LatestMain PostNational

ಕಾಲೇಜು ಆವರಣದಲ್ಲಿಯೇ ಯುವತಿಯ ಕುತ್ತಿಗೆ ಸೀಳಿದ ಭಗ್ನ ಪ್ರೇಮಿ

ತಿರುವನಂತಪುರಂ: ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂಬ ಕೋಪದಲ್ಲಿ ಯುವತಿಯ ಮೇಲೆ ದ್ವೇಷ ತೀರಿಸಿಕೊಳ್ಳಲು ಕಾಯುತ್ತಿದ್ದ ಯುವಕ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಈ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.

ನಿತಿನಾಮೋಲ್ ಮೃತಳಾಗಿದ್ದಾಳೆ. ಅಭಿಷೇಕ್ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ನಿತಿನಾಮೋಲ್ ಪಾಲಾದಲ್ಲಿರುವ ಸೇಂಟ್ ಥಾಮಸ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಇಂದು ಪರೀಕ್ಷೆ ಬರೆದು ಎಕ್ಸಾಂ ಹಾಲ್‍ನಿಂದ ಹೊರಬರುವಾಗ ಎದುರು ಬಂದ ಅಭಿಷೇಕ್ ಎಂಬ ಯುವಕ ಚಾಕುವಿನಿಂದ ಆಕೆಯ ಕುತ್ತಿಗೆ ಕೊಯ್ದಿದ್ದಾನೆ. ಕಾಲೇಜು ಆವರಣದಲ್ಲಿಯೇ ಈ ಘಟನೆ ನಡೆದಿದೆ. ಅಭಿಷೇಕ್‍ನನ್ನು ಪೊಲೀಸರು ಹಿಡಿದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಅಭಿಷೇಕ್ ಹಾಗೂ ನಿತಿನಾಮೋಲ್ ಕ್ಲಾಸ್‍ಮೇಟ್‍ಗಳಾಗಿದ್ದು, ಆಕೆಯನ್ನು ಪ್ರೀತಿಸುತ್ತಿದ್ದ. ಆದರೆ ಆಕೆ ಆತನನ್ನು ಪ್ರೀತಿಸಲು ಸಾಧ್ಯವಿಲ್ಲ ಎಂದಿದ್ದಳು. ಇದರಿಂದ ಅವಮಾನಗೊಂಡಿದ್ದ ಅಭಿಷೇಕ್ ಇಂದು ಪರೀಕ್ಷೆ ಮುಗಿಸಿ ಬಂದ ಆಕೆಯ ಕುತ್ತಿಗೆಯನ್ನು ಸೀಳಿ ಕೊಲೆ ಮಾಡಿದ್ದಾನೆ. ಕೆಳಗೆ ಬಿದ್ದ ಆಕೆಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಇದನ್ನೂ ಓದಿ:  ಮಧುಮಗಳಾದ ಬಿಗ್‍ಬಾಸ್ ಖ್ಯಾತಿಯ ಧನುಶ್ರೀ

ಕಾಲೇಜಿನ ಪರೀಕ್ಷೆಗಳು ನಡೆಯುತ್ತಿದ್ದು, ಘಟನೆ ನಡೆದಾಗ ಕೆಲವು ವಿದ್ಯಾರ್ಥಿಗಳು ಮಾತ್ರ ಹೊರಗೆ ಇದ್ದರು. ಉಳಿದವರು ಪರೀಕ್ಷೆ ಬರೆಯುತ್ತಿದ್ದರು ಎನ್ನಲಾಗಿದೆ. ಅಭಿಷೇಕ್ ಪರೀಕ್ಷೆ ಬರೆದು ಬೇಗನೆ ಹೊರಗೆ ಹೋಗಿದ್ದ. ನಿತಿನಾಮೋಲ್ ಹೊರಗೆ ಬರುತ್ತಿದ್ದಂತೆ ಆಕೆಯನ್ನು ಕೊಲೆ ಮಾಡಿದ್ದಾನೆ. ಸೆಕ್ಯುರಿಟಿ ಸಿಬ್ಬಂದಿ ಕೆಳಗೆ ಬಿದ್ದಿದ್ದ ನಿತಿನಾಮೋಲ್‍ಳನ್ನು ಮೊದಲು ನೋಡಿದ್ದು, ಜೋರಾಗಿ ಕಿರುಚಾಡಿದ್ದಾರೆ. ಆಗ ಆಕೆಯ ಸ್ನೇಹಿತರು ಹಾಗೂ ಶಿಕ್ಷಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಳು.

Leave a Reply

Your email address will not be published. Required fields are marked *

Back to top button