ಜೈಪುರ: ರಾಜಸ್ಥಾನ (Rajasthan) ಸಿಎಂ ಅಶೋಕ್ ಗೆಹ್ಲೋಟ್ (Ashok Gehlot) ಶುಕ್ರವಾರ 19 ಹೊಸ ಜಿಲ್ಲೆಗಳನ್ನು ರಚಿಸಿರುವುದಾಗಿ ಘೋಷಣೆ ಮಾಡಿದ್ದಾರೆ.
ಶುಕ್ರವಾರ ರಾಜಸ್ಥಾನದ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ (Budget Session) ಹೊಸ ಜಿಲ್ಲೆಗಳು ಮತ್ತು ವಿಭಾಗಗಳ ರಚನೆಯನ್ನು ಘೋಷಿಸಿದ್ದಾರೆ. ಇದನ್ನೂ ಓದಿ: 130 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಅಂತಿಮ – ಮುಸ್ಲಿಮರಿಗೆ ಕಡಿಮೆ ಟಿಕೆಟ್ ಸಾಧ್ಯತೆ
Advertisement
#WATCH | Rajasthan CM Ashok Gehlot announces the formation of new districts in the state; says, “…With the formation of 19 new districts, the state now has a total of 50 districts.” pic.twitter.com/Fq7XQWdLYO
— ANI (@ANI) March 17, 2023
Advertisement
ಹೊಸ ಜಿಲ್ಲೆಗಳು ಯಾವುವು?
ಅನೂಪ್‌ಗಢ, ಬಲೋತ್ರಾ, ಬೇವಾರ್, ದೀಗ್, ದಿದ್ವಾನಾ-ಕುಚಮನ್ ನಗರ, ದುಡು, ಗಂಗಾಪುರ ನಗರ, ಜೈಪುರ ಉತ್ತರ, ಜೈಪುರ ದಕ್ಷಿಣ, ಜೋಧ್‌ಪುರ ಪೂರ್ವ, ಜೋಧ್‌ಪುರ ಪಶ್ಚಿಮ, ಕೇಕ್ರಿ, ಕೊಟ್‌ಪುಟ್ಲಿ, ಖೈರ್ತಾಲ್, ನೀಮ್ಕಥಾನ, ಫಲೋಡಿ, ಸಾಲುಂಬರ್, ಸಂಚೋರ್, ಶಹಪುರ (ಭಿಲ್ವಾರ) ಹೊಸ ಜಿಲ್ಲೆಗಳಾಗಿವೆ. ಇದನ್ನೂ ಓದಿ: ನನ್ನ ದೇಹ ಮಾರಿ ಕೋಟಿಗಟ್ಟಲೆ ಸಂಪಾದಿಸಿದ್ರು, ನನಗೆ ನ್ಯಾಯ ಕೊಡಿಸಿ – ಪೊಲೀಸರ ಮೊರೆಹೋದ ಸಂತ್ರಸ್ತೆ
Advertisement
Advertisement
ಈ ಹೊಸ 19 ಜಿಲ್ಲೆಗಳೊಂದಿಗೆ ರಾಜಸ್ಥಾನದ ಒಟ್ಟು ಜಿಲ್ಲೆಗಳ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಬನ್‌ಸ್ವಾರಾ, ಪಾಕಿ ಹಾಗೂ ಸಿಕಾರ ಮೂರು ಹೊಸ ವಿಭಾಗಗಳನ್ನು ಗುರುತಿಸಲಾಗಿದ್ದು, ರಾಜ್ಯದ ಒಟ್ಟು ವಿಭಾಗಗಳ ಸಂಖ್ಯೆ 10 ಕ್ಕೆ ಏರಿಕೆಯಾಗಿದೆ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.