ಚಿಕ್ಕಮಗಳೂರು: ವೀಕ್ ಎಂಡ್ ಹಾಗೂ ಹೊಸ ವರ್ಷದ (New Year 2025) ಹಿನ್ನೆಲೆ ಕಾಫಿನಾಡಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದರಿಂದ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳು ಬಹುತೇಕ ಬುಕ್ ಆಗಿವೆ.
ಚಿಕ್ಕಮಗಳೂರು (Chikkamagaluru), ಶೃಂಗೇರಿ (Sringeri), ಕೊಪ್ಪ ಎನ್ಆರ್ ಪುರ, ಮೂಡಿಗೆರೆ ಹಾಗೂ ಕಳಸ ತಾಲೂಕಿನಲ್ಲಿ ಅಧಿಕೃತ ಹಾಗೂ ಅನಧಿಕೃತ ಸೇರಿ ಒಟ್ಟು 1,200ಕ್ಕೂ ಅಧಿಕ ಹೋಂ ಸ್ಟೇಗಳಿವೆ. ಅಲ್ಲದೇ 20ಕ್ಕೂ ಹೆಚ್ಚು (Resort) ರೆಸಾರ್ಟ್‌ಗಳಿವೆ. ಆದರೆ, ವೀಕ್ ಎಂಡ್ ಹಾಗೂ ಹೊಸ ವರ್ಷ ಆಚರಣೆಯ ಹಿನ್ನೆಲೆ ಜಿಲ್ಲೆಯ ಬಹುತೇಕ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳು ಬುಕ್ ಆಗಿವೆ.
Advertisement
Advertisement
ಪ್ರವಾಸಿಗರು ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರಿಗೆ ಫೋನ್ ಮಾಡಿ ಬುಕಿಂಗ್ ಕೇಳುತ್ತಿದ್ದಾರೆ. ಆದರೆ, ಹೊಸದಾಗಿ ಬುಕ್ ಮಾಡಲು ಪ್ರಯತ್ನಿಸುತ್ತಿರುವ ಪ್ರವಾಸಿಗರಿಗೆ ರೂಮ್ ಸಿಗುತ್ತಿಲ್ಲ. 15 ದಿನಗಳ ಮೊದಲೇ ರೂಮ್ ಬುಕಿಂಗ್ ಆರಂಭವಾಗಿದ್ದು, ಕೆಲವರು ತಿಂಗಳ ಹಿಂದೆಯೇ ಬುಕ್ ಮಾಡಿದ್ದಾರೆ. ಹಾಗಾಗಿ, ಡಿ.30 ಹಾಗೂ 31 ರಂದು ರೂಮ್ ಬುಕ್ ಮಾಡೋಣ ಎಂದುಕೊಂಡಿದ್ದ ಪ್ರವಾಸಿಗರಿಗೆ ನಿರಾಸೆ ಉಂಟಾಗಿದೆ. ಹೋಂ ಸ್ಟೇ ಮಾಲೀಕರಿಗೆ ಫೋನ್ ಮಾಡುವ ಪ್ರವಾಸಿಗರು ಅಕ್ಕಪಕ್ಕದ ಹೋಂ ಸ್ಟೇಗಳಲ್ಲಿ ರೂಮ್ ಇದ್ದರೆ ಕೊಡಿಸಿ ಎಂದು ದುಂಬಾಲು ಬಿದ್ದಿದ್ದಾರೆ. ಆದರೆ, ಯಾವ ಹೋಂ ಸ್ಟೇಗಳಲ್ಲೂ ರೂಮ್ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಕೆಲ ಪ್ರವಾಸಿಗರು ಹೆಚ್ಚಿನ ಹಣ ಕೊಡ್ತೀವಿ ಎಂದರೂ ಕೂಡ ಕಾಫಿನಾಡ ಹೋಂ ಸ್ಟೇ, ರೆಸಾರ್ಟ್ ಹಾಗೂ ಲಾಡ್ಜ್‌ಗಳಲ್ಲಿ ರೂಮ್ ಇಲ್ಲದಂತಾಗಿದೆ.
Advertisement
Advertisement
ವೀಕೆಂಡ್ ಹಿನ್ನೆಲೆ ಚಿಕ್ಕಮಗಳೂರಿಗೆ ಬಂದಿರುವ ಪ್ರವಾಸಿಗರು ಮತ್ತೆರಡು ದಿನ ರೂಮ್ ಬುಕ್ ಮಾಡಿ ಹೊಸ ವರ್ಷವನ್ನು ಚಿಕ್ಕಮಗಳೂರಿನಲ್ಲಿ ಸ್ವಾಗತ ಕೋರೋದಕ್ಕೆ ಸಜ್ಜಾಗಿದ್ದಾರೆ. ಹೋಂ ಸ್ಟೇ ಮಾಲೀಕರು ಕೂಡ ಪ್ರವಾಸಿಗರನ್ನ ಆಕರ್ಷಿಸಲು ಹೋಂ ಸ್ಟೇಗಳಿಗೆ ನವಧುವಿನಂತೆ ಸಿಂಗಾರ ಮಾಡಿದ್ದಾರೆ. ಸುಣ್ಣ ಬಣ್ಣ ಬಳಿದು, ಬಣ್ಣ ಬಣ್ಣದ ದೀಪಾಲಂಕಾರ ಮಾಡಿದ್ದಾರೆ.