ಬೆಂಗಳೂರು: ಕೆಎಂಎಫ್ (KMF) ಜನರಿಗೆ ಶಾಕ್ ಕೊಟ್ಟ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ(BASAVARAJ Bommai) ದರ ಏರಿಕೆ ಆದೇಶಕ್ಕೆ ತಡೆ ನೀಡಿದ್ದಾರೆ.
Advertisement
ಇಂದಿನಿಂದ ನಂದಿನಿ ಹಾಲಿನ ದರವನ್ನು ಮೂರು ರೂಪಾಯಿಯಷ್ಟು ಹೆಚ್ಚಳ ಮಾಡಲು ಕೆಎಂಎಫ್ ಮುಂದಾಗಿತ್ತು. ಈ ಮೂರು ರೂಪಾಯಿಯನ್ನು ರೈತರಿಗೆ ವರ್ಗಾಯಿಸಲು ಕೆಎಂಎಫ್ ಹೇಳಿತ್ತು. ಆದ್ರೆ.. ಈ ಬಗ್ಗೆ ವರದಿ ಪ್ರಸಾರ ಆಗುತ್ತಲೇ ನಂದಿನಿ ಹಾಲು (Nandini Milk) ಮೊಸರಿನ ರೇಟ್ ಸದ್ಯಕ್ಕೆ ಹೆಚ್ಚಳ ಮಾಡ್ತಿಲ್ಲ. ಇದೇ 20ಕ್ಕೆ ಸಭೆ ನಡೆಸಿ ತೀರ್ಮಾನ ಮಾಡ್ತೀವಿ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
Advertisement
Advertisement
ಸದ್ಯ ದರ ಏರಿಕೆ ಆದೇಶವನ್ನು ಕೆಎಂಎಫ್ ಹಿಂಪಡೆದಿದೆ. ಇನ್ನು ಚುನಾವಣೆ ಹತ್ತಿರವಾಗ್ತಿದ್ದಂತೆ ಬೆಲೆ ಏರಿಕೆ ಮಾಡಿದರೆ ಚುನಾವಣೆಯಲ್ಲಿ ಹೊಡೆತ ಬೀಳಬಹುದು ಎಂದು ಸಿಎಂ ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ ಎನ್ನಲಾಗ್ತಿದೆ. ಇದನ್ನೂ ಓದಿ: ಕಲ್ಲು ಕ್ವಾರಿ ಕುಸಿತ – 8ಕ್ಕೇರಿದ ಸಾವಿನ ಸಂಖ್ಯೆ, ನಾಲ್ವರಿಗಾಗಿ ಹುಡುಕಾಟ