– ಭೂಸ್ವಾಧೀನದ ಹೆಸರಲ್ಲಿ ಬಡವರ ಮನೆ ನೆಲಸಮ
ಮಂಡ್ಯ: ಕೂಲಿ-ನಾಲಿ ಮಾಡಿ, ಒಂದಷ್ಟು ಸಾಲ ಮಾಡಿ ಖರೀದಿಸಿದ ಜಾಗದಲ್ಲಿ ಗೂಡೋಂದನ್ನ ಕಟ್ಟಿಕೊಂಡಿದ್ದರು. ಆದರೆ ಅವರು ಕಟ್ಟಿದ ಜಾಗ ಸರ್ಕಾರದ್ದು ಎಂದು ಭೂ-ಸ್ವಾಧೀನದ ಹೆಸರಿನಲ್ಲಿ ಮನೆಗಳನ್ನು ಏಕಾಏಕಿ ನೆಲಸಮ ಮಾಡಲಾಗಿದೆ. ಅಧಿಕಾರಿಗಳ ದರ್ಪಕ್ಕೆ ಅಲ್ಲಿ ನೆಲೆಸಿದ್ದ ಕೂಲಿ ಕಾರ್ಮಿಕರು ಹಾಗೂ ರೈತರು ಬೀದಿಗೆ ಬಿದ್ದಿದ್ದಾರೆ.
Advertisement
ಮಂಡ್ಯದ ಕೆಆರ್ ಪೇಟೆ ಪಟ್ಟಣದಲ್ಲಿ ಕೆಲ ವರ್ಷಗಳ ಹಿಂದೆ ಕೂಲಿ-ನಾಲಿ ಮಾಡಿದ ಹಣದಲ್ಲಿ ತಮ್ಮ ಕನಸಿನ ಮನೆ ನಿರ್ಮಿಸಿಕೊಳ್ಳಬೇಕು ಎಂದು ಪಟ್ಟಣದ ಜಯನಗರ ಬಡಾವಣೆಯಲ್ಲಿ ಖಾಲಿ ನಿವೇಶನಗಳನ್ನು ಖರೀದಿಸಿದ್ದರು. ಅಷ್ಟೇ ಅಲ್ಲದೆ ಅಲ್ಲೊಂದು ಪುಟ್ಟ ಮನೆಗಳನ್ನು ಸಹ ಕಟ್ಟಿಕೊಂಡಿದ್ರು. ಆದರೆ ಈಗ ಅಧಿಕಾರಿಗಳು ಏಕಾಏಕಿ ಧಾವಿಸಿ ನೀವು ಮನೆ ಕಟ್ಟಿರುವ ಜಾಗ ಸರ್ಕಾರದ್ದು ಎಂದು ಸುಮಾರು 6 ಮನೆಗಳನ್ನು ಡೆಮಾಲಿಷ್ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಜೊತೆ ಜಗಳಕ್ಕೆ ಹೋಗಲು ನನಗೆ ಬೇರೆ ಕೆಲಸ ಇಲ್ಲವೇ?: ಹೆಚ್‍ಡಿಕೆ
Advertisement
ಈ ಜಾಗವನ್ನು 1975ರಲ್ಲಿ ವೆಂಕಟೇಶ್ ಎಂಬವರು ಖರೀದಿ ಮಾಡಿದ್ದಾರೆ. ಇದಾದ ಬಳಿಕ ಹಲವಾರು ಜನರಿಗೆ ಜಾಗ ಮಾರಾಟ ಮಾಡಲಾಗಿದೆ. ಅದರಿಂದ 1995 ರಲ್ಲಿ ನಿವೇಶನವನ್ನು ತಾಲೂಕಿನ ಒಂದಷ್ಟು ರೈತರು ಹಾಗೂ ಕೂಲಿ ಕೆಲಸ ಮಾಡ್ತಿದ್ದವರು ಖರೀದಿಸಿದ್ದರು. ಇದಾದ ಬಳಿಕ ಸ್ವತಃ ಅಧಿಕಾರಿಗಳೇ ಜಾಗಕ್ಕೆ ತೆರಳಿ ಪರಿಶೀಲನೆ ನಡೆಸಿ ಅನ್ಯಾಕ್ರಾಂತವನ್ನು ಕೂಡ ನೀಡಿದ್ದಾರೆ.
Advertisement
Advertisement
ಹಲವು ವರ್ಷಗಳಿಂದ ಕಂದಾಯ ಕಟ್ಟುವುದರ ಜೊತೆಗೆ ಅಧಿಕಾರಿಗಳು ನಮೂನೆ 3 ಅನ್ನು ಕೂಡ ಕೊಟ್ಟಿದ್ದಾರೆ. ಹೀಗೆ ಎಲ್ಲ ದಾಖಲಾತಿಗಳು ಇದ್ರೂ ಕೂಡ ಅಧಿಕಾರಿಗಳು ಹೊಸ ನಕಾಶೆಯನ್ನ ಸಿದ್ಧಪಡಿಸಿಕೊಂಡು ಈ ಜಾಗ ಸರ್ಕಾರದ್ದು, ಇಲ್ಲಿ ಬಿಸಿಎಂ ಹಾಸ್ಟೆಲ್ ಕಟ್ಟುತ್ತೇವೆ ಎಂದು ಮನೆ ಕೆಡವಿದ್ದಾರೆ ಎಂದು ಮನೆ ಕಳೆದುಕೊಂಡವರು ಆರೋಪ ಮಾಡ್ತಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಇಲಿಜ್ವರ – 39 ಪ್ರಕರಣಗಳು ಪತ್ತೆ
ಅಧಿಕಾರಿಗಳು ಮಾತ್ರ ಈ ಜಾಗದಲ್ಲಿ ಹಿಂದೆ ಕಟ್ಟೆಯೊಂದಿತ್ತು. ಹಾಸ್ಟೆಲ್ ನಿರ್ಮಾಣಕ್ಕಾಗಿ ಅಲ್ಲಿನ ಮನೆ ತೆರವುಗೊಳಿಸಿದ್ದೇವೆ ಎನ್ನುತ್ತಿದ್ದಾರೆ. ಮನೆ ಕಳೆದುಕೊಂಡವರು ಎಲ್ಲ ದಾಖಲೆ ಇದ್ದರೂ ಏಕಾಏಕಿ ತೆರವು ಮಾಡಿದ್ರು ಅಂತಿದ್ದಾರೆ. ಅದೇನೆ ಆಗ್ಲಿ ಇಲ್ಲಿ ಯಾರು ಯಾರಿಗೆ ಮೋಸ ಮಾಡಿದ್ದಾರೋ ಗೊತ್ತಿಲ್ಲ, ಆದರೆ ಸಾಲ ಸೋಲ ಮಾಡಿ ಕಟ್ಟಿದ್ದ ಮನೆ ಕಳೆದುಕೊಂಡು ಜನರಂತು ಬೀದಿಗೆ ಬಿದ್ದಿದ್ದು ದುರಂತ.