ಬೀಜಿಂಗ್: ಚೀನಾದಲ್ಲಿ ಮತ್ತೆ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಒಂದು ವರ್ಷದ ಬಳಿಕ ಒಂದೇ ದಿನ ಇಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಕೊರೊನಾ ಮೊಟ್ಟಮೊದಲಿಗೆ ಹುಟ್ಟಿದ ದೇಶವಾದ ಚೀನಾದಲ್ಲಿ ಮತ್ತೆ ಕೊರೊನಾ ಅಲೆ ಎದ್ದಿದ್ದು, ಈ ಬಾರಿ ಜಾಸ್ತಿ ಪ್ರಮಾಣದಲ್ಲಿಯೇ ತೊಂದರೆಕೊಡುತ್ತಿದೆ. ಕೊರೊನಾ ವೈರಸ್‍ನಿಂದ ಇಂದು ಇಬ್ಬರು ಮೃತಪಟ್ಟಿದ್ದು, 2021ರ ಜನವರಿಯ ಬಳಿಕ ಇದೇ ಮೊದಲ ಬಾರಿಗೆ ಒಂದೇ ದಿನ ಇಬ್ಬರು ಕೊರೊನಾದಿಂದ ಸಾವನ್ನಪಿದ್ದಾರೆ.
Advertisement
ಚೀನಾದಲ್ಲಿ ಇಂದು ಕೊಟ್ಟು 2157 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಅದರಲ್ಲಿ ಅತ್ಯಂತ ಹೆಚ್ಚು ಸೋಂಕಿತರು ಇರುವುದು ಜಿಲಿನ್ ಪ್ರಾಂತ್ಯದಲ್ಲಿ. ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚೀನಾದ ಹಲವು ಕಡೆಗಳಲ್ಲಿ ಲಾಕ್‍ಡೌನ್, ಸೀಲ್‍ಡೌನ್‍ಗಳನ್ನು ಮಾಡಲಾಗಿದೆ. ಅಷ್ಟೇ ಅಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನಿಬರ್ಂಧ, ಹೊರ ಜಗತ್ತಿನೊಂದಿಗೆ ಸಂಪರ್ಕ ಕಡಿತದಂಥ ಕ್ರಮಗಳಲ್ಲಿ ಯಾವುದೇ ಸಡಿಲಿಕೆ ಇಲ್ಲ ಎಂದೂ ಸ್ಪಷ್ಟಪಡಿಸಿದೆ. ಇದೀಗ ಕೊರೊನಾದಿಂದ ಮೃತಪಟ್ಟ ಇಬ್ಬರೂ ಜಿಲಿನ್ ಪ್ರಾಂತ್ಯದವರೇ ಆಗಿದ್ದು, ಒಟ್ಟಾರೆ ಸಾವಿನ ಸಂಖ್ಯೆ 4,638ಕ್ಕೆ ಏರಿಕೆಯಾಗಿದೆ.
Advertisement
ಕೊರೊನಾ ಸೋಂಕಿತರ ಪ್ರಮಾಣ ಸ್ವಲ್ಪ ಇಳಿಮುಖವಾಗುತ್ತಿದೆ ಎನ್ನುವಾಗಲೇ ಹಲವು ರಾಷ್ಟ್ರಗಳಲ್ಲಿ ಸೋಂಕಿನ ಅಬ್ಬರ ಹೆಚ್ಚಾಗುತ್ತಿದೆ. ಚೀನಾ, ದಕ್ಷಿಣ ಕೊರಿಯಾ, ಸಿಂಗಾಪುರ, ಯುಕೆ, ಯುಎಸ್‍ಗಳಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಒಮಿಕ್ರಾನ್ ರೂಪಾಂತರಿ ವೈರಸ್‌ನಿಂದಲೇ ಕೊರೊನಾ ಹೆಚ್ಚಾಗುತ್ತಿದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂ ದೇಗುಲದ ಮೇಲೆ ದಾಳಿ
Advertisement
ಕೊರೊನಾ ಲಾಕ್‍ಡೌನ್: ಚೀನಾ ಕೊವಿಡ್ 19 ನಿಯಂತ್ರಕ್ಕಾಗಿ ಶೂನ್ಯ ಕೊರೊನಾ ತಂತ್ರ ರೂಪಿಸಿದೆ. ಸಾಮೂಹಿಕ ತಪಾಸಣೆ, ಕಟ್ಟುನಿಟ್ಟಿನ ಲಾಕ್‍ಡೌನ್ ಮತ್ತಿತರ ನಿಯಮಗಳನ್ನು ಈ ಶೂನ್ಯ ಕೊರೊನಾ ಕಾರ್ಯತಂತ್ರ ಒಳಗೊಂಡಿದೆ. ಲಾಕ್‍ಡೌನ್ ಅದೆಷ್ಟು ಕಠಿಣವಾಗಿರುತ್ತದೆಯೆಂದರೆ, ಜನರು ಮನೆ ಬಿಟ್ಟು ಹೊರಗಡೆ ಬರುವಂತೆಯೇ ಇರುವುದಿಲ್ಲ. ಈ ನೀತಿ ಸ್ವಲ್ಪ ಮಟ್ಟಿಗೆ ಟೀಕೆಗೆ ಒಳಗಾಗಿದ್ದರೂ ಚೀನಾ ಮಾತ್ರ ಅದನ್ನು ಸಡಿಲಿಕೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿಬಿಟ್ಟಿದೆ. ಇದನ್ನೂ ಓದಿ: ಸೋಮವಾರ ಬೆಳಗ್ಗೆ 9.30ಕ್ಕೆ ಮೃತದೇಹ ಮನೆಗೆ ಬರಲಿದೆ: ನವೀನ್ ತಂದೆ