ವಾಷಿಂಗ್ಟನ್: ಹಾರ್ಮುಜ್ ಜಲಸಂಧಿ (Strait of Hormuz) ಮೂಲಕ ಹಾದುಹೋಗಲು ಪ್ರಯತ್ನಿಸುತ್ತಿದ್ದ ಚೀನೀ (China) ಸರ್ಕಾರಿ ಸ್ವಾಮ್ಯದ ಎರಡು ಕಂಟೇನರ್ ಹಡಗುಗಳ (Container Ships) ಸಂಚಾರಕ್ಕೆ ಇರಾನ್ (Iran) ಅನುಮತಿ ನೀಡಲು ನಿರಾಕರಿಸಿದೆ.
ಈ ಹಡಗಿನಲ್ಲಿ ಏಷ್ಯಾದಿಂದ ಲೋಡ್ ಮಾಡಲಾಗಿದ್ದ ಸರಕುಗಳನ್ನು ಯುಎಇ, ಸೌದಿ ಅರೇಬಿಯಾ, ಬಹ್ರೇನ್, ಕತಾರ್, ಕುವೈತ್ ಮತ್ತು ಇರಾಕ್‌ಗೆ ಸಾಗಿಸಲಾಗುತ್ತಿತ್ತು.
ಈ ಎರಡು ಹಡಗುಗಳು ಜಲಸಂಧಿಯನ್ನು ದಾಟಲು ಪ್ರಯತ್ನಿಸಿದವು. ಆದರೆ ನಂತರ ಹಿಂತಿರುಗಿದ್ದು ಹಡಗು ಸಂಚಾರದ ರಿಯಲ್ ಟೈಂ ಡೇಟಾ ನೀಡುವ ಕೆಪ್ಲರ್‌ನಲ್ಲಿ ದಾಖಲಾಗಿದೆ. ಇದನ್ನೂ ಓದಿ: ಕೇಂದ್ರದ ನಿರ್ಧಾರದಿಂದ ಇಂದು ಒಂದೇ ದಿನ ರಿಲಯನ್ಸ್ ಮಾರುಕಟ್ಟೆ ಮೌಲ್ಯ 87 ಸಾವಿರ ಕೋಟಿ ಕುಸಿತ
ಈ ಮೊದಲು ತನ್ನ ಸ್ನೇಹಿತ ರಾಷ್ಟ್ರಗಳಾದ ಚೀನಾ, ಭಾರತ, ರಷ್ಯಾ, ಇರಾಕ್, ಪಾಕಿಸ್ತಾನದ ಹಡಗುಗಳ ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದು ಇರಾನ್ ತಿಳಿಸಿತ್ತು. ಆದರೆ ಈಗ ಯಾವ ಕಾರಣಕ್ಕೆ ಈ ಹಡಗುಗಳ ಸಂಚಾರಕ್ಕೆ ಇರಾನ್ ಅನುಮತಿ ನೀಡಿಲ್ಲ ಎನ್ನುವುದು ತಿಳಿದು ಬಂದಿಲ್ಲ. ಇದನ್ನೂ ಓದಿ: `ಆಪರೇಷನ್ ಟ್ರೂ ಪ್ರಾಮಿಸ್-4′ – ಕದನ ವಿರಾಮ ಮಾತುಕತೆ ನಡುವೆ ಹೊಸ ದಾಳಿ ಆರಂಭಿಸಿದ ಇರಾನ್

