ಬೀಜಿಂಗ್: ಚೀನಾದಲ್ಲಿ (China) ಕೊರೊನಾ (Corona) ಪಾಸಿಟಿವ್ ಪ್ರಕರಣಗಳು ಏರಿಕೆ ಯಾಗುತ್ತಿದ್ದಂತೆ ಸರ್ಕಾರ ಕಠಿಣ ನಿಯಮ ಜಾರಿಗೆ ಮುಂದಾಗಿದೆ. ಈಗಾಗಲೇ ವಿದೇಶದಿಂದ ಆಗಮಿಸುವ ಪ್ರಯಾಣಿಕರಿಗೆ ಕ್ವಾರಂಟೈನ್ (Quarantine) ಸಹಿತ ಹಲವು ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ.
Advertisement
ಚೀನಾಗೆ ಆಗಮಿಸುವ ವಿದೇಶಿ ಪ್ರಯಾಣಿಕರನ್ನು 5 ದಿನಗಳ ಕಾಲ ಹೋಟೆಲ್‍ನಲ್ಲಿ ಕ್ವಾರಂಟೈನ್ ಮಾಡಲು ನಿರ್ಧರಿಸಿದೆ. ಇದರೊಂದಿಗೆ ಬೀಜಿಂಗ್‍ನಲ್ಲಿ ಫೈಜರ್ (Pfizer Vaccine) ಲಸಿಕೆ ನೀಡಲು ತೀರ್ಮಾನಿಸಿದೆ. ವಿದೇಶಿ ಪ್ರಯಾಣಿಕರು ಸಹಿತ ಅಲ್ಲಿನ ನಾಗರಿಕರಿಗೆ ರ್‍ಯಾಂಡಮ್ ಟೆಸ್ಟ್ ನಡೆಸಲು ಸರ್ಕಾರ ಮುಂದಾಗಿದೆ. ಇದನ್ನೂ ಓದಿ: ಭೀಕರ ಸುನಾಮಿಗೆ 60 ಮಂದಿ ಬಲಿ – 15 ಸಾವಿರ ವಿಮಾನಗಳ ಸಂಚಾರ ರದ್ದು
Advertisement
Advertisement
ಪೊಲೀಸರು ಕೂಡ ಕೊರೊನಾ ಸೋಂಕಿಗೆ ತುತ್ತಾಗುತ್ತಿರುವುದು ಹೊಸ ತಲೆನೋವು ತಂದಿದೆ. ಈಗಾಗಲೇ ಆಸ್ಪತ್ರೆಗಳೆಲ್ಲ ಸೋಂಕಿತರಿಂದ ತುಂಬಿತುಳುಕುತ್ತಿದ್ದು, ಈಗಾಗಲೇ ದೈನಂದಿನ ಕೊರೊನಾ ವರದಿ ನೀಡುವುದನ್ನು ಚೀನಾ ನಿಲ್ಲಿಸಿದೆ. ಕಳೆದ ಒಂದು ತಿಂಗಳಿಂದ 30 ಕೋಟಿಗೂ ಹೆಚ್ಚು ಜನ ಸೋಂಕಿಗೆ ತುತ್ತಾಗಿದ್ದಾರೆ. ಸೋಂಕಿತರಿಂದ ಆಸ್ಪತ್ರೆಗಳು ಭರ್ತಿಯಾಗಿ ವೈದ್ಯಕೀಯ ವ್ಯವಸ್ಥೆ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ. ಈ ನಡುವೆ ದೇಶದ ಜನ ಕೋವಿಡ್ ಸೋಂಕನ್ನು ಒಂದು ಸಾಮಾನ್ಯ ರೋಗವಾಗಿ ಪರಿಗಣಿಸಿ, ಅದರೊಂದಿಗೆ ಬದುಕು ಕಟ್ಟಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದಾರೆ. ಬೀಜಿಂಗ್ ಹಾಗೂ ಶಾಂಘೈನಲ್ಲಿ ಜನ ಕೊರೊನಾ ಭಯ ತೊರೆದು ಮಾಸ್ಕ್ ಧರಿಸಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಕೋವಿಡ್ ಹಾವಳಿ – ಮೊದಲ ಬಾರಿಗೆ ಕೊರೊನಾ ಬಗ್ಗೆ ಜಿನ್‌ಪಿಂಗ್ ಮಾತು
Advertisement
ಈ ಹಿಂದೆ ಚೀನಾದಲ್ಲಿ ಕೇವಲ ಒಂದು ಪ್ರಕರಣ ದಾಖಲಾದರು ಲಾಕ್‍ಡೌನ್ ಮಾಡಲು ಮುಂದಾಗಿತ್ತು. ಈ ನಿಯಮದ ವಿರುದ್ಧ ಜನ ಆಕ್ರೋಶ ಹೊರ ಹಾಕಿದ ಬಳಿಕ ಈ ನಿಯಮವನ್ನು ಸರ್ಕಾರ ಸಡಿಲಗೊಳಿಸಿತು. ಆ ಬಳಿಕ ಸೋಂಕಿತರ ಸಂಖ್ಯೆ ಏರಿಕೆಕಂಡಿತ್ತು.