ಭೋಪಾಲ್: ಮದುವೆ (Marriage) ಮನೆಗೆ ಅತಿಥಿಗಳನ್ನು ಹೊತ್ತು ಸಾಗುತ್ತಿದ್ದ ಟ್ರಕ್ ಒಂದು ನದಿಗೆ ಉರುಳಿದ ಪರಿಣಾಮ ಮೂವರು ಮಕ್ಕಳು ಸೇರಿ ಐವರು ದಾರುಣವಾಗಿ ಮೃತಪಟ್ಟ ಘಟನೆ ಮಧ್ರಪ್ರದೇಶ (Madhyapradesh Truck Overturned) ದ ದಾಟಿಯಾ ಜಿಲ್ಲೆಯಲ್ಲಿ ನಡೆದಿದೆ.
ಮೃತರೆಲ್ಲರೂ ಗ್ವಾಲಿಯರ್‍ನ ಬಿಲ್ಹೆಟಿ ಗ್ರಾಮದವರಾಗಿದ್ದು, ಇವರೆಲ್ಲರೂ ಟಿಕಮ್ಗರ್ ನಲ್ಲಿ ನಡೆಯುತ್ತಿದ್ದ ಮಗಳ ಮದುವೆಗೆ ತೆರಳುತ್ತಿದ್ದರು. ಘಟನೆಯಲ್ಲಿ ಸುಮರು 24 ಮಂದಿ ಗಾಯಗೊಂಡಿದ್ದು, ಹಲವು ಮಕ್ಕಳು ನಾಪತ್ತೆಯಾಗಿದ್ದಾರೆ ಎಂಬುದಾಗಿ ವರದಿಯಗಿದೆ. ಇದನ್ನೂ ಓದಿ: ಅಂತರ್ಜಾತಿ ಪ್ರೇಮ – ಮಗಳ ಕತ್ತು ಹಿಸುಕಿ ಕೊಂದ ತಂದೆ
ಈ ಸಂಬಂಧ ಮಧ್ಯಪ್ರದೇಶದ ಗೃಹಸಚಿವ ನರೋತ್ತಮ್ ಮಿಶ್ರಾ ಮಾತನಾಡಿ, ಬುಹಾರಾ ಗ್ರಾಮದಲ್ಲಿರುವ ನದಿಯ ಹತ್ತಿರ ಬರುತ್ತಿದ್ದಂತೆಯೇ ಟ್ರಕ್ ಚಕ್ರಗಳು ಜಾರಿ ನದಿಗೆ ಉರುಳಿದೆ. ಪರಿಣಾಮ 2 ಹಾಗೂ ಮೂರು ವರ್ಷದ ಮಕ್ಕಳು ಸೇರಿ 65 ವರ್ಷದ ಮಹಿಳೆ ಮತ್ತು 18 ವರ್ಷದ ಹುಡುಗನೊಬ್ಬ ಮೃತಪಟ್ಟಿದ್ದಾನೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]