ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಅರೆಸ್ಟ್ ಆಗಿದ್ದ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ಗೆ (Jani Master) ತೆಲಂಗಾಣ ಹೈಕೋರ್ಟ್ (Telangana High Court) ಇಂದು (ಅ.24) ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ:‘ಅಮರನ್’ ಟ್ರೈಲರ್ ರಿಲೀಸ್- ಮೇಜರ್ ಮುಕುಂದ್ ವರದರಾಜನ್ ಜೀವನಗಾಥೆಯಲ್ಲಿ ಶಿವಕಾರ್ತಿಕೇಯನ್
ಸಹ ಕೊರಿಯೋಗ್ರಾಫರ್ ಮೇಲೆ ಲೈಂಗಿಕ ದೌರ್ಜನ್ಯಎಸಗಿದ ಆರೋಪದ ಮೇಲೆ ಜಾನಿ ಮಾಸ್ಟರ್ ಅವರನ್ನು ಕಳೆದ ತಿಂಗಳು ಸೆಪ್ಟೆಂಬರ್‌ನಲ್ಲಿ ಹೈದರಾಬಾದ್ ಪೊಲೀಸರು ಬಂಧಿಸಿದ್ದರು. ಜಾನಿ ಮಾಸ್ಟರ್ ವಿರುದ್ಧ ಹೈದರಾಬಾದ್‌ನಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಆತ ತನ್ನ ಮೇಲೆ ಅತ್ಯಾಚಾರ ಎಸಗಿ, ಬೆದರಿಕೆ ಹಾಕಿ ದೈಹಿಕ ಹಲ್ಲೆ ನಡೆಸಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಪ್ರಕರಣದ ಸಂಬಂಧ ಇಂದು (ಅ.24) ಜಾನಿ ಮಾಸ್ಟರ್‌ಗೆ ಜಾಮೀನು ಸಿಕ್ಕಿದೆ.
- Advertisement
- Advertisement
ಅಂದಹಾಗೆ, ಪುಷ್ಪ, ಕನ್ನಡದ ಯುವರತ್ನ ಸೇರಿದಂತೆ ಹಲವಾರು ಸಿನಿಮಾಗಳಿಗೆ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಸ್ಟಾರ್ ನಟರ ಸಿನಿಮಾಗಳಿಗೆ ಅವರು ಕೆಲಸ ಮಾಡಿದ್ದಾರೆ.