ಬೆಂಗಳೂರು: ಯಾವುದೇ ರೀತಿಯ ಅವಸರದ ನಿರ್ಧಾರವನ್ನು ನಾವು ತೆಗೆದುಕೊಳ್ಳುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕೋವಿಡ್-19 ಕುರಿತು ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿಎಸ್‍ಸಿ ಅಧ್ಯಕ್ಷರಾದ ಸುದರ್ಶನ್ ಅವರು ಈ ಕುರಿತು ನಮಗೆ ಎಲ್ಲ ಮಾಹಿತಿಯನ್ನು ನೀಡಿದ್ದಾರೆ. ಓಮಿಕ್ರಾನ್ ಕುರಿತು ಸಹ ಮಾಹಿತಿಯನ್ನು ನೀಡಿದ್ದಾರೆ. ಈಗಿರುವ ಪಾಸಿಟಿವಿಟಿ ರೇಟ್ ನೋಡಿದರೆ ಬಹಳ ಗಾಬರಿಯಾಗುವಂತಹ ಅವಶ್ಯಕತೆ ಇಲ್ಲ ಎಂಬುದು ಅವರ ವಾದವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ 418 ಸ್ಥಾನಗಳಿಸುತ್ತೆ: ಚಂದ್ರಕಾಂತ್ ಪಾಟೀಲ್
ಗಡಿಭಾಗದಲ್ಲಿ ಈಗಿರುವ ಕಟ್ಟೆಚ್ಚರವನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಅದರಲ್ಲಿಯೂ ಕೇರಳ ವಿದ್ಯಾರ್ಥಿಗಳಿಗೆ ಇರುವ ಎಚ್ಚರಿಕೆಗಳೆಲ್ಲ ಮುಂದುವರಿಯುತ್ತೆ. ಅವರಿಗೆ ಎಲ್ಲ ರೀತಿಯ ಟೆಸ್ಟ್ ಗಳನ್ನು ಮಾಡಿಸಲಾಗುತ್ತೆ. ನೈಟ್ ಕಫ್ರ್ಯೂ, ಕ್ರಿಸ್ ಮಸ್ ಮತ್ತೆ ಹೊಸ ವರ್ಷಕ್ಕೆ ಇನ್ನೂ ಒಂದು ವಾರ ಈ ಸೋಂಕಿನ ಬೆಳವಣೆಗೆಯನ್ನು ನೋಡಿ ನಂತರ ಈ ಕುರಿತು ನಿರ್ಧರಿಸಲಾಗುತ್ತೆ. ನಂತರ ಈ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಯಾವುದೇ ಅವಸರದ ನಿರ್ಧಾರವನ್ನು ನಾವು ತೆಗೆದುಕೊಳ್ಳುತ್ತಿಲ್ಲ ಎಂದರು.
ಅದರೂ ಸಹ ಈ ಬಗ್ಗೆ ನಾವು ಯಾವುದೇ ರೀತಿಯ ನಿರ್ಲಕ್ಷ್ಯವನ್ನು ತೋರುವುದಿಲ್ಲ. ಅದರ ಬದಲು ನಾವು ಈ ಕುರಿತು ಹೆಚ್ಚಿನ ಗಮನ ಕೊಟ್ಟು ಮುಂಜಾಗ್ರತೆಯ ಕ್ರಮವನ್ನು ನಾವು ತೆಗೆದುಕೊಳ್ಳಬೇಕು. ಅದರಲ್ಲಿಯೂ ಹಾಸ್ಟೆಲ್ ಗಳಲ್ಲಿ ವಿಶೇಷವಾದ ಸೂಚನೆಯನ್ನು ನೀಡುತ್ತಿದ್ದೇವೆ. ಸರಿಯಾಗಿ ಹಾಸ್ಟೆಲ್ ಗಳನ್ನು ನೋಡಿಕೊಳ್ಳುವುದು ಎರಡೂ ಬಾರಿ ಸ್ಯಾನಿಟೈಸರ್ ಮಾಡುವುದು, ಒಂದೇ ಬಾರಿ ಎಲ್ಲರೂ ಊಟಕ್ಕೆ ಬರದಂತೆ ನೋಡಿಕೊಳ್ಳುವುದು. ಎಸ್‍ಓಪಿಗಳನ್ನು ಹಾಸ್ಟೆಲ್ ಮತ್ತು ಕ್ಲಸ್ಟರ್ ಮ್ಯಾನೇಜ್ಮೆಂಟ್ ನಲ್ಲಿ ಬರಬೇಕು ಎಂದು ಸೂಚನೆಯನ್ನು ನೀಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಮೂವರನ್ನ ಗುಂಡಿಕ್ಕಿ ಕೊಂದ ಯೋಧನಿಗೆ ಜೀವಾವಧಿ ಶಿಕ್ಷೆ!
ಮೂರು ಜನರಿಗೆ ಕೊರೊನಾ ಬಂದರೂ ಅಲ್ಲಿ ಕ್ಲಸ್ಟರ್ ಅನ್ನು ಘೋಷಿಸಲಾಗುತ್ತೆ ಎಂದು ಸೂಚನೆಯನ್ನು ನೀಡಲಾಗಿದೆ. ಅದು ಅಲ್ಲದೇ ಇದು ಬೆಂಗಳೂರಿನಲ್ಲಿಯೂ ಆಗಿದೆ. ಈ ಬಗ್ಗೆ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಹಾಸ್ಟೆಲ್ ನಲ್ಲಿ ಅಡುಗೆ ಮಾಡುವವರಿಗೆ 2 ಡೋಸ್ ವಾಕ್ಸಿನೇಷನ್ ಕಡ್ಡಾಯ ಮಾಡಲಾಗಿದ್ದು, ಈ ವೇಳೆ ನಮ್ಮ ಸಚಿವರು ಡ್ರ್ಯವ್ ಮೂಲಕ ವಾಕ್ಸಿನೇಷನ್ ಕೊಡಿಸಬೇಕು ಎಂದು ಸಲಹೆಯನ್ನು ನೀಡಿದ್ದಾರೆ. ಎಲ್ಲವನ್ನು ಸೇರಿಸಿ ವಾಕ್ಸಿನೇಷನ್ ಡ್ರೈವ್ ಅನ್ನು ನಾವು ಮಾಡುತ್ತೇವೆ ಎಂದು ತಿಳಿಸಿದರು.