ವಾಷಿಂಗ್ಟನ್: ರಷ್ಯಾ 1 ತಿಂಗಳ ಹಿಂದೆಯೇ ಉಕ್ರೇನ್ ಮೇಲೆ ಯುದ್ಧ ಸಾರಲು ಯೋಜಿಸಿತ್ತು. ಆದರೆ ಚಳಿಗಾಲದ ಒಲಿಂಪಿಕ್ಸ್ ಮುಗಿಯುವವರೆಗೆ ಯುದ್ಧವನ್ನು ಮುಂದೂಡುವಂತೆ ಚೀನಾ ರಷ್ಯಾಗೆ ಮನವಿ ಮಾಡಿತ್ತು ಎಂಬ ವಿಚಾರವನ್ನು ಅಮೆರಿಕದ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ.
ಫೆಬ್ರವರಿ ಫ್ರಾರಂಭದಲ್ಲಿಯೇ ಚೀನಾ ರಷ್ಯಾದ ಅಧಿಕಾರಿಗಳಿಗೆ ಚಳಿಗಾಲದ ಒಲಿಂಪಿಕ್ಸ್ ಮುಕ್ತಾಯವಾಗುವವರೆಗೆ ಯುದ್ಧ ಪ್ರಾರಂಭಿಸಬಾರದೆಂದು ಮನವಿ ಮಾಡಿದ್ದಾಗಿ ವರದಿ ಹೇಳಿದೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಭಾರತೀಯರು ಸಿಲುಕಿರುವಾಗ, ಮೋದಿ ಯುಪಿ ಚುನಾವಣಾ ಸಭೆಗಳಲ್ಲಿ ನಿರತರಾಗಿದ್ದಾರೆ: ಮಮತಾ ಬ್ಯಾನರ್ಜಿ ಕಿಡಿ
Advertisement
Advertisement
ಕಳೆದ ವಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್ ಮೇಲೆ ಯುದ್ಧ ಘೋಷಿಸುವುದಕ್ಕೂ ಮೊದಲು ಚೀನಾದ ಅಧಿಕಾರಿಗಳಿಗೆ ರಷ್ಯಾದ ಯೋಜನೆ ಹಾಗೂ ಉದ್ದೇಶಗಳ ಬಗ್ಗೆ ತಿಳಿದಿತ್ತು ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಇದನ್ನೂ ಓದಿ: ರಷ್ಯಾ ಆಯ್ತು ಭಾರತದ ಮೇಲೆ ನಿರ್ಬಂಧ ಹೇರುತ್ತಾ ಅಮೆರಿಕ?
Advertisement
ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರುವ ಬಗ್ಗೆ ಮೊದಲೇ ಸುಳಿವು ಪಡೆದಿದ್ದ ಚೀನಾ ಯುದ್ಧವನ್ನು ಮುಂದೆ ಹಾಕುವಂತೆ ಮನವಿ ಮಾಡಿತ್ತು. ಆದರೆ ಈ ಬಗ್ಗೆ ಚೀನಾ ಎಲ್ಲಿಯೂ ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ ಎಂಬುದಾಗಿ ವರದಿಗಳು ತಿಳಿಸಿವೆ.