ಚಂಡೀಗಢ: ವಿಐಪಿ ಸಂಸ್ಕೃತಿಯನ್ನು ಕೊನೆಗೊಳಿಸುವ ಪ್ರಯತ್ನದಲ್ಲಿರುವ ಪಂಜಾಬ್‍ನ ಭಗವಂತ್ ಮಾನ್ ಸರ್ಕಾರವು ಜೈಲಿನಲ್ಲಿರುವ ಎಲ್ಲಾ ವಿಐಪಿ ಕೊಠಡಿಗಳನ್ನು ಜೈಲು ನಿರ್ವಹಣಾ ಬ್ಲಾಕ್‍ಗಳನ್ನಾಗಿ ಪರಿವರ್ತಿಸಲು ಘೋಷಿಸಿದೆ.
ಈ ಬಗ್ಗೆ ಸಿಎಂ ಭಗವಂತ್ ಮಾನ್ ಅವರು ಮಾತನಾಡಿ, ಜೈಲು ಸಿಬ್ಬಂದಿಯ ಸುಗಮ ಕಾರ್ಯ ನಿರ್ವಹಣೆಯನ್ನು ಖಚಿತ ಪಡಿಸಿಕೊಳ್ಳಲು ಜೂಲ್ಲಿನ ಎಲ್ಲಾ ವಿಐಪಿ ಕೊಠಡಿಗಳನ್ನು ಜೈಲು ನಿರ್ವಹಣಾ ಬ್ಲಾಕ್‍ಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement
With a view to ending VIP culture, all VIP rooms in jails will be converted into jail management blocks to ensure smooth functioning of jail staff. Concerned officers will be held accountable in case of negligence in jail & strict action will be taken: Punjab CM Bhagwant Mann pic.twitter.com/WEpq7QgGUp
— ANI (@ANI) May 14, 2022
ಈ ಹಿನ್ನೆಲೆಯಲ್ಲಿ ಜೈಲಿನಲ್ಲಿ ನಿರ್ಲಕ್ಷ್ಯ ವಹಿಸಿದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಇದನ್ನೂ ಓದಿ: ಸಿಐಡಿ ಅಧಿಕಾರಿಗಳಿಂದ ಬೆಂಗ್ಳೂರಿನ 7 ಕಡೆ ದಾಳಿ – ಮಹತ್ವದ ದಾಖಲೆ ವಶಕ್ಕೆ
Advertisement
Advertisement
ಜೈಲು ಕೈದಿಗಳಿಂದ ಮೊಬೈಲ್ ಫೋನ್ ವಶಪಡಿಸಿಕೊಂಡ ಬಗ್ಗೆ ಮಾತನಾಡಿದ ಅವರು, ಜೈಲು ಆವರಣದಲ್ಲಿ ದರೋಡೆಕೋರರಿಂದ 710 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದೇವೆ. ಅಷ್ಟೇ ಅಲ್ಲದೇ ಫೋನ್‍ಗಳನ್ನು ಒಳಗೆ ಪಡೆದವರ ವಿರುದ್ಧವೂ ಕ್ರಮ ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕೆಲಸದಲ್ಲಿ ತೃಪ್ತಿ ಇಲ್ಲ – ಡೆತ್ ನೋಟ್ ಬರೆದು ಪೊಲೀಸ್ ಆತ್ಮಹತ್ಯೆ