ನವದೆಹಲಿ: ಈ ವರ್ಷಾಂತ್ಯದಲ್ಲಿ ನಡೆಯಲಿರುವ ಮಧ್ಯಪ್ರದೇಶ (Madhya Pradesh Election) ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ಮಧ್ಯೆ ಭಾರೀ ಸ್ಪರ್ಧೆ ನಡೆಯಲಿದೆ ಎಂದು ಎಬಿಪಿ ನ್ಯೂಸ್ ಹೇಳಿದೆ.
Advertisement
ಎಬಿಪಿ-ಸಿವೋಟರ್ (ABP Cvoter Survey) ಚುನಾವಣಾಪೂರ್ವ ಸಮೀಕ್ಷೆ ಬಿಜೆಪಿ 106-118, ಕಾಂಗ್ರೆಸ್ 108-120 ಸ್ಥಾನ ಪಡೆಯಲಿದೆ. ಇತರರು 0-8 ಸ್ಥಾನಗಳನ್ನು ಪಡೆಯಬಹುದು ಎಂದು ಭವಿಷ್ಯ ನುಡಿದಿದೆ. ಎರಡು ಪಕ್ಷಗಳು 40% ಮತಗಳನ್ನು ಪಡೆಯಲಿದೆ ಎಂದು ಹೇಳಿದೆ.
Advertisement
Advertisement
2018ಕ್ಕೆ ಹೋಲಿಸಿದರೆ 36.4% ಇದ್ದ ಕಾಂಗ್ರೆಸ್ ಮತ ಪ್ರಮಾಣ 41.4% ಏರಿಕೆಯಾಗಲಿದೆ. ಕಳೆದ ಬಾರಿ 44.9% ಇದ್ದ ಬಿಜೆಪಿ ಮತ ಪ್ರಮಾಣ ಈ ಬಾರಿ 41.3% ಇಳಿಕೆಯಾಗಲಿದೆ. ಮಾಯಾವತಿ ನೇತೃತ್ವದ ಬಿಎಸ್‌ಪಿ 2% ಮತವನ್ನು ಪಡೆಯಬಹುದು. ಸರ್ಕಾರ ರಚನೆಯಲ್ಲಿ ಪಕ್ಷೇತರರು ನಿರ್ಣಯಕ ಪಾತ್ರವಹಿಸಲಿದ್ದಾರೆ ಎಂದು ಹೇಳಿದೆ. ಒಟ್ಟು 230 ಸ್ಥಾನಗಳಿರುವ ಮಧ್ಯಪ್ರದೇಶದಲ್ಲಿ ಬಹುಮತಕ್ಕೆ 116 ಸ್ಥಾನಗಳ ಅಗತ್ಯವಿದೆ.
Advertisement
2018ರಲ್ಲಿ ಏನಾಗಿತ್ತು?
ಕಾಂಗ್ರೆಸ್ 114 ಸ್ಥಾನ ಪಡೆದರೆ ಬಿಜೆಪಿ 109 ಸ್ಥಾನ ಗೆದ್ದಿತ್ತು. ಈ ಸಂದರ್ಭದಲ್ಲಿ4 ಮಂದಿ ಪಕ್ಷೇತರರ ಬೆಂಬಲ ಪಡೆದು ಕಾಂಗ್ರೆಸ್ ಬಹುಮತ ಸಾಬೀತು ಪಡಿಸಿತ್ತು. ಕಮಲ್‌ನಾಥ್ ಮುಖ್ಯಮಂತ್ರಿ ಪಟ್ಟವನ್ನು ಏರಿದ್ದರು. ಇದನ್ನೂ ಓದಿ: ತನ್ನ 15 ಎಕರೆ ಆಸ್ತಿಯನ್ನು ಮೋದಿ ಹೆಸರಿಗೆ ಬರೆದುಕೊಡುವುದಾಗಿ 100ರ ವೃದ್ಧೆ ಘೋಷಣೆ
ನಂತರ ಆಪರೇಷನ್ ಕಮಲ ನಡೆದು ಜ್ಯೋತಿರಾದಿತ್ಯ ಸಿಂಧಿಯಾ ಸೇರಿ 22 ಮಂದಿ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದರು. ನಂತರ 2020 ಮಾರ್ಚ್ 23 ರಂದು ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಿದರು. ಸದ್ಯ ಬಿಜೆಪಿಯಲ್ಲಿ 127 ಮಂದಿ ಶಾಸಕರಿದ್ದರೆ ಕಾಂಗ್ರೆಸ್‌ನಲ್ಲಿ 96 ಮಂದಿ ಶಾಸಕರಿದ್ದಾರೆ.
2018-19ರ ಅವಧಿಯ 18 ತಿಂಗಳು ಹೊರತುಪಡಿಸಿ ಕಳೆದ 20 ವರ್ಷಗಳಿಂದ ಮಧ್ಯಪ್ರದೇಶವನ್ನು ಬಿಜೆಪಿ ಆಡಳಿತ ನಡೆಸುತ್ತಿದೆ.