ಬೀಜಿಂಗ್: 21 ವರ್ಷದ ಯುವತಿಯೊಬ್ಬಳು ಸತತ 24 ಗಂಟೆ ವಿಡಿಯೋ ಗೇಮ್ ಆಡಿ ಒಂದು ಕಣ್ಣು ಕಳೆದುಕೊಂಡಿರುವ ಘಟನೆ ಭಾನುವಾರದಂದು ಚೀನಾದಲ್ಲಿ ನಡೆದಿದೆ.
ಇಲ್ಲಿನ ಗಾಂಗ್ಡಾಂಗ್ ಪ್ರಾಂತ್ಯದ ಡಾಂಗ್ಯೂನ್ ನಲ್ಲಿರುವ ತನ್ನ ಮನೆಯಲ್ಲಿ ಯುವತಿ ಇಡೀ ದಿನ ಹಾನರ್ ಆಫ್ ಕಿಂಗ್ಸ್ ಎಂಬ ವಿಡಿಯೋ ಗೇಮ್ ಆಡಿ ತನ್ನ ಬಲಗಣ್ಣು ಕಳೆದುಕೊಂಡಿದ್ದಾಳೆ. ನಾನ್ಚಾಂಗ್ನ ಆಸ್ಪತ್ರೆಯಲ್ಲಿ ಯುವತಿಗೆ ಚಿಕಿತ್ಸೆಯನ್ನು ನೀಡಲು ಕರೆದುಕೊಂಡು ಹೋಗಿದ್ದು, ಆಕೆಗೆ ರೆಟಿನಲ್ ಆರ್ಟರಿ ಅಕ್ಲೂಷನ್ ಸಮಸ್ಯೆ ಉಂಟಾಗಿದೆ ಎಂದು ಬುಧವಾರದಂದು ವೈದ್ಯರು ಹೇಳಿದ್ದಾರೆ. ಇದಕ್ಕೂ ಮೊದಲು ನಗರದ ಹಲವಾರು ಆಸ್ಪತ್ರೆಯಲ್ಲಿ ಯುವತಿಯನ್ನು ಚಿಕಿತ್ಸೆ ಕೊಡಿಸಲು ಕರೆದೂಯ್ಯಲಾಗಿತ್ತು. ಆದರೆ ಆಕೆಗೆ ಉಂಟಾಗಿದ್ದ ಸಮಸ್ಯೆ ಬಗ್ಗೆ ಎಲ್ಲೂ ತಿಳಿದುಬಂದಿರಲಿಲ್ಲ.
Advertisement
ರೆಟಿನಲ್ ಆರ್ಟರಿ ಅಕ್ಲೂಷನ್ ಸಾಮಾನ್ಯವಾಗಿ ಹಿರಿಯರಿಗೆ ಬರುತ್ತೆ. ಯುವಕರಲ್ಲಿ ಈ ಸಮಸ್ಯೆ ಕಾಣುವುದು ತುಂಬಾನೇ ಅಪರೂಪ. ಕಣ್ಣಿಗೆ ಸಾಕಷ್ಟು ಒತ್ತಡ ಬಿದಿದ್ದರಿಂದ ಯುವತಿ ತನ್ನ ಕಣ್ಣು ಕಳೆದುಕೊಂಡಿರುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
Advertisement
Advertisement
ಗೇಮ್ಗೆ ಅಡಿಕ್ಟ್ ಆಗಿದ್ದೆ: ಕಣ್ಣು ಕಳೆದುಕೊಂಡಿದ್ದಕ್ಕೆ ಏನು ಕಾರಣ ಎಂದು ಮಾಧ್ಯಮದವರು ಪ್ರಶ್ನೆ ಕೇಳಿದಾಗ, ಬಿಡುವಿಲ್ಲದೆ ಒಂದೇ ಸಮನೆ ಗೇಮ್ ಆಡುತ್ತಿದ್ದೆ. ಹಾಗಾಗಿ ನಾನು ನನ್ನ ಕಣ್ಣು ಕಳೆದುಕೊಂಡಿದ್ದೇನೆ ಎಂದು ಯುವತಿ ಉತ್ತರಿಸಿದ್ದಾಳೆ.
Advertisement
ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರೋ ಯುವತಿ, ಗೇಮ್ಗೆ ತುಂಬಾ ಅಡಿಕ್ಟ್ ಆಗಿದ್ದು, ಕೆಲಸದಿಂದ ಬಂದ ಕೂಡಲೇ ಮತ್ತು ವೀಕೆಂಡ್ಗಳಲ್ಲಿ ಇಡೀ ದಿನ ವಿಡಿಯೋ ಗೇಮ್ ಆಡುತ್ತಿದ್ದೆ ಎಂದು ಹೇಳಿದ್ದಾಳೆ. ನನಗೆ ಕೆಲಸ ಇಲ್ಲದ ಸಮಯದಲ್ಲಿ ಬೆಳಗ್ಗೆ 6 ಗಂಟೆಗೆ ಎದ್ದು ತಿಂಡಿ ತಿಂದು ಸಂಜೆ 4 ಗಂಟೆ ತನಕ ಆಡುತ್ತಿದ್ದೆ. ನಂತರ ಸ್ಯ್ನಾಕ್ಸ್ ತಿಂದು ಮತ್ತೆ ರಾತ್ರಿ 1 ಗಂಟೆ ತನಕ ಆಡುತ್ತಿದ್ದೆ. ಕೆಲವು ಬಾರಿ ಗೇಮ್ ನಲ್ಲಿ ಮುಳುಗಿ ಊಟ ಮಾಡುವುದನ್ನೂ ಮರೆತು ಹೋಗುತ್ತಿದ್ದೆ. ನನ್ನನ್ನು ರಾತ್ರಿ ಊಟಕ್ಕೆ ಕರೆದರೂ ಕಿವಿಗೊಡುತ್ತಿರಲಿಲ್ಲ. ಕೆಲವೊಮ್ಮೆ ಸತತ 7-8 ಗಂಟೆ ತನಕ ಸೋಫಾದಿಂದ ಮೇಲೇಳದೆ ಗೇಮ್ ಆಡುತ್ತಿದ್ದೆ ಎಂದು ಯುವತಿ ಹೇಳಿದ್ದಾಳೆ.
ನನ್ನ ಪೋಷಕರು ಗೇಮ್ ಆಡುವುದನ್ನು ಕಡಿಮೆ ಮಾಡು ಎಂದು ಹೇಳುತ್ತಿದ್ದರು. ಆದರೆ ನಾನು ಅವರ ಮತನ್ನು ಕಡೆಗಣಿಸುತ್ತಿದ್ದೆ ಎಂದು ಯುವತಿ ಪಶ್ಚಾತ್ತಾಪ ಪಟ್ಟಿದ್ದಾಳೆ. ಯುವತಿ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲೇ ಇದ್ದು, ವೈದ್ಯರು ಯುವತಿಯ ಕಣ್ಣು ಉಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯೊಂದರಿಂದ ತಿಳಿದುಬಂದಿದೆ.
ಯಾಕೆ ಈ ಗೇಮ್ ಇಷ್ಟೊಂದು ಫೇಮಸ್?: ಹಾನರ್ ಆಫ್ ಕಿಂಗ್ಸ್ ಒಂದು ಐತಿಹಾಸಿಕ ಯುದ್ಧದ ಗೇಮ್ ಆಗಿದ್ದು, ಚೀನಾದ ಇಂಟರ್ನೆಟ್ ಜೇಂಟ್ ಟೆನ್ಸೆಂಟ್ ಮಾಲೀಕತ್ವದಲ್ಲಿದೆ. ಚೀನಾದ ಮೇನ್ಲ್ಯಾಡ್ವೊಂದರಲ್ಲೇ 20 ಕೋಟಿಯಷ್ಟು ರೆಜಿಸ್ಟರ್ಡ್ ಆಟಗಾರರಿದ್ದಾರೆ. ಈ ಗೇಮ್ ತುಂಬಾ ಅಡಿಕ್ಟೀವ್ ಆಗಿರೋದ್ರಿಂದ ಇದನ್ನ ವಿಷ ಎಂದು ಇಲ್ಲಿನ ಪತ್ರಿಕೆಗಳು ಟೀಕಿಸಿದ್ದವು. ಈ ಗೇಮ್ಗೆ ಸೈನಿಕರು ಕೂಡ ಅಡಿಕ್ಟ್ ಆಗುತ್ತಿದ್ದಾರೆ. ಇದರಿಂದ ಅವರ ಹೋರಾಟ ಸಾಮಥ್ರ್ಯ ಕ್ಷೀಣಿಸೋ ಸಾಧ್ಯತೆಯಿದೆ ಎಂದು ಇಲ್ಲಿನ ಸೇನಾ ಮುಖವಾಣಿ ಪಿಎಲ್ಎ ಡೈಲಿ ಎಚ್ಚರಿಕೆ ನೀಡಿತ್ತು.
ಜುಲೈ ತಿಂಗಳಲ್ಲಿ ಟೆನ್ಸೆಟ್ ಈ ಗೇಮ್ಗೆ ಕೆಲವು ನಿರ್ಬಂಧಗಳನ್ನ ಪರಿಚಯಿಸಿದೆ. 12 ರಿಂದ 18 ವರ್ಷದವರು ದಿನಕ್ಕೆ 2 ಗಂಟೆಗಳ ಕಾಲ ಮಾತ್ರ ಈ ಗೇಮ್ ಆಡಲು ಅವಕಾಶ ನೀಡಲಾಗಿದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ದಿನಕ್ಕೆ 1 ಗಂಟೆ ಅದ್ರಲ್ಲೂ ರಾತ್ರಿ 9 ಗಂಟೆಯೊಳಗೆ ಮಾತ್ರ ಈ ಗೇಮ್ ಆಡಬಹುದು.
ಆನ್ಲೈನ್ ಗೇಮ್ ಆಡುವಾಗ ಕಣ್ಣುಗಳ ಮೇಲೆ ಸಾಕಷ್ಟು ಒತ್ತಡ ಬೀಳುತ್ತದೆ. ಅದಕ್ಕೆ 30 ನಿಮಿಷ ಬ್ರೇಕ್ ತೆಗೆದುಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.