ಚಿಕ್ಕಮಗಳೂರು: ಚನ್ನಪಟ್ಟಣದ ಪರಾಜಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರಿಗೆ ಕಡೂರಿನ ಅಭಿಮಾನಿಯೊಬ್ಬರು ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ್ದಾರೆ.
ಕಡೂರು ಮೂಲದ ಹರ್ಷಿತ್ ಎಂಬವರು ಪತ್ರ ಬರೆದಿದ್ದಾರೆ. ಪತ್ರದಲ್ಲಿ, ನೀವು ಸೋತಿರಬಹುದು, ಆದರೆ ಜನರ ಮನಸ್ಸಿನಲ್ಲಿದ್ದೀರಿ ಎಂದಿದ್ದಾರೆ. ಎಷ್ಟೋ ನಮ್ಮಂತಹ ನಿಷ್ಠಾವಂತ ಕಾರ್ಯಕರ್ತರಲ್ಲಿ ನಮ್ಮ ಪಕ್ಷದ ಉಸಿರಿದೆ. ಒಂದಲ್ಲ ಒಂದು ದಿನ ಒಳ್ಳೆತನ ಗೆದ್ದೆ ಗೆಲ್ಲಲಿದೆ ಎಂದು ಉಲ್ಲೇಖಿಸಿದ್ದಾರೆ.
ನಿಮ್ಮ ಜೊತೆ ನಾವಿದ್ದೇವೆ ದೈರ್ಯವಾಗಿರಿ. ಜೆಡಿಎಸ್ (JDS) ಎಂದು ರಕ್ತದಲ್ಲಿ ಬರೆದಿದ್ದಾರೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ನಿಂದ ಸಿ.ಪಿ ಯೋಗೇಶ್ವರ್ 1,12,642 ಮತಗಳನ್ನು ಪಡೆದು ಗೆಲವು ಪಡೆದಿದ್ದರು. ಎನ್‌ಡಿಎ ಅಭ್ಯರ್ಥಿ ನಿಖಿಲ್ 87,229 ಮತ ಪಡೆದು ಸೋತಿದ್ದರು.