Advertisement
ಮೈತ್ರಿ ಸರ್ಕಾರ ಜನರ ಸರ್ಕಾರ ಅಲ್ಲ, ಕೆಲವರು ಅಲ್ಲಿಂದ ಬಂದು ಬಿಜೆಪಿ ಸೇರಿದ್ದರು. ಕಾಂಗ್ರೆಸ್ ಬಹಳ ತ್ಯಾಗ ಮಾಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳ್ತಾರೆ. ಹೌದು. ಕಾಂಗ್ರೆಸ್ ಬಹಳ ತ್ಯಾಗ ಮಾಡಿದೆ, ಆದರೆ ಸುಭಾಷ್ ಚಂದ್ರ ಬೋಸ್, ಲೋಕಮಾನ್ ತಿಲಕ್, ಭಗತ್‍ಸಿಂಗ್, ಚಂದ್ರಶೇಖರ್ ಆಜಾದ್, ವೀರಸಾವರ್ಕರ್ ಇವರೆಲ್ಲ ಏನು ಕಾಂಗ್ರೆಸ್ಸಿನವರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಜೊತೆ ಜಗಳಕ್ಕೆ ಹೋಗಲು ನನಗೆ ಬೇರೆ ಕೆಲಸ ಇಲ್ಲವೇ?: ಹೆಚ್‍ಡಿಕೆ
Advertisement
ಪ್ರತಿ ಒಬ್ಬರು ಸಹ ಆರ್‌ಎಸ್‌ಎಸ್!
ಲಕ್ಷಾಂತರ ಜನ ದೇಶಕ್ಕಾಗಿ ಜೀವ ನೀಡಿದ್ರು. ಆದರೆ ಇವರಿಗೆ ಇಂದಿರಾ ಗಾಂಧಿ ಹಾಗೂ ಅವರ ಮನೆತನದವರು ಮಾತ್ರ ಗೊತ್ತು. ಬೊಮ್ಮಾಯಿ ನಮ್ಮ ಜೊತೆ ಇದ್ದವರು, ಆರ್‌ಎಸ್‌ಎಸ್ ಅವರಾ ಎಂದು ಕೇಳುತ್ತಾರೆ. ಈ ದೇಶದ ಪ್ರತಿ ಒಬ್ಬರು ಸಹ ಆರ್‌ಎಸ್‌ಎಸ್ ನವರು. ಆರ್‌ಎಸ್‌ಎಸ್ ಅವರು ನಾವಲ್ಲ ಅಂದ್ರೆ ಅವರು ಯಾರು ನೀವೇ ತಿಳಿದುಕೊಳ್ಳಿ. ಸಿದ್ದರಾಮಣ್ಣ ನಮ್ಮ ಜೊತೆ ಚೆನ್ನಾಗಿದ್ದರು, ಕಾಂಗ್ರೆಸ್ ಹೋಗಿ ಕೆಟ್ಟರು ಎಂದು ತಿರುಗೇಟು ನೀಡಿದರು.
Advertisement
ಗುತ್ತಿ ಬಸವಣ್ಣ ಯೋಜನೆಗೆ ಬಿಜೆಪಿ ಅಭ್ಯರ್ಥಿ ಬೂಸನೂರ ಹೋರಾಟ ನಡೆಸಿದ್ದರು. ಕೆಲಸ ಮಾಡುವ ಛಲ ಇರಬೇಕು. ಮಾಡಿಲ್ಲ ಅಂದ್ರೆ ಕೇಳುವ ಗಂಡಸುತನ ಇರಬೇಕು. ಈ ಯೋಜನೆಗಾಗಿ ಭೂಸನೂರ ಅವರ ಹೋರಾಟ ಅಪಾರವಾಗಿದೆ. 2009ರ ನವಂಬರ್ ಚಿಮ್ಮಲಗಿ ಏತ ನೀರಾವರಿಗೆ ಚಾಲನೆ ನೀಡಿದೆ. ನಮ್ಮ ಸರ್ಕಾರದಲ್ಲಿ ಯೋಜನೆಗೆ ಜಾರಿಗೆ ತಂದಿದ್ದು, ನಮ್ಮ ಸರ್ಕಾರದಲ್ಲಿ ನೀರು ಹರಿಸುವ ಕೆಲಸ ಸಹ ನಡೆಯಲ್ಲಿದೆ. ಹೀಗಾಗಿ ಭೂಸನೂರ ಅವರ ಮೇಲೆ ಆಶೀರ್ವಾದ ಇರಲ್ಲಿ ಎಂದು ಕೇಳಿಕೊಂಡರು. ಇದನ್ನೂ ಓದಿ: ದಾಖಲೆಗಳಿದ್ರೂ ಮನೆ ಕೆಡವಿ ದರ್ಪ ತೋರಿದ ಅಧಿಕಾರಿಗಳು
ವಚನ ಭ್ರಷ್ಟರಾಗಿದ್ದಾರೆ!
ಸಿದ್ದರಾಮಯ್ಯ ಅವರು ಕಾಂಗ್ರೆಸ್ ಕೃಷ್ಣೆ ನಡೆಗೆ ಅಂದ್ರು, ಆದರೆ 5 ವರ್ಷದಲ್ಲಿ ಅದಕ್ಕೆ ಬೇಕಾದ ಅನುದಾನ ಸಹ ನೀಡಲಿಲ್ಲ. ಈ ಮೂಲಕ ಕೃಷ್ಣೆಯ ಮೇಲೆ ಆಣೆ ಮಾಡಿ ಕಾಂಗ್ರೆಸ್ ಅವರು ವಚನ ಭ್ರಷ್ಟರಾಗಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದರು.
ಟ್ವೀಟ್ ವಾರ್ ಬಗ್ಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹಗುರವಾಗಿ ಮಾತನಾಡಿದ್ರೆ ಅವರು ಸಣ್ಣವರಾಗಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ಯಾರು ಎಂದು ಕೇಳ್ತಿದ್ದಾರೆ. ಸೋನಿಯಾ ಗಾಂಧಿ ನಾನೇ ಅಧ್ಯಕ್ಷೆ ಎಂದರು. ಗಾಂಧಿಜೀ ಅವರು ಅವತ್ತೆ ಕಾಂಗ್ರೆಸ್ ಪಕ್ಷವನ್ನ ತ್ಯಾಗ ಮಾಡಿ ಎಂದಿದ್ದರು. ಆದರೆ ಅಧಿಕಾರದ ಆಸೆಗೆ ಅಂದಿನ ನಾಯಕರು ಕಾಂಗ್ರೆಸ್ ಬಿಡಲಿಲ್ಲ. ಆದರೆ ಜನ ಇದೀಗ ಕಾಂಗ್ರೆಸ್ ಮುಗಿಸಲಿದ್ದಾರೆ ಎಂದರು.
ಮೋದಿ ಅವರು ಬಂದ ಮೇಲೆ ಅಚ್ಚೆ ದಿನ ಬಂದಿದೆ. 10 ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ನೀಡಿದ್ದಾರೆ. ಬಡ ಕುಟುಂಬಗಳಿಗೆ ಗ್ಯಾಸ್ ನೀಡಿದ್ದರು. ಬಡವರ ಆರೋಗ್ಯಕ್ಕಾಗಿ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ತಂದಿದ್ದಾರೆ. ಮೋದಿ ಅವರು ತಮ್ಮ ದಿಟ್ಟತನದಿಂದ ಕೋವಿಡ್ ನಿರ್ವಹಣೆ ಮಾಡಿದ್ದಾರೆ. ದೇಶದ ಪ್ರತಿ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ನಮ್ಮ ರಾಜ್ಯದಲ್ಲಿ ಶೇ.83 ಮೊದಲ ಡೋಸ್ ಹಾಗೂ ಶೆ. 34 ಎರಡನೇ ಡೋಸ್ ನೀಡಲಾಗಿದೆ ಎಂದು ತಿಳಿಸಿದರು.