ಲಡಾಕ್: ಭಾರತವನ್ನು ಚೀನಾ ಸೈನಿಕರು ಮತ್ತೆ ಕೆಣಕಿದ್ದಾರೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ 100 ಸೈನಿಕರು ಕುದುರೆ ಮೂಲಕ ಭಾರತದ ಉತ್ತರಾಖಂಡದ ಬಾರಹೋಟಿಗೆ ಪ್ರವೇಶಿಸಿ ಸುಮಾರು 3 ಗಂಟೆ ಕಾಲ ತಂಗಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲೂ ಮತಾಂತರ- ಸೈಟ್ ಆಸೆ ತೋರಿಸಿ ಕೃತ್ಯ, ಸ್ಥಳೀಯರಿಂದ ಆಕ್ರೋಶ
Advertisement
ಭಾರತೀಯ ರಕ್ಷಣಾ ಪಡೆಯ ಸೈನಿಕರು ಇಲ್ಲದೇ ಇರುವ ಹೊತ್ತಿನಲ್ಲಿ ಗಡಿಗೆ ಪ್ರವೇಶಿಸಿದ ಚೀನಾ ಸೇನೆಯು ಕಾಲು ಸೇತುವೆಯನ್ನು ನಾಶಪಡಿಸಿದೆ. ಬಳಿಕ ಅದೇ ವೇಳೆ ಐಟಿಬಿಪಿ ಪಡೆ ಬಂದಾಗ, ಪೀಪಲ್ಸ್ ಲಿಬರೇಶನ್ ಆರ್ಮಿಯ ಸೈನಿಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.
Advertisement
ಈ ವಿಚಾರವಾಗಿ ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್ ಪ್ರತಿಕ್ರಿಯಿಸಿ, ಸರ್ಕಾರಕ್ಕೆ ಈ ರೀತಿ ಘಟನೆ ನಡೆದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಮ್ಯೂಸಿಕ್‍ಗೆ 7ರ ಸಂಭ್ರಮ – 7 ಮಂದಿ ಸಾಧಕರಿಗೆ ಗೌರವ
Advertisement
Advertisement
ಪೂರ್ವ ಲಡಾಕ್‍ನಲ್ಲಿ ಕಿರಿಕ್ ಮಾಡಿದ್ದ ಚೀನಿ ಸೈನಿಕರಿಗೆ ಭಾರತ ಸರಿಯಾಗಿ ತಿರುಗೇಟು ನೀಡಿತ್ತು. ಈ ಘಟನೆಯ ಬಳಿಕ ಎರಡು ದೇಶಗಳು ಗಡಿಗಳಲ್ಲಿ ಭಾರೀ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿತ್ತು. ಹಲವು ಸುತ್ತಿನ ಮಾತುಕತೆಯ ಬಳಿಕ ಎರಡೂ ದೇಶಗಳು ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿದ್ದವು. ಈ ವಿಚಾರ ತಣ್ಣಗಾಗುವ ಸಮಯದಲ್ಲೇ ಮತ್ತೆ ಚೀನಾ ಕಿರಿಕ್ ತೆಗೆದಿದೆ.