ಬೆಂಗಳೂರು: ಕಾಂಗ್ರೆಸ್ (Congress) ವಿರುದ್ಧ ಆಡಳಿತ ಪಕ್ಷ ಬಿಜೆಪಿಯು (BJP) ಮತ್ತೊಂದು ತನಿಖಾಸ್ತ್ರ ಪ್ರಯೋಗಿಸಿದೆ. ಕುಣಿಗಲ್‍ನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯು ಇತ್ತೀಚೆಗೆ ಕುಕ್ಕರ್ (Cooker) ದಾಸ್ತಾನು ಮೇಲೆ ದಾಳಿ ಮಾಡಿದ ಪ್ರಕರಣ ಇದೀಗ ಕಾಂಗ್ರೆಸ್‍ಗೆ ಮುಳುವಾಗುವ ಸಾಧ್ಯತೆ ಇದೆ. ಕುಣಿಗಲ್ ಕುಕ್ಕರ್ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಘೋಷಿಸಿದ್ದಾರೆ.
Advertisement
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಬೊಮ್ಮಾಯಿ, ಈಗಾಗಲೇ ಕಮರ್ಷಿಯಲ್ ಟ್ಯಾಕ್ಸ್‌ನವರು ಕುಣಿಗಲ್ ಪ್ರಕರಣದಲ್ಲಿ ದಂಡ ಹಾಕಿದ್ದಾರೆ. ಬೇರೆ ಬೇರೆ ಪ್ರದೇಶಗಳಲ್ಲೂ ಈತರದ ಪ್ರಕರಣಗಳು ಆಗಿವೆ. ಇದೆಲ್ಲದರ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಳ್ತೇವೆ. ನಂತರ ನಾವು ಖಂಡಿತವಾಗಿಯೂ ತನಿಖೆ ಮಾಡಿಸ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಸುಧಾಕರ್ ನೇತೃತ್ವದಲ್ಲಿ 3 ಸಾವಿರ ಕೋಟಿ ರೂ. ಅಕ್ರಮ: ಸಿದ್ದರಾಮಯ್ಯ ಚಾರ್ಜ್ ಶೀಟ್
Advertisement
Advertisement
ಕುಣಿಗಲ್‍ನಲ್ಲಿ ಶಾಸಕರ ಫೋಟೋ ಇರುವ ಕುಕ್ಕರ್‌ಗಳನ್ನು ವಶಪಡಿಸಿಕೊಂಡು ನಾಲ್ಕೈದು ಜನರ ಮೇಲೆ ದಂಡ ಹಾಕಿದ್ದಾರೆ. ಈ ಕುಕ್ಕರ್‌ಗಳನ್ನು ಮತದಾರಿಗೆ ಕೊಡಲು ತಂದಿದ್ರು. ಕಾಂಗ್ರೆಸ್‍ನವರು ಇಷ್ಟು ಅವರ ಎಲೆಯಲ್ಲಿಟ್ಕೊಂಡು ಜನರಿಗೆ ಗೊಂದಲ ಉಂಟು ಮಾಡುವ ಕೆಳಮಟ್ಟದ ರಾಜಕೀಯ ಮಾಡ್ತಿದಾರೆ. ಅವರಿಗೆ ತಾವು ಸೋಲ್ತೀವಿ ಅಂತ ಗ್ಯಾರಂಟಿ ಆಗಿಹೋಗಿದೆ. ಪೊಲೀಸರಿದ್ದಾರೆ, ಕಾನೂನು ಇದೆ, ಅದರ ಪ್ರಕಾರ ತನಿಖೆ, ಕ್ರಮ ಆಗಲಿದೆ ಎಂದು ತಿಳಿಸಿದ್ದಾರೆ.
Advertisement
ಮುಂಬರುವ ಚುನಾವಣೆಗೆ ಮತದಾರರಿಗೆ ಹಂಚಲು ತಂದಿದ್ದ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ಅವರಿಗೆ ಸೇರಿದ ಕುಕ್ಕರ್ ಮತ್ತು ಅಡುಗೆ ಮಾಡುವ ತವಾ ತುಂಬಿದ್ದ ಲಾರಿ ಮತ್ತು ದಾಸ್ತಾನು ಮಳಿಗೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಕಳೆದ ವಾರ ದಾಳಿ ನಡೆಸಿದ್ದರು.
ಪ್ರತೀ ಮತಕ್ಕೂ 6 ಸಾವಿರ ಕೊಡೋದಾಗಿ ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ವಿರುದ್ಧ ಇಂದು ಕಾಂಗ್ರೆಸ್‍ನವರು ನೀಡಿದ ಪೊಲೀಸ್ ದೂರು ಬಗ್ಗೆ ಮಾತಾಡಿದ ಬೊಮ್ಮಾಯಿ, ಕಾಂಗ್ರೆಸ್‍ನವರು ಎಷ್ಟು ತಳಮಟ್ಟಕ್ಕೆ ಹೋಗಿದ್ದಾರೆ ಅನ್ನೋದಿಕ್ಕೆ ಇದೇ ಒಂದು ಉದಾಹರಣೆ. ಯಾರ್ಯಾರು ಏನೇನು ಹೇಳಿಕೆ ಕೊಡ್ತಾರೋ ಅದಕ್ಕೆ ಉತ್ತರವನ್ನೂ ಕೊಡ್ತಾರೆ. ನಾವು ಮಹಿಳೆಯರಿಗೆ 2 ಸಾವಿರ ಕೊಡ್ತೀವಿ, ಉಚಿತ ಕರೆಂಟ್ ಕೊಡ್ತೀವಿ ಕಾಂಗ್ರೆಸ್ ಪಕ್ಷದವರೇ ಓಪನ್ ಆಗಿ ಘೋಷಣೆ ಮಾಡಿದ್ದಾರೆ. ದಿನಾ ಒಂದೊಂದು ಘೋಷಣೆ ಮಾಡ್ತಿದಾರೆ. ಈ ಮಾನದಂಡದಲ್ಲಿ ಮತದಾರರಿಗೆ ಆಸೆ ಆಮಿಷ ತೋರಿದರೆ ಅವರೂ ಕೂಡಾ ಅಪರಾಧಿಗಳೇ ಆಗಲ್ವಾ ಅಂತ ಸಿಎಂ ಪ್ರಶ್ನಿಸಿದರು. ಅವರು ನಮ್ಮ ವಿರುದ್ಧ ದೂರು ಕೊಟ್ರೆ, ನಾವು ಅವರ ವಿರುದ್ಧ ನೂರು ದೂರು ಕೊಡಬಹುದು. ಇದು ಕೆಳಮಟ್ಟದ ರಾಜಕಾರಣ ಆಗುತ್ತೆ. ಎಲ್ಲವನ್ನೂ ಜನ ತೀರ್ಮಾನ ಮಾಡ್ತಾರೆ. ಭ್ರಷ್ಟಾಚಾರಕ್ಕೆ ಜನ್ಮ ಕೊಟ್ಟಿದ್ದೇ ಕಾಂಗ್ರೆಸ್. ನಾವು ಇವರಿಂದ ಪಾಠ ಕಲಿಯುವ ಅಗತ್ಯ ಇಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸುಧಾಕರ್‌ನನ್ನು ಸೋಲಿಸುವುದಾಗಿ ಸಿದ್ದರಾಮಯ್ಯ ಶಪಥ – ಹಳೇ ಶಿಷ್ಯನ ವಿರುದ್ಧ ಕೆಂಡಕಾರಿದ ಸಿದ್ದು!
ರಾಜ್ಯದಲ್ಲಿ ಉದ್ಯೋಗ ಮಾರಾಟ ಆಗ್ತಿದೆ ಎಂಬ ಸುರ್ಜೇವಾಲಾ ಆರೋಪಕ್ಕೂ ಸಿಎಂ ತಿರುಗೇಟು ನೀಡಿದರು. ಕಾಂಗ್ರೆಸ್‍ನವರು ಇದ್ದಾಗ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಆಯ್ತು. ಪರೀಕ್ಷೆಗೆ ಬರದವರನ್ನೂ ಪಾಸ್ ಮಾಡಿದ್ರು. ಈ ಕೇಸ್‍ನ ತನಿಖೆ ನಡೀತಿದೆ. ಇದಕ್ಕೂ ಉತ್ತರ ಹೇಳಲಿ ಅವರು. ಉದ್ಯೋಗ ಮಾರಾಟ ಆಗಿದ್ರೆ ಅದು ಕಾಂಗ್ರೆಸ್ ಕಾಲದಲ್ಲೇ. ಈಗ ಎಲ್ಲವೂ ತನಿಖೆಗೆ ಬರ್ತಿವೆ. ಉದ್ಯೋಗ ಮಾರಾಟ, ಅಪರಾಧಿಗಳು ಸಿಕ್ಕಾಗ ಬಿಡುಗಡೆ ಮಾಡೋದನ್ನು ಕಾಂಗ್ರೆಸ್ ಮಾಡ್ಕೊಂಡು ಬಂದಿದೆ. ಇದು ಜನಕ್ಕೂ ಕೂಡಾ ಗೊತ್ತಿದೆ, ಹಾಗಾಗಿ ಅವರನ್ನು ಜನ ಮನೆಗೆ ಕಳುಹಿಸಿದ್ದಾರೆ. ಈ ಬಾರಿಯೂ ಅವರನ್ನು ಜನ ಮನೆಗೆ ಕಳುಹಿಸುತ್ತಾರೆ ಎಂದು ಸಿಎಂ ಟಾಂಗ್ ಕೊಟ್ಟಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k