– 15-20 ದಿನದೊಳಗೆ ಸೈಟ್ ಕ್ಲೀನ್ ಮಾಡಿಸದಿದ್ರೆ 10,000 ರೂ. ದಂಡ
ಚಿತ್ರದುರ್ಗ: ಸೈಟ್ (Site) ಖರೀದಿಸಿ ವರ್ಷಗಟ್ಟಲೆ ಬಿಟ್ಟು ಹೋಗುವ ಮಾಲೀಕರಿಗೆ ಚಿತ್ರದುರ್ಗ ನಗರಸಭೆ (Chitradurga Municipal Council) ಶಾಕ್ ನೀಡಿದೆ. ಸ್ವಚ್ಛತೆಗೆ ಆದ್ಯತೆ ನೀಡಿರುವ ಚಿತ್ರದುರ್ಗ ನಗರಸಭೆ ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಿನೂತನ ಪ್ರಯತ್ನಕ್ಕೆ ಕೈಹಾಕಿದೆ.
ಚಿತ್ರದುರ್ಗ ಮದ್ಯ ಕರ್ನಾಟಕದಲ್ಲಿರುವ ಐತಿಹಾಸಿಕ ಹಿನ್ನೆಲೆಯ ಪ್ರವಾಸಿ ತಾಣ. ಆದರೆ ಇಲ್ಲಿ ಸ್ವಚ್ಛತೆ (Cleanliness) ಮರಿಚಿಕೆಯಾಗಿದೆ. ಅದರಲ್ಲೂ ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಇಲ್ಲದೇ ಪರಿಸರ ನಾಶವಾಗಿದ್ದು, ಪ್ರಮುಖ ರಸ್ತೆಗಳಲ್ಲೇ ದುರ್ನಾಥ ಬೀರುತ್ತಿದೆ. ಹೀಗಾಗಿ ಚಿತ್ರದುರ್ಗ ನಗರಸಭೆ ಪೌರಾಯುಕ್ತರಾದ ರೇಣುಕಾ ನಗರಸಭೆ ವ್ಯಾಪ್ತಿಗೆ ಸೇರಿದ ಸುಮಾರು ಸಾವಿರಾರು ಸೈಟ್ ಮಾಲೀಕರಿಗೆ ನೋಟಿಸ್ ಜಾರಿಮಾಡಿದ್ದಾರೆ. ಇದನ್ನೂ ಓದಿ: ಕಡೆಯ ಕಾರ್ತಿಕ ಸೋಮವಾರ – ಕೋಲಾರದ ಅಂತರಗಂಗೆಗೆ ಭಕ್ತರ ದಂಡು
ನಿವೇಶನ ಕ್ಲೀನ್ ಮಾಡಿಸಿಕೊಳ್ಳಲು 15-20 ದಿನಗಳ ಕಾಲ ಸಮಯ ನೀಡಿ ನೋಟಿಸ್ ನೀಡಿದ್ದಾರೆ. ಒಂದು ವೇಳೆ ನೋಟಿಸ್‌ಗೆ ಮಾಲೀಕರಿಂದ ಪ್ರತಿಕ್ರಿಯೆ ಬಾರದಿದ್ದರೆ ನಗರಸಭೆಯಿಂದಲೇ ಸೈಟ್ ಕ್ಲೀನ್ ಮಾಡಿಸಲಿದ್ದು, ನಿವೇಶನ ಮಾಲೀಕರಿಗೆ 10,000 ರೂ. ದಂಡ ವಿಧಿಸಲಾಗುತ್ತದೆ. ಈ ಕುರಿತು ಅಧಿಕಾರಿಗಳು, ಸೈಟ್ ಬಳಿ ನಗರಸಭೆಯ ನಾಮಫಲಕ ಅಳವಡಿಸುತ್ತಿದ್ದಾರೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂಗಳ ಧ್ವನಿಯಾಗಿದ್ದ ಇಸ್ಕಾನ್‌ನ ಚಿನ್ಮಯ್ ಕೃಷ್ಣ ದಾಸ್ ಅರೆಸ್ಟ್
ಇನ್ನು ಕಡಿಮೆ ಬೆಲೆಗೆ ಸೈಟ್ ಖರೀದಿಸಿ, ಬೇಕಾದಾಗ ಮನೆಕಟ್ಟುವ ಪ್ಲಾನ್ ಮಾಡುವ ಮಾಲೀಕರು, ಆ ನಿವೇಶನವನ್ನು ಸ್ವಚ್ಛತೆ ಕಾಪಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಹೀಗಾಗಿ ಅಕ್ಕಪಕ್ಕದ ಮನೆಯವರಿಗೆ ಅನಾರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಖಾಲಿ ಸೈಟ್‌ನಲ್ಲಿ ಜಾಲಿ ಮರಗಳು, ಕಸ ತುಂಬಿ ಡೆಂಗ್ಯೂ, ಮಲೇರಿಯಾ ಖಾಯಿಲೆ ಹರಡುವ ಭೀತಿ ಶುರುವಾದ ಪರಿಣಾಮ ನಗರಸಭೆ ಅಧಿಕಾರಿಗಳೇ ಸ್ವಚ್ಛತಾ ಕಾರ್ಯಕ್ಕೆ ವಿನೂತನ ಪ್ಲಾನ್ ಮಾಡಿದ್ದು, ನಾಗರೀಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ನಾನೇನು ತಪ್ಪು ಮಾಡಿಲ್ಲ, ಐ ಡೋಂಟ್ ಕೇರ್: ಬೈರತಿ ಸುರೇಶ್
ಇನ್ನು ಚಿತ್ರದುರ್ಗ ನಗರವನ್ನು ಸ್ವಚ್ಛವಾಗಿಡಲು ನಗರಸಭೆ ಅಧಿಕಾರಿಗಳು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ವಿನೂತನ ಪ್ಲಾನ್ ಮಾಡಿರೋದು ಬಹುತೇಕ ವರ್ಕೌಟ್ ಆಗಿದೆ. ನೋಟಿಸ್ ನೀಡಿದ ಬೆನ್ನಲ್ಲೇ ಸೈಟ್‌ಗಳ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ. ಇದನ್ನೂ ಓದಿ: ಸಿಎಂ ಬಂಪರ್ ಗಿಫ್ಟ್ – ಹೆಸ್ಕಾಂ ಅಧ್ಯಕ್ಷರಾಗಿ ಅಜ್ಜಂಪೀರ್ ಖಾದ್ರಿ ನೇಮಕ