CrimeInternationalLatestMain Post

ಬಾಂಗ್ಲಾದಲ್ಲಿ ಹಿಂದೂ ದೇಗುಲದ ಮೇಲೆ ದಾಳಿ

Advertisements

ಢಾಕಾ: ಇಸ್ಕಾನ್ ದೇಗುಲದ ಮೇಲೆ 200 ಜನರು ಗುಂಪೊಂದು ಏಕಾಏಕಿ ದಾಳಿ ಮಾಡಿದ್ದಾರೆ. ದೇವಾಲಯದ ವಸ್ತುಗಳನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ.

ಹಿಂದೂ ದೇವಾಲಯದ ಮೇಲೆ ಬರೋಬ್ಬರಿ 200 ಜನರು ಗುಂಪೊಂದು ದಾಳಿ ಮಾಡಿದೆ. ದೇವಾಲದಲ್ಲಿ ಬೆಲೆ ಬಾಳುವ ವಸ್ತುಗಳನ್ನು ಲೂಟಿ ಮಾಡಿದ್ದಲ್ಲದೆ ಅರ್ಚಕರ ಮೇಲೆ ಮನಬಂದಂತೆ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾರೆ. ಇದನ್ನೂ ಓದಿ: ನವೀನ್ ಮೃತದೇಹ ಮೆಡಿಕಲ್ ಕಾಲೇಜಿಗೆ ದಾನಮಾಡಲು ಕುಟುಂಬಸ್ಥರ ನಿರ್ಧಾರ

ಮೂಲಗಳ ಪ್ರಕಾರ, ಬಾಂಗ್ಲಾ ಮೂಲದ ಹಾಜೀ ಶಫೀವುಲ್ಲಾ ನೇತೃತ್ವದಲ್ಲಿ ಇನಸ್ಕಾನ್ ದೇಗುಲ ಮೇಲೆ ಅಟ್ಯಾಕ್ ಮಾಡಲಾಗಿದೆ. ಕಳೆದ ರಾತ್ರಿ 8 ಗಂಟೆ ಸುಮಾರಿಗೆ ಇಸ್ಕಾನ್‍ನಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿತ್ತು. ಈ ವೇಳೆ ಏಕಾಏಕಿ ನುದ್ದಿದ 200 ಜನರ ಗುಂಪು ದಾಳಿ ಮಾಡಿದೆ. ದೇವಾಲಯದಲ್ಲಿರುವ ಬೆಳ್ಳಿ ದೀಪ ಹಾಗೂ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಇಸ್ಕಾನ್ ದೇಗುಲದ ಅರ್ಚಕರು ಮತ್ತು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.

ಈ ದಾಳಿಯಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭಾರತದ ಇಸ್ಕಾನ್ ಉಪಾಧ್ಯಕ್ಷ ರಾಧಾರಮಣ್ ದಾಸ್ ದಾಳಿಯನ್ನು ತೀತ್ರ ಖಂಡಿಸಿದ್ದಾರೆ. ಪಕ್ಕದ ದೇಶದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ ಎಂದು ಆರೋಪ ಮಾಡಿದ್ದಾರೆ. ಸದ್ಯ ಈ ದಾಳಿಯಲ್ಲಿ ಯಾರ ಕೈವಾಡ ಇದೆ ಅನ್ನೋ ಬಗ್ಗೆ ಬಾಂಗ್ಲಾ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published.

Back to top button