CrimeLatestMain PostNational

ಕೆಲಸದಲ್ಲಿ ತೃಪ್ತಿ ಇಲ್ಲ – ಡೆತ್ ನೋಟ್ ಬರೆದು ಪೊಲೀಸ್ ಆತ್ಮಹತ್ಯೆ

ಅಮರವತಿ: ಕೆಲಸದಲ್ಲಿ ತೃಪ್ತಿ ಇಲ್ಲ ಎಂದು ಮನೆಯಲ್ಲಿಯೇ ಆಂಧ್ರ ಪೊಲೀಸ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ತನ್ನ ಮನೆಯಲ್ಲಿಯೇ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು 36 ವರ್ಷದ ಸಬ್-ಇನ್‍ಸ್ಪೆಕ್ಟರ್(ಎಸ್‍ಐ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಮುತ್ತವರಪು ಗೋಪಾಲಕೃಷ್ಣ ಎಂದು ಗುರುತಿಸಲಾಗಿದ್ದು, ಅವರು ಸರ್ಪವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ರಿಯಾಲಿಟಿ ಶೋ ವಿಜೇತೆ, ಕೊರಿಯೋಗ್ರಾಫರ್ ಟೀನಾ ಶವವಾಗಿ ಪತ್ತೆ 

ಕಾಕಿನಾಡ ಪೊಲೀಸ್ ಅಧೀಕ್ಷಕ(ಎಸ್‍ಪಿ) ಎಂ ರವೀಂದ್ರನಾಥ್ ಬಾಬು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಆಘಾತಕಾರಿ ಘಟನೆಯೊಂದು ಇಂದು ನಡೆದಿದೆ. ಸರ್ಪವರಂ ಸಬ್ ಇನ್ಸ್‍ಪೆಕ್ಟರ್ ಮುತವರಪು ಗೋಪಾಲ ಕೃಷ್ಣ ಕಾಕಿನಾಡದ ಸರ್ಪವರಂನಲ್ಲಿರುವ ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ಆತನ ಮೃತದೇಹದ ಬಳಿ ಡೆತ್ ನೋಟ್ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

crime

ಈ ಡೆತ್ ನೋಟ್‍ನಲ್ಲಿ ಗೋಪಾಲ್ ಕೃಷ್ಣ ಅವರು ‘ತಮ್ಮ ಕೆಲಸದಲ್ಲಿ ತೃಪ್ತಿಯಿಲ್ಲ’ ಎಂದು ಬರೆದುಕೊಂಡಿದ್ದಾರೆ. ಆದರೆ ಕೃಷ್ಣ ಅವರ ಪತ್ನಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಜಗಳ ಅರಣ್ಯ ರಕ್ಷಕನ ಕೈ ತುಂಡು 

Leave a Reply

Your email address will not be published.

Back to top button