LatestMain PostNational

ಕಲ್ಲು ಕ್ವಾರಿ ಕುಸಿತ – 8ಕ್ಕೇರಿದ ಸಾವಿನ ಸಂಖ್ಯೆ, ನಾಲ್ವರಿಗಾಗಿ ಹುಡುಕಾಟ

ಐಜ್ವಾಲ್: ಮಿಜೋರಾಂನಲ್ಲಿ ಸೋಮವಾರ ಕಲ್ಲು ಕ್ವಾರಿಯೊಂದು ಕುಸಿದು ಬಿದ್ದ ಪರಿಣಾಮ ಹಲವು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದರು. ಬಳಿಕ ರಕ್ಷಣಾ ತಂಡ ಕಾರ್ಯಾಚರಣೆ ನಡೆಸಿ, ಮಂಗಳವಾರ ಬಿಹಾರದ 8 ಕಾರ್ಮಿಕರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಇನ್ನೂ 4 ಕಾರ್ಮಿಕರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಸೋಮವಾರ ಮಿಜೋರಾಂನ ಹ್ನಾಥಿಯಾಲ್ ಗ್ರಾಮದ ಬಳಿ ಇದ್ದ ಕಲ್ಲು ಕ್ವಾರಿ ಕುಸಿದು ಬಿದ್ದಿದೆ. ಇದರ ಪರಿಣಾಮ 12 ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದರು.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅವರ ಗುರುತು ಪತ್ತೆಹಚ್ಚಲಾಗುತ್ತಿದೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಅವರ ಪತ್ತೆಯಾಗುವವರೆಗೂ ಶೋಧ ಮುಂದುವರಿಸಲಾಗುವುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಿಳಿಸಿದೆ. ಇದನ್ನೂ ಓದಿ: ಬೇಕಂತಲೇ ಕಾರಿಗೆ ಡಿಕ್ಕಿ- ಓವರ್ ಟೇಕ್ ಮಾಡಿ ಸಾರಿ ಕೇಳುವ ನೆಪದಲ್ಲಿ ದೋಚಿ ಎಸ್ಕೇಪ್

ಮೂಲಗಳ ಪ್ರಕಾರ, ಹ್ನಾಥಿಯಾಲ್ ಜಿಲ್ಲೆಯ ಮೌದರ್ಹ್‌ನಲ್ಲಿರುವ ಖಾಸಗಿ ಕಂಪನಿಯ ಕಾರ್ಮಿಕರು ತಮ್ಮ ಊಟದ ವಿರಾಮದ ಬಳಿಕ ಕಲ್ಲು ಕ್ವಾರಿ ಬಳಿಗೆ ಮರಳಿದ್ದರು. ಈ ವೇಳೆ ಏಕಾಏಕಿ ಕಲ್ಲು ಕ್ವಾರಿ ಕುಸಿತಗೊಂಡಿದೆ. ಕಾರ್ಮಿಕರೊಂದಿಗೆ 5 ಹಿಟಾಚಿ ಅಗೆಯುವ ಯಂತ್ರಗಳು ಮತ್ತು ಇತರ ಡ್ರಿಲ್ಲಿಂಗ್ ಯಂತ್ರಗಳು ಮಣ್ಣಿನಡಿ ಹೂತುಹೋಗಿವೆ.

ತಕ್ಷಣ ಲೀಟ್ ಗ್ರಾಮ ಮತ್ತು ಹ್ನಾಥಿಯಾಲ್ ಪಟ್ಟಣದ ಸ್ವಯಂಸೇವಕರು ರಕ್ಷಣಾ ಕಾರ್ಯಾಚರಣೆಗೆ ಸ್ಥಳಕ್ಕೆ ಧಾವಿಸಿದರು. ರಾಜ್ಯ ವಿಪತ್ತು ನಿರ್ವಹಣಾ ಪಡೆ, ಗಡಿ ಭದ್ರತಾ ಪಡೆ ಮತ್ತು ಅಸ್ಸಾಂ ರೈಫಲ್ಸ್ ಸಹ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡುತ್ತಿದೆ. ಇದನ್ನೂ ಓದಿ: ನೀಟ್‍ನಲ್ಲಿ ರ‍್ಯಾಂಕ್ ಗಳಿಸಿದ ಕೊಪ್ಪಳ ಪ್ರತಿಭಾವಂತನಿಗೆ ಬೇಕಿದೆ ಸಹಾಯ ಹಸ್ತ

Live Tv

Leave a Reply

Your email address will not be published. Required fields are marked *

Back to top button