ಮುಂಬೈ: 2024ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಜಯಭೇರಿ ಬಾರಿಸಲಿದ್ದು, 418 ಸ್ಥಾನಗಳನ್ನು ಗೆಲ್ಲುತ್ತೆ ಎಂದು ಮಹಾರಾಷ್ಟ್ರದ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಪಾಟೀಲ್ ಅವರು, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್‍ಸಿಪಿ) ವಿರೋಧಿಗಳನ್ನು ಒಟ್ಟುಗೂಡಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಬಿಜೆಪಿಯನ್ನು ತಡೆಯಲು ಶಿವಸೇನೆಯು ಕಾಂಗ್ರೆಸ್ ಜೊತೆ ಕೈಜೋಡಿಸಿದೆ. ಇದು ಅವರ ಸ್ವತಂತ್ರ್ಯವಾಗಿದ್ದು, ಅವರನ್ನು ಯಾರು ತಡೆಯುವುದಿಲ್ಲ. ಏಕೆಂದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸದಸ್ಯರು ತಮ್ಮ ಕೆಲಸದ ಮೇಲೆ ಹೆಚ್ಚು ಗಮನಹರಿಸುತ್ತಿದ್ದಾರೆ ಎಂದರು.
Advertisement
Advertisement
ನಾವು ಅಭಿವೃದ್ಧಿಯ ಹಾದಿಯಲ್ಲಿದ್ದೇವೆ. ಶೀಘ್ರದಲ್ಲೇ ಹೊಸ ಮೆಟ್ರೋವನ್ನು ಉದ್ಘಾಟಿಸಲು ಪ್ರಧಾನಿ ಪುಣೆಗೆ ಬರುತ್ತಾರೆ. ಪ್ರತಿಪಕ್ಷಗಳಂತೆ ನಾವು ರಾಜಕೀಯದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ಸಂಬಂಧಿಸಿದಂತೆ, ವಿವಿಧ ಸಮೀಕ್ಷೆಗಳು ಮತ್ತು ಸಂಶೋಧನೆಗಳನ್ನು ನಾವು ಮಾಡುತ್ತಿದ್ದೇವೆ. ನಮ್ಮ ಇತ್ತೀಚಿನ ಸಮೀಕ್ಷೆಯ ಪ್ರಕಾರ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 418 ಸ್ಥಾನಗಳನ್ನು ಪಡೆಯಲಿದೆ ಎಂದು ವಿಶ್ವಾಸದ ಮಾತುಗಳನ್ನು ಆಡಿದರು. ಇದನ್ನೂ ಓದಿ: ಏಕಾಏಕಿ 900 ಮಂದಿ ನೌಕರರ ವಜಾಗೊಳಿಸಿದ್ದ ರೀತಿಗೆ ಕ್ಷಮೆಯಾಚಿಸಿದ CEO
Advertisement
Advertisement
ಬಿಜೆಪಿ ವಿರುದ್ಧ ಪ್ರಬಲ ಪ್ರತಿಪಕ್ಷವನ್ನು ರಚಿಸಲು ಕಾಂಗ್ರೆಸ್ ಮತ್ತು ಶಿವಸೇನೆಯನ್ನು ಒಟ್ಟುಗೂಡಿಸುವ ಶರದ್ ಪವಾರ್ ನೇತೃತ್ವದ ಎನ್‍ಸಿಪಿಯ ಪ್ರಯತ್ನವನ್ನು ಚಂದ್ರಕಾಂತ್ ಅವರು ಈ ವೇಳೆ ಟೀಕಿಸಿದರು.
ಚಂದ್ರಕಾಂತ್ ಅವರು ಪೊಲೀಸ್ ಕಮಿಷನರ್ ಅಮಿತಾಬ್ ಗುಪ್ತಾ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ವಿವಿಧ ಸಂಸ್ಥೆಗಳಿಗೆ ಕೆಲವು ಕೋವಿಡ್ ಪ್ರೋಟೋಕಾಲ್‍ಗಳಲ್ಲಿ ಸಡಿಲಿಕೆ ಮಾಡಲು ಅನುಮತಿ ನೀಡುವಂತೆ ವಿನಂತಿಸಿಕೊಂಡರು. ಇದನ್ನೂ ಓದಿ: ಮಂಡ್ಯದಲ್ಲಿ ಪಡಿತರ ಅಕ್ಕಿ ಪಾಲಿಶ್ ಮಾಡಿ ವಿದೇಶಕ್ಕೆ ರಫ್ತು
2018ರಲ್ಲಿ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಕಾರಣವಾದ ವಿವಾದಾತ್ಮಕ ಎಲ್ಗರ್ ಪರಿಷತ್ ಪ್ರಕರಣದ ನಂತರ ಶನಿವಾರ್ ವಾಡಾ ಆವರಣದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನಿಲ್ಲಿಸಲಾಗಿತ್ತು. ಈ ಹಿನ್ನೆಲೆ ಚಂದ್ರಕಾಂತ್ ಅವರು ಇಲ್ಲಿ ಮತ್ತೆ ಕಾರ್ಯಕ್ರಮ ನಡೆಸಲು ಅನುಮತಿಗಾಗಿ ಕೋರಿಕೊಂಡರು.