ಅಬುಜಾ: ಕಾಲ್ತುಳಿತದಲ್ಲಿ 31 ಜನರು ಸಾವನ್ನಪ್ಪಿರುವ ಘಟನೆ ದಕ್ಷಿಣ ನೈಜೀರಿಯಾದ ಚರ್ಚ್ ಚಾರಿಟಿ ಕಾರ್ಯಕ್ರಮವೊಂದರಲ್ಲಿ ನಡೆದಿದೆ.
ರಿವರ್ಸ್ ಸ್ಟೇಟ್‍ನಲ್ಲಿರುವ ಕಿಂಗ್ಸ್ ಅಸೆಂಬ್ಲಿ ಪೆಂಟೆಕೋಸ್ಟಲ್ ಚರ್ಚ್ ಆಯೋಜಿಸಿದ್ದ ವಾರ್ಷಿಕ ಶಾಪ್ ಫಾರ್ ಫ್ರೀ ಚಾರಿಟಿ ಕಾರ್ಯಕ್ರಮಕ್ಕೆ ಜನರು ಬಂದಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿತ್ತು. ಇದರಿಂದಾಗಿ ಗರ್ಭಿಣಿ ಹಾಗೂ ಹಲವು ಮಕ್ಕಳು ಸೇರಿದಂತೆ 31 ಜನರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೇ ಅನೇಕರಿಗೆ ಗಂಭೀರ ಗಾಯಗಳಾಗಿವೆ.
Advertisement
Advertisement
ದತ್ತಿ ಕಾರ್ಯಕ್ರಮವು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಬೇಕಿತ್ತು. ಆದರೆ ಸರತಿ ಸಾಲಿನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಜನರು ಬೆಳಗ್ಗೆ 5 ಗಂಟೆಗೆ ಜನರು ಆಗಮಿಸಿದ್ದರು. ಇದಾದ ಬಳಿಕ ಗೇಟ್‍ಗೆ ಬೀಗ ಹಾಕಿದ್ದನ್ನು ಒಡೆದು ನೂಕುನುಗ್ಗಲು ಉಂಟಾಯಿತು. ಇದರಿಂದಾಗಿ ಕಾಲ್ತುಳಿತವಾಗಿದೆ. ಇದನ್ನೂ ಓದಿ: ನಾಲ್ಕೈದು ದಿನ ತಿರುಪತಿ ಭೇಟಿಯನ್ನು ಮುಂದೂಡಿ: ಟಿಟಿಡಿ ಮನವಿ
Advertisement
ಸರ್ಕಾರದ ಅಂಕಿಅಂಶಗಳ ಪ್ರಕಾರ 80 ಮಿಲಿಯನ್‍ಗಿಂತಲೂ ಹೆಚ್ಚು ಜನರು ಬಡತನದಲ್ಲಿ ವಾಸಿಸುವ ಆಫ್ರಿಕಾದ ಅತಿದೊಡ್ಡ ಆರ್ಥಿಕತೆಯಾದ ನೈಜೀರಿಯಾದಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿದೆ. ಇದನ್ನೂ ಓದಿ: ವಿದೇಶದಿಂದ 3,500 ರೂ.ಗೆ ಯೂರಿಯಾ ಖರೀದಿಸಿ ರೈತರಿಗೆ 350 ರೂ.ಗೆ ವಿತರಣೆ : ಮೋದಿ
Advertisement
ಕಾಲ್ತುಳಿತದ ನಂತರ ಸಂತ್ರಸ್ತರ ಸಂಬಂಧಿಕರು ಕೆಲವು ಚರ್ಚ್ ಸದಸ್ಯರ ಮೇಲೆ ದಾಳಿ ಮಾಡಿದ್ದಾರೆ. ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಲು ಚರ್ಚ್ ನಿರಾಕರಿಸಿದೆ. ಘಟನೆ ಸಂಬಂಧಿಸಿ ಅಲ್ಲಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.